Land documents digital ಭೂ-ಸುರಕ್ಷಾ ಯೋಜನೆ: ಜಮೀನಿನ ದಾಖಲೆಗಳು ಗಣಕೀಕರಣ -ಪ್ರಿಯಾಂಕ್ ಖರ್ಗೆ 2025

Written by Admin

Published on:

Spread the love

Land documents digital  ಭೂ ಸುರಕ್ಷಾ ಯೋಜನೆಯಡಿ ರೈತರ ಜಮೀನಿನ ದಾಖಲೆಗಳನ್ನುಗಣಕೀಕರಣಗೊಳಸಲು ಚಾಲನೆ ನೀಡಲಾಗಿದೆ.

ಹೌದು, ರಾಜ್ಯದಲ್ಲಿ ಭೂ ದಾಖಲೆಗಳ ಡಿಜಿಟಲೀಕರಣಗೊಳಿಸುವ ಮಹತ್ವಕಾಂಕ್ಷೆ ಯೋಜನೆ ಕಂದಾಯ ಇಲಾಖೆಯಿಂದ ಜಾರಿಗೊಳಿಸಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಜಿಲ್ಲೆಯ ಎಲ್ಲಾ ಕಂದಾಯ ಎ & ಬಿ ಶ್ರೇಣಿಯ ದಾಖಲೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲಾಗುವುದು ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ.-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

Land documents digital ಗಣಕೀರಣ ದಾಖಲೆ

ರವಿವಾರ ಕಲಬುರಗಿ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕಂದಾಯ ದಾಖಲೆಗಳ ಗಣಕೀಕರಣಗೊಳಿಸುವ ಭೂ-ಸುರಕ್ಷಾ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಚಿಂಚೋಳಿ ತಾಲೂಕಿನಲ್ಲಿ ಕಳೆದ ವರ್ಷ 16.52 ಲಕ್ಷ ಪುಟದಷ್ಟು ಕಂದಾಯ ದಾಖಲೆಗಳನ್ನು ಸ್ಕಾö್ಯನ್ ಮಾಡಿ ಸಂರಕ್ಷಿಸಲಾಗಿದೆ. ಇನ್ನುಳಿದಂತೆ ಜಿಲ್ಲೆಯ 10 ತಾಲೂಕುಗಳಲ್ಲಿ ಅಂದಾಜು 1.29 ಕೋಟಿ ಪುಟಗಳನ್ನು ಸ್ಕಾö್ಯನ್ ಮಾಡಬೇಕಾಗಿದ್ದು, ಇದಕ್ಕೆ ಪೂರಕವಾಗಿ ಪ್ರತಿ ತಾಲೂಕಿಗೆ 6 ಜನ ಅಪರೇಟರ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಕಂದಾಯ ದಾಖಲೆಗಳ ಡಿಜಿಟಲೀಕರಣದಿಂದ ದಾಖಲೆ ಶಿಥಿಲವಾಗುವುದನ್ನು ತಪ್ಪಿಸಲು, ದಾಖಲೆ ಸಂರಕ್ಷಣೆ, ಅಂಗೈಯಲ್ಲಿ ದಾಖಲೆ ಲಭ್ಯತೆ, ದಾಖಲೆ ತಿರುಚುವುದಕ್ಕೆ ಕಡಿವಾಣ, ಸರಳ ಆಡಳಿತ ಮತ್ತು ನಕಲಿ ದಾಖಲೆ ಸೃಷ್ಠಿಸುವುದನ್ನು ತಪ್ಪಿಸಲು ಈ ಯೋಜನೆ ನೆರವಾಗಲಿದೆ ಎಂದರು.

ಇದನ್ನೂ ಓದಿ Bele vime hana  2 ಲಕ್ಷ ರೈತರಿಗೆ 76 ಕೋಟಿ ಬೆಳೆ ವಿಮೆ ಪರಿಹಾರ ಜಮೆ

ಹಿಂದೆಲ್ಲ ಕಲಬುರಗಿ ಜಿಲ್ಲೆ ಪ್ರಗತಿಯನ್ನು ಜಿಲ್ಲಾವಾರು ಪಟ್ಟಿಯಲ್ಲಿ ಕೊನೆಯಿಂದ ನೋಡುವ ಪರಿಸ್ಥಿತಿ ಇತ್ತು. ಇದೀಗ ಪ್ರಾಯೋಗಿಕವಾಗಿ ಚಿಂಚೋಳಿಯಲ್ಲಿ ಭೂ ಸುರಕ್ಷಾ ಯೋಜನೆ ಸಾಕಾರಗೊಂಡಿದ್ದರಿಂದ ಜಿಲ್ಲೆಗೆ ವಿಸ್ತರಣೆ ಮಾಡಲಾಗಿದೆ. ಇನ್ನುಳಿದಂತೆ ಕಂದಾಯ ಇಲಾಖೆಯಿಂದ ನೀಡಲಾಗುತ್ತಿರು ಸೇವೆಗಳು ತ್ವರಿತಗತಿಯಲ್ಲಿ ನೀಡಲಾಗುತ್ತಿದ್ದು, ಟಾಪ್ 10 ಜಿಲ್ಲೆಯಲ್ಲಿ ಕಲಬುರಗಿ ಸೇರಿದೆ. ಇದು ನಮ್ಮ ಜನಪರ ಆಡಳಿತಕ್ಕೆ ಸಾಕ್ಷಿ ಎಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಪ್ರಸ್ತಾವಿಕವಾಗಿ ಮಾತನಾಡಿ ಭೂ ಸುರಕ್ಷಾ ಯೋಜನೆ ಪ್ರಕ್ರಿಯೆ ಮತ್ತು ಚಿಂಚೋಳಿ ಪ್ರಾಯೋಗಿಕ ಯೋಜನೆ ಯಶಸ್ವಿ ಕುರಿತು ವಿವರಿಸಿದರು.

Land documents digital ದರಖಾಸ್ತು ಪೋಡಿ ವಿತರಣೆ:

ಇದೇ ಸಂದರ್ಭದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿ ತಾಲೂಕಿನ ತಾವರಗೇರಾ ಗ್ರಾಮದ 5 ಜನ ರೈತರಿಗೆ ಪಹಣಿ ಪತ್ರಿಕೆ,, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ಒಳಗೊಂಡ ದರಖಾಸ್ತು ಪೋಡಿ ದಾಖಲೆಗಳನ್ನು ವಿತರಣೆ ಮಾಡಿದರು.

1990 ದಶಕದಲ್ಲಿ ಲ್ಯಾಂಡ್ ಗ್ರಾö್ಯಂಟ್ ಕಮಿಟಿಯಿಂದ ರೈತರಿಗೆ ಉಳುಮೆ ಮಾಡಲು ಜಮೀನು ಮಂಜೂರು ಮಾಡಲಾಗಿತ್ತಾದರೂ, ಪ್ರತಿ ರೈತನಿಗೆ ಪ್ರತ್ಯೇಕ ಪಹಣಿ, ಹಿಸ್ಸಾ, ಪೋಡಿ ಇರಲಿಲ್ಲ. ಹೀಗಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ದರಖಾಸ್ತು ಪೋಡಿ ದುರಸ್ತಿ ಕಾರ್ಯವಿಧಾನದಲ್ಲಿ ಸರಲೀಕರಣಗೊಳಿಸಿದ್ದರಿಂದ ಇದೀಗ ಪ್ರತ್ಯೇಕ ರೈತನಿಗೆ ಹಕ್ಕು ಪತ್ರ ಲಭಿಸಿದಂತಾಗಿದೆ.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ, ಕಲಬುರಗಿ ಉತ್ತರ ಶಾಸಕಿ ಮತ್ತು ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಯಮಿತದ ಅಧ್ಯಕ್ಷೆ ಕನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯ್ಕೋಡಿ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜಹರ್ ಆಲಂ ಖಾನ್, ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಲಬುರಗಿ ತಹಶೀಲ್ದಾರ ಕೆ.ಆನಂದಶೀಲ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.

Land documents digital ಸಭಾಂಗಣಕ್ಕೆ ಅಡಿಗಲ್ಲು:

ನಂತರ ಜಿಲ್ಲಾಡಳಿತ ಭವನದ ಆವರಣದಲ್ಲಿಯೇ  2 ಕೊಟಿ ರೂ. ವೆಚ್ಚದ ನೂತನ ಆಡಿಟೋರಿಯಂ ಸಭಾಂಗಣ ಕಟ್ಟಡ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಅಡಿಗಲ್ಲು ನೆರವೇರಿಸಿದರು.

Leave a Comment