Horticulture training : 10 ತಿಂಗಳು ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

Written by Admin

Published on:

Spread the love

ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 11 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ 2024-25 ಸಾಲಿನ 10 ತಿಂಗಳ ತೋಟಗಾರಿಕೆ ( 10 month Horticulture training )ತರಬೇತಿಯನ್ನು 2024ರ ಮೇ 2 ರಿಂದ ಹಮ್ಮಿಕೊಳ್ಳಲಾಗಿದೆ.

ತೋಟಗಾರಿಕೆ ಇಲಾಖೆಯ ವತಿಯಿಂದ ಮೇ 2 ರಿಂದ 2025 ರ ಫೆಬ್ರವರಿ  28ರವರೆಗೆ ತರಬೇತಿ ನೀಡಲಾಗುವುದು.  ಇದಕ್ಕಾಗಿ ಆಯಾ ಜಿಲ್ಲೆಯ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ಅಭ್ಯರ್ಥಿಗಳು ಕನಿಷ್ಟ ಎಸ್.ಎಸ್.ಎಲ್.ಸಿ ಕನ್ನಡ ವಿಷಯದೊಂದಿಗೆ ಪಾಸಾಗಿರಬೇಕು. ಹಾಗೂ ದೃಢಕಾಯವಾಗಿರಬೇಕು. ಅಭ್ಯರ್ಥಿಗಳ ತಂದೆ ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕಲ್ಲದೆ ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ಕಡ್ಡಾಯವಾಗಿ ನೀಡಬೇಕು.

Horticulture training
10 month Horticulture training

ಮಾಜಿ ಸೈನಿಕರು ಪ್ರವೇಶ ಪಡೆಯಲು ಇಚ್ಚಿಸಿದಲ್ಲಿ ಮೇಲೆ ತಿಳಿಸಿದ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ನಿಗದಿತ ಅರ್ಜಿ ನಮೂನೆಗಳನ್ನು ಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ರಾಜ್ಯ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಅಥವಾ ಇಲಾಖೆಯ

https://horticulturedir.karnataka.gov.in

ವೆಬ್ಸೈಟ್ ದಿಂದ 2024 ರ ಮಾರ್ಚ್ 1 ರಿಂದ 30 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬಹುದು.

ಭರ್ತಿ ಮಾಡಿದ ಅರ್ಜಿಯೊಂದಿಗೆ ದೃಢೀಕೃತ ಅವಶ್ಯಕ ದಾಖಲೆಗಳು ಹಾಗೂ ಎರಡು ಪಾಸ್ ಪೋರ್ಟ್ ಸೈಜ್ ಫೋಟೋ ಲಗತ್ತಿಸಿ 2024 ರ ಏಪ್ರೀಲ್ 1 ರ ಸಂಜೆ 5.30  ಗಂಟೆಯೊಳಗಾಗಿ ಉಪ ನಿರ್ದೇಶಕರು, (ಜಿಪಂ) ಹಾಗೂ ಹಿರಿಯ ಸಹಾಯಕ (ರಾವ)  ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಅರ್ಜಿ ಸಲ್ಲಿಸಬೇಕು.

ತರಬೇತಿಗೆ ನೀಡಿರುವ ಗುರಿಗಳಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಏಪ್ರೀಲ್ 20 ರೊಳಗಾಗಿ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುವುದು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 1750 ರೂಪಾಯಿಗಳ ಮಾಸಿಕ ಶಿಷ್ಯವೇತನ ನೀಡಲಾಗುವುದು.

10 month Horticulture training ಗೆ ವಯೋಮಿತಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲರಿಗೆ ಕನಿಷ್ಟ 18 ವರ್ಷ ಮತ್ತು ಗರಿಷ್ಠ 33 ವರ್ಷ, ಮಾಜಿ ಸೈನಿಕರಿಗೆ 33 ರಿಂದ ಗರಿಷ್ಠ 65 ವರ್ಷ ಹಾಗೂ ಇತರರಿಗೆ ಕನಿಷ್ಠ 18 ವರ್ಷ ಮತ್ತು ಗರಿಷ್ಟ 30 ವರ್ಷ ಇರಬೇಕು.

ಮೀಸಲಾತಿ

2024-25ನೇ ಸಾಲಿನ ದವರೆಗೆ ತೋಟಗಾರಿಕೆ ತರಬೇತಿ ಕೇಂದ್ರಗಳಿಗೆ ನಿಗಧಿ ಪಡಿಸಿರುವ ಅಭ್ಯರ್ಥಿಗಳ ಗುರಿಯನ್ನು ಸರ್ಕಾರದ ಮೀಸಲಾತಿ ನಿಯಮಾವಳಿಗಳನ್ನು ಪಾಲಿಸಿ, ಮೆರಿಟ್ ಆಧಾರ್ದ ಮೇಲೆ ಆಯ್ಕೆ ಪ್ರಕ್ರಿಯೆ ಕೈಗೊಳ್ಳಲಾಗುವುದು.

10 month Horticulture training  ತರಬೇತಿಯ ಸ್ಥಳ

ತರಬೇತಿಗೆ ಸೇರುವ ಪ್ರತಿ ಅಭ್ಯರ್ಥಿಯೂ ತರಬೇತಿ ಕೇಂದ್ರದ ವಸತಿ ಗೃಹದಲ್ಲಿ ತಂಗುವುದು ಕಡ್ಡಾಯವಾಗಿರುತ್ತದೆ. ಮಹಿಳಾ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸುರಕ್ಷಿತ ವ್ಯವಸ್ಥೆ ಕಲ್ಪಿಸುವುದು. ಆಯಾ ತರಬೇತಿ ಕೇಂದ್ರದ ಮುಖ್ಯಸ್ಥರು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಮತ್ತು ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ರವರ ಜವಾಬ್ದಾರಿಯಾಗಿರುತ್ತದೆ.

ಪರೀಕ್ಷೆಗೆ ಅರ್ಹತೆ

ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಶೇಕಡಾ 75 ಕ್ಕಿಂತ ಕಡಿಮೆ ಹಾಜರಾತಿ ಇದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅರ್ಹತೆ ಇರುವುದಿಲ್ಲ.

ಸಮವಸ್ತ್ರ

ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳು ತರಬೇತಿಗೆ ಬರುವಾಗ ಹಸಿರು ಬಣ್ಣದ ಸಮವಸ್ತ್ರವನ್ನು ಧರಿಸಬೇಕು. ಮಹಿಳಾ ಅಭ್ಯರ್ಥಿಗಳು ಹಸಿರು ಬಣ್ಣದ ಚೂಡಿದಾರ್ ಅನ್ನು ಧರಿಸಬೇಕು. ಅಭ್ಯರ್ಥಿಗಳು ಸಮವಸ್ತ್ರವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸಬೇಕು.

ಇದನ್ನೂ ಓದಿ Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ

ಕಲಬುರಗಿ ಜಿಲ್ಲೆಯ ಅರ್ಹ ರೈತರು 2024ರ ಏಪ್ರೀಲ್ 6 ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಮೂಲ ದಾಖಲೆಗಳೊಂದಿಗೆ ಕಲಬುರಗಿ ಐವಾನ್ ಎ ಶಾಹಿ ರಸ್ತೆಯ ತೋಟಗಾರಿಕ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ್) ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು. ಇದಕ್ಕಾಗಿ ಪ್ರತ್ಯೇಕ ಪತ್ರ ವ್ಯವಹಾರ ಮಾಡಲಾಗುವುದಿಲ್ಲ.

ಅರ್ಜಿ ಶುಲ್ಕ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ 08472 229479 ನ್ನು ಹಾಗೂ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

Leave a Comment