Kisan credit card loan ಈ ರೈತರಿಗೆ ಕಿಸಾನ್ ಕ್ರೇಡಿಟ್ ಕಾರ್ಡ್ ಅಡಿ 5 ಲಕ್ಷ ರೂಪಾಯಿ ಸಾಲ

Written by Admin

Published on:

Spread the love

Kisan credit card loan :  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದೇಶದ ರೈತರಿಗೆ ಬಂಪರ್ ಸುದ್ದಿ ಕೊಟ್ಟಿದ್ದಾರೆ.

ಹೌದು, ಶನಿವಾರ 3035-26 ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್  ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯವರೆಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ.

Kisan credit card loan 7.7 ಕೋಟಿ ರೈತರು, ಮೀನುಗಾರರು ಹಾಗೂ ಹೈನುಗಾರರಿಗೆ ಅಲ್ಪಾವಧಿ ಸಾಲವನ್ನು ಒದಗಿಸುವುದು.ಇದರ ಉದ್ದೇಶವನ್ನು ಕೆಸಿಸಿ ಮೂಲಕ ಪಡೆದ ಸಾಲಗಳಿಗೆ ಮಾರ್ಪಡಿಸಿದ ಬಡ್ಡಿ ಸಬ್ಸೆನ್ಶನ್ ಯೋಜನೆಯಡಿ  ಸಾಲದ ಮಿತಿಯನ್ನು 3 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿಯರೆಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

Kisan credit card loan ಏನಿದು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು?

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ರೈತರ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. 1998 ರಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಕೆಸಿಸಿ ಯೋಜನೆಯು ರೈತರಿಗೆ ಸಾಲ ಪ್ರಕ್ರಿಯೆಯನ್ನು ಸರಳಗೊಳಿಸುವ ಗುರಿ ಹೊಂದಿದೆ. ಈ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಶೇ. 4 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಕೆಸಿಸಿ ಯೋಜನೆಯ ಲಾಭ ಪಡೆಯಲು 18 ವರ್ಷ ತುಂಬಿರಬೇಕು. ಐದು ವರ್ಷಗಳ ಅವಧಿಗೆ 3 ಲಕ್ಷ ರೂಪಾಯಿಯವರೆಗೆ ಸಾಲ ಸಿಗುತ್ತಿತ್ತು. ಇದೀಗಐದು ಲಕ್ಷ ರೂಪಾಯಿಯವರೆಗೆ ಏರಿಕೆ ಮಾಡಲಾಗುವುದು. ಇನ್ನೂ ಕಿಸಾನ್ ಕ್ರೆಡಿಟ್ ಕಾರ್ಡ್ ಸಿಂಧುತ್ವವು ಐದು ವರ್ಷಗಳಾಗಿವೆ.

Kisan credit card loan ಕಿಸಾನ್ ಕ್ರೆಡಿಟ್ ಸಾಲದ ಉಪಯೋಗಗಳು?

ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದಿಂದ ರೈತರು ತಮ್ಮ ಕೃಷಿ ಅಗತ್ಯಗಳಿಗಾಗಿ ಇದು ಸಕಾಲಿಕ ಸಾಲಗಳನ್ನು ನೀಡುತ್ತದೆ. ಭಾರತ ಸರ್ಕಾರ ಈ ಯೋಜನೆಯನ್ನು ಪರಿಚಯಿಸಿದ್ದು, ಇದು ರೈತರಿಗೆ ಕೃಷಿ ಚಟುವಟಿಕೆಗಳಿಗೆ ಸುಲಭ ಮತ್ತು ಕೈಗೆಟಕುವ ಸಾಲವನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ :  PMkisan 19th installment date announced ಈ ರೈತರಿಗೆ ಪಿಎಂ ಕಿಸಾನ್ ಹಣ ಬಿಡುಗಡೆ ದಿನಾಂಕ ಘೋಷಣೆ 2025

ಬೆಳೆ ಕೃಷಿ ಬೀಜಗಳು ಮತ್ತು ರಸಗೊಬ್ಬರಗಳಂತಹ ಒಳಹರಿವಿನ ಖರೀದಿ ಮತ್ತು ಸುಗ್ಗಿಯ ನಂತರದ ಚಟುವಟಿಕೆಗಳಿಗೆ ಸಂಬಂಧಿಸಿದ ವೆಚ್ಚಗಳಿಗೆ ಇದು ಸಹಾಯವಾಗಲಿದೆ. ಅದರಲ್ಲೂ ಈ ಬಾರಿ ಸಾಲದ ಮಿತಿಯನ್ನು  ಏರಿಕೆ ಮಾಡುವ ಮೂಲಕ ಸರ್ಕಾರ ರೈತರಿಗೆ ನೆರವಾಗಲಿದೆ. ಇದರಿಂದಾಗಿ ಈ ಬಾರಿ ಬಜೆಟ್ ರೈತರಿಗೆ ಸಂತಸವನ್ನು ತಂದಿದೆ ಎನ್ನಬಹುದು. ಇನ್ನೂ ೀ ಸಾಲಗಳು ರೈತರ ಅಗತ್ಯತೆಗಳಿಗೆ ಅನುಗುಣವಾಗಿ ಇರುತ್ತವೆ. ಬೆಳೆ, ಜಮೀನಿನ ಗಾತ್ರ, ರೈತರ ಚಟುವಟಿಕೆಗಳಿಗೆ ಅನುಗುಣವಾಗಿ ಈ ಸಲದ ಮೊತ್ತಗಳು ಬದಲಾಗುತ್ತವೆ.

Kisan credit card loan ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಬೇಕಾದ ಅರ್ಹತೆಗಳು

ಈ ಕಾರ್ಡ್ ಪಡೆಯಲು, ಅರ್ಜಿದಾರರ ವಯಸ್ಸು 18 ವರ್ಷದಿಂದ 75 ವರ್ಷಗಳ ನಡುವೆ ಇರಬೇಕು.

ಕೃಷಿ ಮಾಡುವವರೇ ಭೂಮಿಯ ಮಾಲೀಕರು, ರೈತರು ಆಗಿರಬೇಕು. ಹಾಗೆಯೇ ಗುಂಪಿನ ಸದಸ್ಯರು ಕೂಡಾ ಆಗಿರಬೇಕಾಗುತ್ತದೆ.

ಈ ಕಾರ್ಡ್ ಅನ್ನು ರೈತರು, ಪಶುಸಂಗೋಪನೆ ಮತ್ತು ಮೀನುಗಾರಿಕೆಗೆ ಸಂಬಂಧಿಸಿದ ಯಾವುದೇ ವ್ಯಕ್ತಿ ಪಡೆಯಬಹುದು.

Kisan credit card loan ಅಗತ್ಯವಿರುವ ದಾಖಲೆಗಳು

ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿ ಇರಬೇಕು

ಗುರುತಿನ ಚೀಟಿಯಾದಂತಹ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ, ಆಧಾರ್ ಕಾರ್ಡ್.

ಅದೆ ರೀತಿ, ವಿಳಾಸ ಪುರಾವೆಯಾಗಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ನೀಡಬೇಕು.

ರೈತರು ಸಾಗುವಳಿ ಮಾಡುವ ಜಮೀನಿನ ದಾಖಲೆಗಳನ್ನು ಹೊಂದಿರಬೇಕು.

Leave a Comment