Goat unit subsidy : ಕುರಿ, ಮೇಕೆ ಸಾಕಾಣಿಕೆಯಲ್ಲಿ ಆಸಕ್ತಿಯಿರುವ ರೈತರಿಗೆ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ 20 +1 ಕುರಿ ಅಥವಾ ಮೇಕೆಗಳ ಘಟಕ ಸ್ಥಾಪನಗೆ 43 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ ಕುರಿ ಮತ್ತುಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಕುರಿಗಾಹಿ ಸದಸ್ಯರಿಗೆ ಕುರಿ ಅಥವಾ ಮೇಕೆ ಘಟಕ ಸ್ಥಾಪನೆಗೆ 1,75,000 ರೂಪಾಯಿಗಳ ವೆಚ್ಚದಲ್ಲಿ ಸಬ್ಸಿಡಿ ನೀಡಲಾಗುವುದು.
ರಾಜ್ಯದಲ್ಲಿನ ಕುರಿಗಾಹಿಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು ಮತ್ತು ರಾಜ್ಯದಲ್ಲಿ ಸಮಗ್ರವಾಗಿ ಕುರಿ ಮೇಕೆ ಅಭಿವೃದ್ಧಿಗೊಳಿಸುವ ಯೋಜನೆ ಇದಾಗಿದೆ. ಈ ಯೋಜನೆಯನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಕರ್ನಾಟಕ ಸಹಕಾರ ಕುರಿ ಮತ್ತುಮೇಕೆಗಳ ಸಾಕಾಣಿಕೆದಾರರ ಸಂಘಗಳ ಮಹಾಮಂಡಳರವರುಗಳ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು.
Goat unit subsidy ಕುರಿ ಸಾಕಾಣಿಕೆ ಘಟಕದ ಸಬ್ಸಿಡಿಗಳ ಮಾಹಿತಿ
ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಅಡಿಯಲ್ಲಿ ಘಟಕದ ವೆಚ್ಚ 1,75,000 ರೂಪಾಯಿ ಆಗಿರುತ್ತದೆ. ಸರ್ಕಾರದ ವತಿಯಿಂದ ಶೇ. 25 ರಷ್ಟು ಸಬ್ಸಿಡಿ ನೀಡಲಾಗುವುದು. ಅಂದರೆ 43750 ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ವತಿಯಿಂದ ಶೇ. 50 ರಷ್ಟು ಸಾಲ ನೀಡಲಾಗುವುದು.ಹೌದು, 87500 ರೂಪಾಯಿಯರವಗೆ ಸಾಲ ನೀಡಲಾಗುವುದು.
ರೈತರ ವಂತಿಕೆ ಬ್ಯಾಂಕ್ ಸಾಲ ಶೇ. 25 ರಷ್ಟು ಅಂದರೆ 43750 ರೂಪಾಯಿಯವರೆಗೆ ನೀಡಲಾಗುವುದು. ಒಟ್ಟು 175000 ರೂಪಾಯಿ ಘಟಕದ ವೆಚ್ಚವಾಗಿರುತ್ತದೆ.
ಇದನ್ನೂ ಓದಿ : Pm kisan scheme ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಈ ರೈತರಿಗಷ್ಟೆ ಜಮೆ- ನಿಮ್ಮ ಹೆಸರು ಚೆಕ್ ಮಾಡಿ 2024
ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತದೊಂದಿಗೆ ಸಂಯೋಜನೆಗೊಂಡಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಅರ್ಹ ಕುರಿಗಾಹಿ ಸದಸ್ಯರಿಗೆ ಮಾತ್ರ ನೀಡಲಾಗುವುದು.
ಸರ್ಕಾರದ ನಿಯಮಗಳಂತೆ ಮಹಿಳೆಯರಿಗೆ ಶೇ. 33.3, ವಿಶೇಷ ಚೇತನರಿಗೆ ಶೇ. 3 ರಷ್ಟು ಆದ್ಯತೆ ನೀಡಲಾಗುವುದು.
ಯಾವ ಯಾವ ದಾಖಲೆ ಹೊಂದಿರಬೇಕು?
ಆರ್.ಡಿ. ಸಂಖ್ಯೆ ಹೊಂದಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಫಲಾನುಭವಿಗಳು ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು. ಅರ್ಜಿದಾರರು ಕಡ್ಡಾಯವಾಗಿ ಫ್ರೂಟ್ಸ್ ಐಡಿ ಹೊಂದಿರಬೇಕು. ಒಂದು ಕುಟುಂಬಕ್ಕೆ ಒಂದೇ ಅರ್ಜಿಯನ್ನು ಸಲ್ಲಿಸಬೇಕು.
Goat unit subsidy ಕುರಿ ಮೇಕೆ ಘಟಕದ ವೆಚ್ಚದ ವಿವರ ಇಲ್ಲಿದೆ
20 ಹೆಣ್ಣು ಕುರಿ ಮೇಕೆಗಳಿಗೆ ಪ್ರತಿ ಹೆಣ್ಣು ಕುರಿಗೆ 7500 ರೂಪಾಯಿ (ಕನಿಷ್ಟ 9 ತಿಂಗಳಿಂದ 18 ತಿಂಗಳ ವಯಸ್ಸು) ಒಟ್ಟು 1,50,000 ರೂಪಾಯಿ
ಒಂದು ಸುಧಾರಿತ ತಳಿ ಟಗರು ಅಥವಾ ಹೋತಕ್ಕೆ ( ಕನಿಷ್ಟ 18 ತಿಂಗಳ ವಯಸ್ಸು) 10000 ರೂಪಾಯಿ.ಸಾಕಾಣಿಕೆ ವೆಚ್ಚ 200 ರೂಪಾಯಿ ಪ್ರತಿ ಕುರಿ ಮೇಕೆಗೆ 4200 ರೂಪಾಯಿ
ಕುರಿ, ಮೇಕೆಗಳಿಗೆ ಬೇಕಾಗುವ ಆಹಾರ ಮತ್ತು ನೀರಿನ ಸಲಕರಣೆಗಳು 1150 ರೂಪಾಯಿ ಸಮತೋಲನ ಆಹಾರ 4200 ರೂಪಾಯಿ ಒಟ್ಟು 9500 ರೂಪಾಯಿ. ಹೀಗೆ ಒಟ್ಟು 1,75,000 ರೂಪಾಯಿ ಇರುತ್ತದೆ.
Goat unit subsidy ಕಲಬುರಗಿ ಜಿಲ್ಲೆಯಿಂದ ಅಮೃತ ಸ್ವಾಭಿಮಾನ ಕುರಿಗಾಹಿ ಯೋಜನೆ ಅಡಿ ಅರ್ಜಿ ಆಹ್ವಾನ
ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ವತಿಯಿಂದ 2024-25ನೇ ಸಾಲಿನ ಅಮೃತ ಸ್ವಾಭಿಮಾನಿ ( 20 + 1) ಕುರಿಗಾಹಿ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯ ನೋಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿನ ಸದಸ್ಯರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಜುಲೈ 18 ರೊಳಗಾಗಿ ಕಲಬುರಗಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಉಪನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 08472 237772 ಗೆ ಸಂಪರ್ಕಿಸಲು ಕೋರಲಾಗಿದೆ.