Gruhalalakshmi list released ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿದ ಫಲಾನುಭವಿಗಳ ಪಟ್ಟಿ ಈಗ ಬಿಡುಗಡೆಯಾಗಿದೆ. ಇದರೊಂದಿಗೆ ಯಾವ ಯಾವ ಮಹಿಳೆಯರಿಗೆ ಎಷ್ಟು ಕಂತಿನ ಹಣ ಜಮೆಯಾಗಿದೆ? ಪಟ್ಟಿಯಲ್ಲಿ ನಿಮ್ಮಹೆಸರಿದೆಯೋ ಇಲ್ಲವೋ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು.
ತಮಗೆಲ್ಲಾ ಗೊತ್ತಿದ್ದ ಹಾಗೆ ಇಲ್ಲಿಯವರೆಗೆ 9 ಕಂತುಗಳ ಹಣ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಿದೆ. ಕಳೆದ ತಿಂಗಳಿಂದ ಕೆಲವು ಮಹಿಳೆಯರ ಖಾತೆಗೆ ಹಣ ಜಮಯಾಗುತ್ತಿಲ್ಲ. ಹಾಗಾಗಿ ತಮಗೆ ಹಣ ಜಮೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಬಹುದು. ಏಕೆಂದರೆ ಈಗ ನಿಜವಾದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕೆಂದು ಅರ್ಜಿಗಳನ್ನುಪರಿಷ್ಕರಿಸಲಾಗುತ್ತಿದೆ. ಅರ್ಹತೆ ಇಲ್ಲದವರೂ ಸಹ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯುತ್ತಿದ್ದರು. ಹಾಗಾಗಿ ನಿಜವಾದ ಫಲಾನುಭವಿಗಳಿಗೆ ಲಾಭ ಸಿಗಲೆಂಬ ಉದ್ದೇಶದಿಂದ ಅರ್ಜಿಗಳನ್ನು ಪರಿಷ್ಕರಿಸಿ ಹಣ ಜಮೆ ಮಾಡಲಾಗುತ್ತಿದೆ.
Gruhalalakshmi list released ನಿಮಗೆಷ್ಟು ಕಂತುಗಳು ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳು ತಮಗೆ ಎಷ್ಟು ಕಂತುಗಳು ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://mahitikanaja.karnataka.gov.in/Gruhalakshmi/GuhalakshmiStatus?ServiceId=5630&Type=SP&DepartmentId=3136
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ Details of Gruhalakshmi status ಕೆಳಗಡೆ ನಿಮ್ಮ ರೇಶನ್ ಕಾರ್ಡ್ ನಮೂದಿಸಬೇಕು. ನಂತರ submit ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ದಿನಾಂಕದಂದು ಅರ್ಜಿ ಹಾಕಿದ್ದೀರಿ. ನಿಮ್ಮ ಅರ್ಜಿ ಸ್ವೀಕೃತವಾಗಿದೆಯೇ ಹಾಗೂ ಯಾವ ದಿನಾಂಕ ಅರ್ಜಿ ಸ್ವೀಕೃತವಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ Details ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ. ಯಾವ ಯಾವ ತಿಂಗಳಲ್ಲಿ ಜಮೆಯಾಗಿದೆ. ಯಾವ ತಿಂಗಳ ಯಾವ ದಿನಾಂಕದಂದು ಜಮಯಾಗಿದೆ ಹಾಗೂ ಎಷ್ಟು ಹಣ ಜಮೆಯಾಗಿದೆ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು. ಇದಕ್ಕಾಗಿ ನಿಮ್ಮ ಬಳಿ ಫೋನ್ ಇದ್ದರೆ ಸಾಕು, ನಿಮ್ಮ ಫೋನ್ ಇಲ್ಲದಿದ್ದರೂ ನಿಮ್ಮ ಮನೆಯಲ್ಲಿರುವ ಇತರರ ಫೋನ್ ಬಳಸಿ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.
Gruhalalakshmi list released ನೀವು ಗೃಹಲಕ್ಷ್ಮೀ ಯೋಜನೆಗೆ ಅರ್ಹತೆ ಹೊಂದಿದ್ದೀರಾ? ಇಲ್ಲೇ ಚೆಕ್ ಮಾಡಿ
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಿದವರೆಲ್ಲರು ಅರ್ಹತೆ ಪಡೆದಿಲ್ಲ. ಈಗ ನಿಜವಾದ ಫಲಾನುಭವಿಗಳಿಗೆ ಮಾತ್ರ ಹಣ ಜಮೆ ಮಾಡಲಾಗುತ್ತಿದೆ.
Gruhalalakshmi list released ಇಲ್ಲಿದೆ ನೋಡಿ ಕೆಲವು ಅರ್ಹತೆಗಳು
ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯುವ ವಿತರಿಸುವ ಅಂತ್ಯೋದಯ, ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ.
ಇದನ್ನೂ ಓದಿ Link RTC aadhar card ಮೊಬೈಲ್ ನಲ್ಲೇ ಪಹಣಿಗೆ ಆಧಾರ್ ಲಿಂಕ್ ಮಾಡಿ ಬರಗಾಲ ಬೆಳೆ ವಿಮೆ ಪರಿಹಾರ ಪಡೆಯಿರಿ 2024
ಒಂದೇ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಹಿಳೆಯರಿದ್ದಲ್ಲಿ ಒಂದು ಮಹಿಳೆಗೆ ಮಾತ್ರ ಈ ಯೋಜನೆಯ ಲಾಭ ಸಿಗುತ್ತದೆ. ಕುಟುಂಬ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಅವರಿಗೆ ಹಣ ಜಮೆಯಾಗುವುದಿಲ್ಲ.
Gruhalalakshmi list released ಗೃಹಲಕ್ಷ್ಮೀ ಯೋಜನೆಯನ್ನು ಏಕೆ ಜಾರಿಗೆ ತರಲಾಯಿತು?
ಗೃಹಲಕ್ಷ್ಮೀ ಯೋಜನೆಯನ್ನು ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕೆಂಬ ಉದ್ದೇಶದಿಂದ ಆರಂಭಿಸಲಾಗಿದೆ. ಹೌದು, ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಅವರ ಖಾತೆಗೆ ಜಮೆ ಮಾಡಿದರೆ ಅವರು ಆ ಹಣವನ್ನು ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ತಿಂಗಳು ನೀಡುವ ಹಣವನ್ನು ಮಹಿಳೆಯರು ಮನೆಗೆ ಬೇಕಾಗುವ ದಿನಿನಿತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಬಹುದು. ಎಂಬ ಉದ್ದೇಶದಿಂದ ಈ ಯೋಜನೆಯ ಹಣವನ್ನು ಮಹಿಳೆಯರ ಖಾತೆಗೆ ಜಮೆ ಮಾಡಲಾಗುತ್ತಿದೆ.