job fair is here : ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಇದೇ ಮಾರ್ಚ್ 12 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಲಬುರಗಿ ಸರ್ಕಾರಿ ಐಟಿಐ ಕಾಲೇಜು ಹಿದುಗಡೆಯಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಲಾಹೋಟಿ ಮೋಟರ್ಸ್ ದಲ್ಲಿ ರಿಲೇಶನ್ಶಿಪ್ ಮ್ಯಾನೇಜರ್, ಕಮರ್ಶಿಯಲ್ ಎಕ್ಸಿಕ್ಯೂಟಿವ್, ರಿಸಪ್ಸೆನಿಸ್ಟ್ ಶೋ ರೋಮ್ ಹೋಸ್ಟ್, ಇನ್ಸುರೆನ್ ಎಕ್ಸಿಕ್ಯೂಟಿವ್, ಬ್ಯಾಕ್ ಎಂಡ್ ಟೆಲಿಕಾಲರ್, ಟ್ರೂ ವ್ಯಾಲ್ಯೂ ಇವಾಲ್ಯುವೇಟರ್ ಹುದ್ದೆಗಳಿಗೆ ಯಾವುದೇ ಪದವಿ ಉತ್ತೀರ್ಣರಾಗಿರಬೇಕು. ವಯೋಮಿತಿ 18 ರಿಂದ 40 ವಯೋಮಾನದೊಳಗಿರಬೇಕು.
job fair is here ಯಾವ ಯಾವ ಹುದ್ದೆಗಳು ಖಾಲಿಯಿವೆ
ಅಫಜಲ್ಪುರ (ಚೌಡಾಪುರ) ಪೂಜ್ಯ ಶ್ರೀ ವಿ.ಎಲ್. ಭಟ್ಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿ ( ಎಲ್.ಕೆ.ಜಿ, ಯು,ಕೆ.ಜಿ) ಹುದ್ದೆಗೆ ಎನ್.ಟಿ.ಸಿ ಬಿಎಸ್.ಸಿ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ , ಆಂಗ್ಲ ಹಾಗೂ ಹಿಂದಿ ಶಿಕ್ಷಕರು (ಪ್ರಾಥಮಿಕ) ಹುದ್ದೆಗೆ ಬಿಎ, ಬಿಎಡ್, ಅಥವಾ ಎಂಎ ವಿದ್ಯಾರ್ಹತೆ ಹೊಂದಿರಬೇಕು.

ಗಣಿ ಅಥವಾ ವಿಜ್ಞಾನ ಶಿಕ್ಷಕರು (ಪ್ರಾಥಮಿಕ) ಬಿ.ಎಸ್.ಸಿ ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಕಂಪ್ಯೂಟರ್ ಶಿಕ್ಷಕರು (ಪ್ರಾಥಮಿಕ) ಹುದ್ದೆಗೆ ಬಿಸಿಎ ವಿದ್ಯಾರ್ಹತೆ ಹೊಂದಿರಬೇಕು. ದೈಹಿಕ ಶಿಕ್ಷಕರು ( ಪ್ರಾಥಮಿಕ) ಮಹಿಳಾ ಹುದ್ದೆಗೆ ಬಿ.ಪಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಆಂಗ್ಲ ಹಿಂದ ಸಮಾಜ ವಿಜ್ಞಾನ ಶಿಕ್ಷಕರು (ಹಿರಿಯ ಪ್ರಾಥಮಿಕ) ಹುದ್ದೆಗೆ ಎಮ್.ಎ. ಬಿಎಡ್ ಹೊಂದಿರಬೇಕು. ವಿಜ್ಞಾನ ಗಣಿತ ಶಿಕ್ಷಕರು (ಹಿರಿಯ ಪ್ರಾಥಮಿಕ) ಹುದ್ದೆಗೆ ಎಮ್.ಎಸ್.ಸಿ, ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು ಕಂಪ್ಯೂಟರ್ ಶಿಕ್ಷಕರು (ಹಿರಿಯ ಪ್ರಾಥಮಿಕ) ಹುದ್ದೆಗೆ ಬಿಸಿಎ ವಿದ್ಯಾರ್ಹತೆ ಹೊಂದಿರಬೇಕು. ದೈಹಿಕ ಶಿಕ್ಷಕರು (ಹಿರಿಯ ಪ್ರಾಥಮಿಕ) ಪುರುಷ ಹುದ್ದೆಗೆ ಎಮ್.ಎಸ್.ಸಿ ಬಿಎಡ್ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 22 ರಿಂದ 35 ವಯೋಮಾನದೊಳಗಿರಬೇಕು.
job fair is here ಅರ್ಜಿ ಸಲ್ಲಿಸಲು ಯಾವ ಯಾವ ವಿದ್ಯಾರ್ಹತೆ ಬೇಕು
ಶ್ರೀ ಸಾಯಿ ಅರ್ಥ ಮೂವರ್ಸ್ ದಲ್ಲಿ ಸರ್ವಿಸ್ ಇಂಜಿನಿಯರ್ ಹುದ್ದೆಗೆ (ಐಟಿಐ) ಡಿಪ್ಲೋಮಾ ವಿದ್ಯಾರ್ಹತೆ ಹೊಂದಿರಬೇಕು. ಸೇಲ್ಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಎಮ್.ಬಿ.ಎ ವಿದ್ಯಾರ್ಹತೆ ಹೊಂದಿರಬೇಕು. ರಿಸೆಪ್ಶನಿಸ್ಟ್ ಹುದ್ದೆಗೆ ಯಾವುದೇ ಪದವಿ ಹೊಂದಿರಬೇಕು. ವಯೋಮಿತಿ 18 ರಿಂದ 30 ವಯೋಮಾನದೊಳಗಿರಬೇಕು.ಐಡಿಎಫ್ಸಿ ಪ್ರಸ್ಟ್ ಭಾರತದಲ್ಲಿ ಆರ್.ಎಮ್. ಗ್ರೂಪ್ ಲೋನ್ ಹಾಗೂ ಆರ್.ಎಮ್.ಎಮ್.ಇ.ಎಲ್ ಹುದ್ದೆಗಳಿಗೆ ಪಿಯುಸಿ, ಐಟಿಐ, ಯಾವುದೇ ಪದವಿ ವಿದ್ಯಾರ್ಹತೆ ಹೊಂದಿರಬೇಕು. ವಯೋಮತಿ 18 ರಿಂದ 30 ವಯೋಮಾನದೊಳಗಿರಬೇಕು. ಕಲಬುರಗಿ ಎಸ್.ಆರ್.ಜೆ ಗ್ರೂಪ್ ಆಫ್ ಇನ್ಸಿಟಿಟ್ಯೂಶನ್ ದಲ್ಲಿ ಶಿಕ್ಷಕರ ಹುದ್ದೆಗೆ ಪಿಯುಸಿ ಯಾವುದೇ ಪದವಿ ಮತ್ತು ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು. ವಯೋಮಿತಿ 21 ರಿಂದ 36 ವಯೋಮಾನದೊಳಗರಬೇಕು.
ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ವಿಧ್ಯಾಭ್ಯಾಸ ಎಲ್ಲಾ ಅಂಕಪಟ್ಟಿಗಳ ಝರಾಕ್ಸ್, ರೆಸ್ಯೂಮ್ (ಬಯೋಡಾಟಾ) ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್ ದೊಂದಿಗೆ ಮೇಲ್ಕಂಡ ದಿನದಂದು ನಡೆಯುವ ಉದ್ಯೋಗ ಮೇಳದಲ್ಲಿ ಭಾಗವಹಿಸಬೇಕು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಯಾವುದೇ ತರಹದ ಭತ್ಯೆಯನ್ನು ನೀಡಲಾಗುವುದಿಲ್ಲ.
ಇದನ್ನೂ ಓದಿ Mobile canteen subsidy get ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ: ಅರ್ಜಿ ಆಹ್ವಾನ 2026
ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ 0872 274846, ಮೊಬೈಲ್ ಸಂಖ್ಯೆ 903609143 ಗೆ ಸಂಪರ್ಕಿಸಲು ಕೋರಲಾಗಿದೆ.
job fair is here ನಾಳೆ ಸಂದರ್ಶನ
ಖಾಸಗಿ ಕಂಪನಿಯಾದ ಮುತ್ಯೂಟ್ ಮಿನಿ ಪ್ರೈವೆಟ್ ಲಿಮಿಟೆಡ್ ಸಂಸ್ಥೆ (ಮೇಘಲ್ ಮನೆ ಆರ್ಕಡ್, ಅನ್ನಪೂರ್ಣ ಆಸ್ಪತ್ರೆ ಹತ್ತಿರ, ಕೆ.ಎಂ. ರಸ್ತೆ ಚಿಕ್ಕಮಗಳೂರು) ತನ್ನಲ್ಲಿ ಖಾಲಿ ಇಱುವ ಬ್ಯಾಂಚ್ ಎಕ್ಸಿಕ್ಯೂಟಿವ್, ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಮಾರ್ಚ್ 11 ರಂದು ಬೆಳಗ್ಗೆ 10.30 ಕ್ಕೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಯಾವುದೇ ಪದವಿ ವಿದ್ಯಾರ್ಹತೆ ಹೊಂದಿದ 18 ರಿಂದ 30 ವಯೋಮಾನದಳಗಿನವರು ಭಾಗವಹಿಸಬಹುದು.
ಉಚಿತ ಪ್ರವೇಶವಿದ್ದು, ಅಭ್ಯರ್ಥಿಗಳು ಒಂದು ಸ್ವ ವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ 08262 295538 ಅಥವಾ 9945198500 ಗೆ ಸಂಪರ್ಕಿಸಬಹುದು ಎಂದು ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





