Land map ನಿಮ್ಮಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

Written by Admin

Published on:

Spread the love

Land map : ರೈತರು ತಮ್ಮ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲಿ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.

ರೈತರ ಜಮೀನಿನ ಮ್ಯಾಪ್ ನ್ನು ಮೊಬೈಲ್ ನಲ್ಲಿ ಹೇಗೆ ಡೌನ್ಲೋಡ್ ಮಾಡಬೇಕು? ಇದಕ್ಕೆ ಯಾವ ದಾಖಲೆ ಬೇಕಾಗಿಲ್ಲ. ಯಾರಿಗೂ ನಿಮ್ಮ ಜಮೀನಿನ ದಾಖಲೆ ನೀಡಬೇಕಿಲ್ಲ. ಯಾವುದೇ ದಾಖಲೆಗಳನ್ನಿಡದೆ ಮೊಬೈಲ್ ನಲ್ಲೇ ರೈತರ ಜಮೀನುಗಳ ಮ್ಯಾಪನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.

land Map

ಹೌದು, ರೈತರ ಜಮೀನಿನೊಂದಿಗೆ ತಮ್ಮ ಅಕ್ಕಪಕ್ಕಪದಲ್ಲಿ ಯಾವ ಯಾವ ಸರ್ವೆ ನಂಬರ್ ಇದೆ? ನಿಮ್ಮ ಜಮೀನಿಗೆ ಹೋಗಲು ಕಾಲುದಾರಿ, ಬಂಡಿದಾರಿ ಇದೆಯೇ? ಇದರೊಂದಿಗೆ ರೈತರ ಜಮೀನುಗಳ ಸುತ್ತಮುತ್ತಇರುವ ಹಳ್ಳಕೊಳ್ಳಗಳು, ಬೆಟ್ಟಗುಡ್ಡಗಳ ಹಾಗೂ ಅಕ್ಕಪಕ್ಕದ ಊರುಗಳಿಗೆ ಹೋಗುವ ದಾರಿ ಹೇಗೆ ಹಾದು ಹೋಗಿದೆ ಎಂಬುದನ್ನು ರೈತರು ಒಂದೇ ಮ್ಯಾಪ್ ನಲ್ಲಿ ಎಲ್ಲಾ ಮಾಹಿತಿ ಪಡೆಯಬಹುದು.

Land map ರೈತರು ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡುವುದು ಹೇಗೆ?

ರೈತರು ತಮ್ಮ ಜಮೀನುಗಳ ಮ್ಯಾಪ್ ಡೌನ್ಲೋಡ್ ಮಾಡಲು ಅಥವಾ ವೀಕ್ಷಿಸಲು ಈ

https://mahitikanaja.karnataka.gov.in/Revenue/RevenueVillageMap?ServiceId=1023&Type=TABLE%20&DepartmentId=2066

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಮಾಹಿತಿ ಕಣಜದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಡೌನ್ಲೋಡ್ ಗ್ರಾಮ ನಕ್ಷೆ ಕೆಳಗೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು.  ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಕೆಳಗಡೆಯಿರುವ ಬಾಕ್ಸ್ ನಲ್ಲಿ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು /  ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಇದಾದ ನಂತರ ನೀವು ಸಲ್ಲಿಸಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಸಲ್ಲಿಸಿ ಕೆಳಕಡೆ ಇನ್ನೊಂದು ಕಾಲಂ ಕಾಣುತ್ತದೆ. ನಕ್ಷೆ ಕೆಳಗಡೆ ನೀಲಿ ಬಣ್ಣದಲ್ಲಿ ಕಾಣುವ ನಕ್ಷೆ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮೂರಿನ ಮ್ಯಾಪ್ ನಿಮಗೆ ಕಾಣುತ್ತದೆ.

ಮೇಲಿನ ಲಿಂಕ್ ಓಪನ್ ಆಗದಿದ್ದರೆ ನೀವು ಈ ಕೆಳಗಿನ ರೀತಿಯಲ್ಲಿ ನಿಮ್ಮೂರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಬಹುದು.

Land map ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?

ರೈತರು ತಮ್ಮೂರಿನ ಜಮೀನಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ

https://landrecords.karnataka.gov.in/service3/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ Revenue Maps Online ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೇವಿನ್ಯೂ ಮ್ಯಾಪ್ ಕೆಳಗಡೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ Map Types ಎದುರುಗಡೆ  Cadastral Maps ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಆಯ್ಕೆ ಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಹೆಸರು ಕಾಣಿಸುತ್ತದೆ. ಅಲ್ಲಿ ನಿಮ್ಮೂರಿನ ಎದುರುಗಡೆಯಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅದೇ ನಿಮ್ಮೂರಿನ ಮ್ಯಾಪ್.

ಇದನ್ನೂ ಓದಿland akarband ನಿಮ್ಮ ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

ನೀವು ಡೌನ್ಲೋಡ್ ಮಾಡಿಕೊಂಡ ಮ್ಯಾಪ್ ನಲ್ಲಿ ಗ್ರಾಮ ನಕ್ಷೆಯಲ್ಲಿ ಎಡಗಡೆ ಇನ್ನೊಂದು ಕಾಲಂ ಕಾಣುತ್ತದೆ. ಅಲ್ಲಿ ಗ್ರಾಮದ ಗಡಿ ರೇಖೆ, ಸರ್ನೆ ನಂಬರ್ ಗಡಿ, ಹಿಸ್ಸಾ ನಂಬರ್ ಗಳು, ಸರ್ವೆ ನಂಬರ್ ಗಳು, ಕಾಲುದಾರಿ, ಬಂಡಿ ದಾರಿ, ಡಾಂಬರು ರಸ್ತೆ, ಹಳ್ಳ, ಬೆಟ್ಟ, ಕೆರೆ, ನೀರು ಹರಿಯುವ ದಿಕ್ಕು, ಹಾಳಾದ ಬಾವಿ, ದೇವಸ್ಥಾನ ಸೇರಿದಂತೆ ಇನ್ನಿತರ ಮಾಹಿತಿಯ ಕಾಲಂ ಇರುತ್ತದೆ.ಅದರ ಮುಂದುಗಡೆ ಗುರುತಿಸುವ ಚಿಹ್ನೆಗಳಿರುತ್ತವೆ.

farmers crop
Farmer Crop growing

ಅದರ ಆಧಾರದ ಮೇಲೆ ರೈತರು ಗಡಿಗಳನ್ನು, ಕೆರೆ ಕಟ್ಟೆಗಳನ್ನು, ದೇವಸ್ಥಾನ, ಹಾಳಾದ ಬಾವಿ, ತಮ್ಮ ಜಮೀನಿಗೆ ಹೋಗುವ ಕಾಲುದಾರಿ, ಬಂಡಿದಾರಿ ರಸ್ತೆಗಳು ಹೇಗೆ ಹಾದು ಹೋಗಿವೆ ಎಂಬುದನ್ನು ಮ್ಯಾಪ್ ಝೂಮ್ ಮಾಡಿ ವೀಕ್ಷಿಸಬಹುದು. ಮ್ಯಾಪ್ ಕಾರ್ನರ್ ನಲ್ಲಿ ಡೌನ್ಲೋಡ್ ಹಾಗೂ ಪ್ರಿಂಟ್ ಆಪಶನ್ ಸಹ ಇದೆ. ನಿಮಗೆ ಪ್ರಿಂಟ್ ಪಡೆಯಬಹುದು. ಈ ಮ್ಯಾಪ್ ನಲ್ಲಿ ರೈತರ ಊರಿನ ಸುತ್ತಮುತ್ತಲಿರುವ ಎಲ್ಲಾ ಜಮೀನುಗಳ ಮಾಹಿತಿ ಇರುತ್ತದೆ. ನಿಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾವ ಯಾವ ಸರ್ವೆ ನಂಬರ್ ಇದೆ ಚೆಕ್ ಮಾಡಿಕೊಳ್ಳಬಹುದು.

Leave a Comment