Gruhalakshmi all installment ಸ್ಟೇಟಸ್ ಇಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Gruhalakshmi all installment  ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಮಹಿಳಾ ಫಲಾನುಭವಿಗಳಿಗೆ ಇಲ್ಲಿದೆ ಸಂತಸದ ಸುದ್ದಿ.

ಹೌದು, ಇಂದಿನ ಈ ಲೇಖನದಲ್ಲಿ ನಿಮಗೆ ಗೃಹಲಕ್ಷ್ಮೀ ಯೋಜನೆಯಿಂದ ಯಾವ ಮಹಿಳೆಯರಿಗೆ ಎಷ್ಟು ಕಂತುಗಳ ಹಣ ಜಮೆಯಾಗಿವೆ? ಯಾವ ಬ್ಯಾಂಕಿನ ಖಾತೆಯಲ್ಲಿ ಜಮೆಯಾಗಿವೆ? ಯಾವ ದಿನಾಂಕದಂದು ಜಮೆಯಾಗಿದೆ ಎಂಬ ಮಾಹಿತಿಯನ್ನು ಕೇವಲ ಒಂದೇ ಒಂದು ನಿಮಿಷದಲ್ಲಿ ಚೆಕ್ ಮಾಡಿಕೊಳ್ಳುವಂತೆ ತಿಳಿಸುತ್ತೇನೆ. ಕೆಳಗೆ ನೀಡಿದ ಮಾಹಿತಿಗಳ ಪ್ರಕಾರ ನೀವು ಸ್ಪೆಪ್ ಬೈ ಸ್ಟೆಪ್ ಮಾಹಿತಿ ಓದಿ ಚೆಕ್ ಮಾಡಿದರೆ ಅತೀ ಸುಲಭವಾಗಿ ಚೆಕ್ ಮಾಡಬಹುದು. ಲೇಖನವನ್ನು ಕೊನೆಯವರೆಗೆ ಓದಿದರೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುವುದರೊಂದಿಗೆ ಸ್ಟೇಟಸ್ ಚೆಕ್ ಮಾಡಲು ಅನಕೂಲವಾಗುತ್ತದೆ. ಸ್ಟೇಟಸ್ ಚೆಕ್ ಮಾಡಲು ನಿಮಗೆ ಯಾವುದೇ ಸಂಶಯ ಬರುವುದಿಲ್ಲ.

Gruhalakshmi all installment

ನಾವು ಪ್ರಕಟಿಸುವ ಲೇಖನಗಳಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ. ಗೃಹಲಕ್ಷ್ಮೀ ಯೋಜನೆಯ ಹಣ ನಮಗೇಕೆ ಜಮೆಯಾಗುತ್ತಿಲ್ಲಎಂಬ ಪ್ರಶ್ನೆಗಳನ್ನು ಹಲವಾರು ಫಲಾನುಭವಿಗಳು ಕೇಳುತ್ತಿರುತ್ತಾರೆ. ಬಹುತೇಕ ಮಹಿಳೆಯರಿಗೆ ಯಾವ ಬ್ಯಾಂಕಿನಲ್ಲಿ ಹಣ ಜಮೆಯಾಗಿದೆ ಎಂಬುದೇ ಗೊತ್ತಿರುವುದಿಲ್ಲ. ಏಕೆಂದರೆ ಅವರ ಖಾತೆ ಇಕೆವೈಸಿ ಆಗಿರುವುದಿಲ್ಲ. ಹಾಗಾಗಿ ಕೆಲವು ಮಹಿಳೆಯರಿಗೆ ಮೆಸೆಜ್ ಬರುತ್ತಿಲ್ಲ. ಅಂತಹ ಮಹಿಳೆಯರೂ ಸಹ ಇಲ್ಲಿ ಸ್ಟೇಟಸ್ ಚೆಕ್ ಮಾಡಬಹುದು. ಒಟ್ಟಿನಲ್ಲಿ ಯಾವ ಯಾವ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಎಷ್ಟು ಕಂತುಗಳು ಜಮೆಯಾಗಿವೆ ಎಂಬುದನ್ನು ಮಾತ್ರ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Gruhalakshmi all installment status  ಗೃಹಲಕ್ಷ್ಮೀ ಯೋಜನೆಯ ಎಷ್ಟು ಕಂತುಗಳು ಜಮೆಯಾಗಿವೆ?

ಗೃಹಲಕ್ಷ್ಮೀ ಯೋಜನೆಗೆ ತಮ್ಮ ಹೆಸರು ನೋಂದಣಿ ಮಾಡಿದ ಫಲಾನುಭವಿಗಳು ತಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿವೆ ಎಂಬುದನ್ನು ಚೆಕ್ ಮಾಡಲು ಈ

https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136

ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನೀವು ಸ್ಟೇಟಸ್ ಚೆಕ್ ಮಾಡಬಹುದು. ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ಡಿಟೇಲ್ಸ್ ಆಫ್ ಗೃಹಲಕ್ಷ್ಮೀ ಸ್ಟೇಟಸ್ ಕೆಳಗಡೆ ನೀವು ನಿಮ್ಮ ರೇಶನ್ ಕಾರ್ಡ್ ನಂಬರ್ ನಮೂದಿಸಬೇಕು. ನಿಮ್ಮ ರೇಶನ್ ಕಾರ್ಡ್ ನಂಬರ್ ಸರಿಯಾಗಿ ನಮೂದಿಸಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಯಾವ ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿದೆ? ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು.

Gruhalakshmi all installment ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮಯಾಗುತ್ತಿಲ್ಲವೇ?

ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗುತ್ತಿಲ್ಲವೇ. ಅಥವಾ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿವೆ ಎಂಬುದನ್ನು ನೀವು ಕಾಮೆಂಟ್ ಮಾಡಬಹುದು. ನಿಮ್ಮ ಕಾಮೆಂಟ್ ಸರಿಯಾದ ಮಾಹಿತಿಯನ್ನು ನಮ್ಮ ಪ್ರತಿನಿಧಿಗಳು ನೀಡುತ್ತಾರೆ.

ಒಂದು ವೇಳೆ ನಿಮಗೆ ಏಕಾಏಕೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಮಾಡುವುದನ್ನು ತಡೆಹಿಡಿದಿದ್ದರೆ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬ  ಮಾಹಿತಿಯನ್ನು ಸಹ ನೀಡಲಾಗುವುದು.

ಯಾವ ಅರ್ಹತೆ ಇರಬೇಕು?

ಗೃಹಲಕ್ಷ್ಮೀ ಯೋಜನೆಗೆ ಬಹುಳಷ್ಟು ಮಹಿಳೆಯರು ನೋಂದಣಿ ಮಾಡಿಸಿದ್ದಾರೆ. ಆದರೆ ಕೆಲವು ತಪ್ಪುಗಳಿಂದ ಎಲ್ಲಾ ಅರ್ಹತೆ ಇದ್ದರೂ ಹಣ ಜಮೆಯಾಗುತ್ತಿಲ್ಲ. ಮೊದಲಿಗೆ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯ ಹೆಸರು ರೇಶನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರೆಂದು ನಮೂದಾಗಿರಬೇಕು. ಇದರೊಂದಿಗೆ ಆ ಕುಟುಂಬದಲ್ಲಿ ಯಾರೊಬ್ಬರೂ ಸರ್ಕಾರಿ ನೌಕರಿಯಲ್ಲಿರಬಾರದು. ಅಥವಾ ಪಿಂಚಣಿ ಪಡೆಯುವವರಾಗಿರಬಾರದು.

ಇದನ್ನೂ ಓದಿ Baragala Parihara beneficiary list 2024 ಈ ಲಿಸ್ಟ್ ನಲ್ಲಿದ್ದವರಿಗೆ ಪರಿಹಾರ

ಕುಟುಂಬದ ಯಜಮಾನಿ ಅಥವಾ ಯಜಮಾನ ತೆರಿಗೆ ಪಾವತಿಸುವವರಾಗಿರಬಾರದು. ಜಿಎಸ್.ಟಿ ರಿಟರ್ನ್ಸ್ ಪಾವತಿಸುವರೂ ಆಗಿರಬಾರದು. ಈ ಮೇಲಿನ ಅರ್ಹತೆ ಇರಲೇಬೇಕು.

Gruhalakshmi all installment ಗೃಹಲಕ್ಷ್ಮೀ ಫಲಾನುಭವಿಗಳ ಯಾವ ಯಾವ ದಾಖಲೆ ಸರಿ ಇರಬೇಕು?

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯ ಹೆಸರು ಆಧಾರ್ ಕಾರ್ಡ್, ರೇಶನ್ ಕಾರ್ಡ್ ನಲ್ಲಿ ಒಂದೇ ರೀತಿಯಾಗಿರಬೇಕು. ಅದೇ ರೀತಿ ಬ್ಯಾಂಕ್ ಪಾಸ್ ಬುಕ್ ನಲ್ಲಿಯೂ ಒಂದೇ ರೀತಿಯಾಗಿರಬೇಕು. ನಿಮ್ಮ ಹೆಸರು ಒಂದು ದಾಖಲೆಯಿಂದ ಮತ್ತೊಂದು ದಾಖಲೆಗೆ ಸ್ವಲ್ಪ ವ್ಯತ್ಯಾಸವಿದ್ದರೂ ಸಹ ನಿಮಗೆ ಯೋಜನೆಯ ಹಣ ಜಮೆಯಾಗುವುದಿಲ್ಲ.

Leave a Comment