Job card list ಕೃಷಿ ಕೂಲಿ ಕಾರ್ಮಿಕರು, ಸಾರ್ವಜನಿಕರು ಜಾಬ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.
ಹೌದು, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿಯಲ್ಲಿ ನೋಂದಣಿ ಮಾಡಿಸಿದ ಫಲಾನುಭವಿಗಳು ತಮ್ಮ ಹೆಸರು ಇರುವುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಜಾಬ್ ಕಾರ್ಡ್ ನಿಂದ ಕೆಲವು ಫಲಾನುಭವಿಗಳ ಹೆಸರು ರದ್ದುಗೊಳಿಸಲಾಗಿದೆ.ಇನ್ನೂ ಹೊಸದಾಗಿ ಕೆಲವು ಫಲಾನುಭವಿಗಳ ಹೆಸರು ಸೇರಿಸಲಾಗಿದೆ. ಯಾರ ಯಾರ ಹೆಸರು ತೆಗೆಯಲಾಗಿದೆ? ಯಾರ ಯಾರ ಹೆಸರು ಸೇರ್ಪಡೆಯಾಗಿದೆ ಎಂಬುದನ್ನು ಇಲ್ಲೇ ಚೆಕ್ ಮಾಡಬಹುದು. ಹೌದು, ನಿಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಜಾಬ್ ಕಾರ್ಡ್ ಲಿಸ್ಟ್ ಚೆಕ್ ಮಾಡಬಹುದು.
Job card list ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ಹೆಸರಿರುವುದನ್ನು ಚೆಕ್ ಮಾಡುವುದು ಹೇಗೆ?
ರೈತ ಕಾರ್ಮಿಕರು ಜಾಬ್ ಕಾರ್ಡ್ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ
https://nregastrep.nic.in/netnrega/loginframegp.aspx?salogin=Y&state_code=15
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯಮೆಂಟ್ ಗ್ಯಾರೆಂಟಿ ಆ್ಯಕ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಕೆಲವು ಆಯ್ಕೆಗಳನ್ನು ಮಾಡಬೇಕಾಗುತ್ತದೆ. ನಮ್ಮ ರಾಜ್ಯ ಕರ್ನಾಟಕ ಅಲ್ಲಿ ಕಾಣಿಸುತ್ತದೆ. ಅದರ ಕೆಳಗಡೆ ಪ್ರಸಕ್ತ ಸಾಲಿನ 2024-25 ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಬ್ಲಾಕ್ ಆಯ್ಕೆಯಲ್ಲಿ ನಿಮ್ಮ ತಾಲೂಕು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆ ಮಾಡಿಕೊಂಡು Proceed ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಜಾಬ್ ಕಾರ್ಡ್ ನೋಂದಣಿ
ಜಾಬ್ ಕಾರ್ಡ್ ರೆಜಿಸ್ಟ್ರೇಶನ್ ಕೆಳಗಡೆ Registration caste wise, job card not in use, list of worker with aadhar no, job card employment registration, Registration application Register ಹೀಗೆ ನಿಮಗೆ ಕೆಲವು ಆಯ್ಕೆಗಳು ಕಾಣುತ್ತವೆ. ಅದರಲ್ಲಿ Job card/Employment Register ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Voter list released ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಓಟ್ ಹಾಕುವ ಹಕ್ಕಿದೆ 2024
ಆಗ ಜಾಬ್ ಕಾರ್ಡ್ ಹೊಂದಿರುವವರ ಪಟ್ಟಿ ಕಾಣಿಸುತ್ತದೆ. ಅಲ್ಲಿ ಕ್ರಮ ಸಂಖ್ಯೆ ಪ್ರಕಾರ ಹೆಸರಿರುತ್ತದೆ. ಅಲ್ಲಿ ಕಾಣುವ ಹೆಸರುಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
Job card list ಬಾಕಿ ಉಳಿದಿರುವ ಜಾಬ್ ಕಾರ್ಡ್ ಪರಿಶೀಲಿಸಿ
ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದವರು ತಮ್ಮ ಹೆಸರು ಇನ್ನೂ ಬಾಕಿ ಉಳಿದಿರುವ ಪಟ್ಟಿಯಲ್ಲಿದೆಯೇ ಎಂಬುದನ್ನು ಚೆಕ್ ಮಾಡಲು ಪೆಂಡಿಂಗ್ ಜಾಬ್ ಕಾರ್ಡ್ಸ್ ಟು ಬಿ ವೆರಿಫೈಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಯಾರು ಯಾರು ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೋ ಅವರ ಹೆಸರು ಇನ್ನು ಪೆಂಡಿಗ್ ಲಿಸ್ಟ್ ನಲ್ಲಿರುವ ಹೆಸರುಗಳು ಕಾಣುತ್ತವೆ.
ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ನರೇಗಾ ಯೋಜನೆಯಡಿಯಲ್ಲಿ ಬಡ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಹೌದು, ಗ್ರಾಮಾಂತರ ಪ್ರದೇಶಗಳಿಂದ ಜನ ವಲಸೆ ಹೋಗುವುದನ್ನು ತಪ್ಪಿಸುವುದಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಕೆಲಸ ನೀಡಲು ಜಾಬ್ ಕಾರ್ಡ್ ನೀಡಲಾಗುವುದು. ಈ ಜಾಬ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಕೆಲಸ ನೀಡಲಾಗುವುದು. ಹಾಗಾಗಿ ನಿಮ್ಮ ಹೆಸರು ಇದೆಯೋ ಇಲ್ಲವೋ ಇಲ್ಲೇ ಚೆಕ್ ಮಾಡಿಕೊಳ್ಳಬಹುದು.