Job fair for various post : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಆಗಸ್ಟ್ 23 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ನಗರದ ಸರ್ಕಾರಿ ಐಟಿಐ ಕಾಲೇಜು ಹಿಂದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಲಾಹೋಟಿ ಮೋಟಾರ್ಸ್ ದಲ್ಲಿಟ್ರೈನಿ ಟೆಕ್ ಟೆಕ್ನಿಶಿಯನ್ ಹುದ್ದೆಗೆ ಐಟಿಐ (ಎಮ್.ಎಮ್.ವಿ, ಡಿ.ಎಮ್.ವಿ ಎಲೆಕ್ಟ್ರಿಶಿನಯ್) ಪಾಸಾಗಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು.
ಸುಪರವೈಸರ್ / ಸರ್ವಿಸ್ ಅಡವೈಸರ್ ಹುದ್ದೆಗೆ ಡಿಪ್ಲೋಮಾ (ಮೆಕ್ಯಾನಿಕಲ್, ಅಟೋಮೋಬೈಲ್, ಎಲೆಕ್ಟ್ರಿಕಲ್ ಇಂಜನಿಯರಿಂಗ್) ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 22 ರಿಂದ 40 ವಯೋಮಾನದೊಳಗಿರಬೇಕು. ಸೇಲ್ಸ್ / ಸರ್ವಿಸ್ ಬಾಡಿಶಾಪ್ /
ಇನ್ಸುರೆನ್ಸ್ ಫೈನಾನ್ಸ್, ಅಕೌಂಟ್ ಹುದ್ದೆಗೆ ಬಿಎ, ಬಿಕಾಂ, ಬಿಎಸ್.ಸಿ, ಬಿಬಿಎ, ಬಿಬಿಎಮ್ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು. ಸೇಲ್ಸ್ ಸರ್ವಿಸ್ ಬಾಡಿಶಾಪ್ ಹುದ್ದೆಗೆ ಬಿಎ, ಬಿಕಾಂ, ಬಿಎಸ್.ಸಿ, ಬಿಬಿಎ, ಬಿಬಿಎಮ್, ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು.
ಕಲಬುರಗಿ ಅಥರ್ವ ಪೆಸ್ಟಿಸೈಜ್ ಆ್ಯಂಡ್ ಕೆಮಿಕಲ್ ದಲ್ಲಿ ಫೀಲ್ಡ್ ಆಫೀಸರ್ ಮತ್ತು ಸೇಲ್ಸ್ ಆಫೀಸರ್ ಹುದ್ದೆಗೆ ಅಗ್ರಿಕಲ್ಚರ್ ಇನ್ ಡಿಪ್ಲೋಮಾ, ಬಿಎಸ್.ಸಿ ಅಗ್ರಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 20ರಿಂದ 35 ವಯೋಮಾನದೊಳಗಿರಬೇಕು.
Job fair for various post ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಜಿಪ್ಟೋದಲ್ಲಿ ಡೆಲಿವರಿ ರೈಡರ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು. ಎಲ್ಐಸಿ ದಲ್ಲಿ ಮಹಿಳಾ ವೃತ್ತಿ ಏಜೆಂಟ್ ಹುದ್ದೆಗೆ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು.
Job fair for various post
ಫ್ಲಿಪ್ ಕಾರ್ಟ್ ದಲ್ಲಿ ಹಬ್ ಸ್ಟೋರರ್ ಹುದ್ದೆಗೆ ಎಸ್.ಎಸ್.ಎಲ್.ಸಿ,ಹಬ್ ಟೀಪ್ ಲೀಡರ್ ಹುದ್ದೆಗೆ ಪಿಯುಸಿ ಹಾಗೂ ಡೆಲಿವರಿ ಎಕ್ಸಿಕ್ಯೂಟಿವ್ ಹುದ್ದೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 18 ರಿಂದ 35 ವಯೋಮಾನದೊಳಗಿರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್ ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ಮೇಲ್ಕಂಡ ದಿನದಂದು ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು.
ಇದನ್ನೂ ಓದಿ Pm kisan hana ಪಿಎಂ ಕಿಸಾನ್ ಯಾರಿಗೆ ಜಮೆ ಯಾರಿಗೆ ಜಮೆಯಾಗಲ್ಲ ಇಲ್ಲಿದೆ ಮಾಹಿತಿ 2024
ನೇರ ಸಂದರ್ಶನದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472 274846, ಮೊಬೈಲ್ ಸಂಖ್ಯೆ 96200 95270ಗೆ ಸಂಪರ್ಕಿಸಲು ಕೋರಲಾಗಿದೆ.
Job fair for various post ಇಂದು ಕ್ಯಾಂಪಸ್ ಸಂದರ್ಶನ
ಬೆಂಗಳೂರಿನಿ ಮೆ.ಭಾರತ ಹೆವಿ ಇಲೆಕ್ಟ್ರಿಕಲ್ ಲಿಮಿಟೆಡ್ ವತಿಯಿಂದ ಐಟಿಐ ಪಾಸಾದ ಮತ್ತು ಕೊನೆಯ ವರ್ಷದ ಪರೀಕ್ಷೆಗೆ ಹಾಜರಾಗಿರುವ ಅಭ್ಯರ್ಥಿಗಳಿಗಾಗಿ ಇಲೆಕ್ಟ್ರಾನಿಕ್ ಮೆಕ್ಯಾನಿಕ್, ಇಲೆಕ್ಟ್ರಿಶಿಯನ್, ಫಿಟ್ಟರ್ ಮತ್ತು ಕೋಪಾ ವೃತ್ತಿಗಳಿಗೆ ಶಿಶುಕ್ಷು (ಅಪ್ರೆಂಟಿಶಿಪ್)ತರಬೇತಿ ನೀಡಲು ಇದೇ ಆಗಸಲ್ಟ್21 ರಂದು ಬೆಳಗ್ಗೆ9 ಗಂಟೆಗೆ ಕಲಬುರಗಿ (ಪುರುಷ)ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ (ಪುರುಷ) ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.
ಅರ್ಹ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ನಡೆಯುವ ಸಂದರ್ಶನಕ್ಕೆ ವೈಯಕ್ತಿಕ ವಿವರ ಬಯೋಡಾಟಾ ಎಸ್.ಎಸ್.ಎಲ್.ಸಿ, ಅಂಕಪಟ್ಟಿ, ಐಟಿಐ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಭಾವಚಿತ್ರಗಳು, ಆಧಾರ್ ಕಾರ್ಡ್ ಹಾಗೂ ಇತರೆ ದಾಖಲೆಗಳೊಂದಿಗೆ ಕಲಬುರಗಿ ಎಂಎಸ್.ಕೆ.ಮಿಲ್ ರಸ್ತೆಯಲ್ಲಿರುವ ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಹಾಜರಾಗಬೇಕು.
ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಸೂಚನಾ ಫಲಕವನ್ನು ಹಾಗೂ ಮೊಬೈಲ್ ಸಂಖ್ಯೆ 7259272146 ಗೆ ಸಂಪರ್ಕಿಸಲು ಕೋರಲಾಗಿದೆ.
ಉದ್ಯೋಗಮಾಹಿತಿ ಪಡೆಯಬೇಕೇ? https://itiemp.karnataka.gov.in/page/Recruitment+Information/kn
ಈ ಲಿಂಕ್ ಮೇಲೆ ಕ್ಲಿಕ್ ಮಾಡಿ