land mutation : ರೈತರಿಗಿಲ್ಲಿದೆ ಗುಡ್ ನ್ಯೂಸ್. ರೈತರು ಈಗ ತಮ್ಮ ಬಳಿಯಿರುವ ಮೊಬೈಲ್ ನಲ್ಲಿಯೇ ಜಮೀನಿನ ಸರ್ವೆ ನಂಬರ್ ನಮೂದಿಸಿ ಮುಟೇಶನ್ ಚೆಕ್ ಮಾಡಬಹುದು.
ರೈತರ ಜಮೀನಿನ ದಾಖಲೆಗಳಲ್ಲಿ ಅತೀ ಮುಖ್ಯವಾದ ದಾಖಲೆ ಮುಟೇಶನ್ ಆಗಿರುತ್ತದೆ. ಹೌದು, ಪಹಣಿ,ಆಕಾರಬಂದ್ ಗಿಂತ ಮುಟೇಶನ್ ಅತೀ ಮುಖ್ಯವಾಗಿರುತ್ತದೆ. ಹಾಗಾಗಿ ರೈತರು ಮುಟೇಶನ್ ದಾಖಲೆ ಪ್ರಕಾರ ನಿಮ್ಮ ಜಮೀನು ಯಾರಿಗೆ ಯಾರಿಗೆ ವರ್ಗಾವಣೆಯಾಗಿದೆ? ಜಮೀನು ನಿನ್ನ ಹೆಸರಿಗೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ರೈತರು ತಮ್ಮ ಜಮೀನಿನ ಮುಟೇಶನ್ ತಿಳಿಯಲು ಈಗ ಮನೆಯಲ್ಲಿಯೇ ಕುಳಿತು ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು, ಸರ್ವೆ ನಂಬರ್ ನಲ್ಲಿ ಬರುವ ಹಿಸ್ಸಾಗಳ ಸಮೇತ ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ ಅಂದರೆ ಖಾತೆ ಬದಲಾವಣೆ ಹೇಗಾಗಿದೆ?. ಇದಕ್ಕಾಗಿ ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ದೇಶದ ಯಾವುದೇ ಭಾಗದಲ್ಲಿ ಕುಳಿತಲ್ಲಿಯೇ ಸರ್ವ ಮಾಹಿತಿ ಪಡೆಯಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.
land mutation ಮೊಬೈಲ್ ನಲ್ಲೇ ಮುಟೇಶನ್ ವಿವರ ಚೆಕ್ ಮಾಡುವುದು ಹೇಗೆ?
ರೈತರು ತಮ್ಮ ಮೊಬೈಲ್ ನಲ್ಲೇ ಸರ್ವೆ ನಂಬರ್ ನಮೂದಿಸಿ ಮುಟೇಶನ್ ಇತಿಹಾಸ ತಿಳಿದುಕೊಳ್ಳಲು ಈ
https://landrecords.karnataka.gov.in/service53/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ I am not a Robot ಕಂಡರೆ ಆ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ Revenue commissionarate Revenue department ಕಾಣಿಸುತ್ತದೆ. ಅದನ್ನು ಕ್ಲೋಸ್ ಮಾಡಬೇಕು ನಂಂಂ ನಿಮಗೆ ತರರ ಭೂಮಿ ತಂತ್ರಾಂಶದಲ್ಲಿ ಜಮೀನು ವಿವರದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Survey No Wise ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಯಾವ ಜಿಲ್ಲೆಗೆ ಸಂಬಂಧಿಸಿದ್ದೀರೋ ಆ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ತಾಲೂಕು ಹಾಗೂ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಮ್ಮ ಗ್ರಾಮ ಅಂದರೆ ಊರು ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವ ಸರ್ವೆ ನಂಬರಿನ ಮುಟೇಶನ್ ಇತಿಹಾಸ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಿ ಗೋ ಮೇಲೆ ಕ್ಲಿಕ್ ಮಾಡಬೇಕು. ಇದಾದ ಮೇಲೆ Surnoc ನಲ್ಲಿ ಸ್ಟಾರ್ ಹಾಗೂ Hissa ನಲ್ಲಿ ಸ್ಟಾರ್ ಆಯ್ಕೆಮಾಡಿಕೊಳ್ಳಬೇಕು. ಅಲ್ಲಿ ನಿಮಗೆ ಕಾಣುವ View Mutation Data ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ರಿಪೋಟ್ ತೆರೆದುಕೊಳ್ಳುತ್ತದೆ.
land mutation ಮುಟೇಶನ್ ಸಮ್ಮರಿಯಲ್ಲಿ ಯಾವ ಯಾವ ಮಾಹಿತಿ ಇರುತ್ತದೆ?
ಮುಟೇಶನ್ ಸಮ್ಮರಿ ಕಾಲಂನಲ್ಲಿ ಸರ್ವೆ ನಂಬರ್ ಹಿಸ್ಸಾ ನಂಬರ್, ಜಮೀನು ವರ್ಗಾವಣೆಯಾದ ವರ್ಷ, ಮುಟೇಶನ್ ವಿಧ, ತಹಶೀಲ್ದಾರರು ಅನುಮೋದಿಸಿದ ದಿನಾಂಕದ ವರದಿ ಕಾಣುತ್ತದೆ.
land mutation ಸರ್ವೆ ನಂಬರ್ ನಲ್ಲಿರುವ ಮಾಲಿಕರ ಹೆಸರು
ಮುಟೇಶನ ಒಂದನೇ ಕಾಲಂನಲ್ಲಿ ಸರ್ವೆ ನಂಬರ್ ಹಿಸ್ಸಾನ ನಂಬರ್ ನಲ್ಲಿರು ಮಾಲಿಕರ ಹೆಸರು ಇರುತ್ತದೆ. ಮುಟೇಶನ್ ನ ಎರಡನೇ ಕಾಲಂನಲ್ಲಿ ಸರ್ವೆ ನಂಬರ್ ಗಳು, ಖರಾಬು ಜಮೀನು, ಕಂದಾಯ ವಿವರ ಹಾಗೂ ಜಮೀನಿನ ಮಣ್ಣಿನ ನಮೂನೆ ಹೇಗೆ ಎಂಬ ಮಾಹಿತಿ ಇರುತ್ತದೆ.
ಇದನ್ನೂ ಓದಿ : Pahani aadhar link ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ನಲ್ಲಿ ಹೀಗೆ ಮಾಡಿ 2024
ಸರ್ವೆ ನಂಬರಿನಲ್ಲಿ ಯಾವ ಮಾಲಿಕರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣುತ್ತದೆ. ಸರ್ವೆ ನಂಬರ್ ಹಾಗೂ ಸ್ವಾಧೀನದಾರರ ಹೆಸರುಮತ್ತು ವಿಸ್ತೀರ್ಣದ ಮಾಹಿತಿ ಇರುತ್ತದೆ.
land mutation ಜಮೀನು ಬದಲಾವಣೆಯ ಮಾಹಿತಿ
ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಹಕ್ಕು ಬದಲಾವಣೆಯ ಮಾಹಿತಿ ಇರುತ್ತದೆ. ಅಂದರೆ ಯಾರು ಯಾರಿಗೆ ಜಮೀನು ವರ್ಗಾವಣೆ ಮಾಡಿದ್ದಾರೆ. ಅಂದರೆ ಹಕ್ಕು ಬದಲಾವಣೆಯ ಪಡೆದವರು ಯಾರು ಹಾಗೂ ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬ ಸಂದೇಶ ಸಹ ಕಾಣುತ್ತದೆ.
ಈ ಮಾಹಿತಿ ರೈತರಿಗೆ ತುಂಬಾ ಅನುಕೂಲವಾಗಲಿದೆ. ಸರ್ವೆ ನಂಬರ್ ನಮೂದಿಸಿದರೆ ಸಾಕು ರೈತರು ದೇಶದ ಯಾವುದೇ ಮೂಲೆಯಿಂದಲೂ ಮಾಹಿತಿ ಪಡೆಯಬಹುದು. ಕೇವಲ ಸರ್ವೆ ನಂಬರ್ ನಮೂದಿಸಿದರೆ ಸಾಕು ಸರ್ವ ಮಾಹಿತಿ ಎಲ್ಲವೂ ರೈತರಿಗೆ ಸಿಗಲಿದೆ. ನೀವು ನಮೂದಿಸಿ ಸರ್ವೆ ನಂಬರ್ ನಲ್ಲಿ ಮಾಲಿಕರ ಹೆಸರು ಜಂಟಿಯಾಗಿದ್ದರೆ ಜಂಟಿಯಾಗಿದೆ ಎಂಬ ಸಂದೇಶವೂ ಇರುತ್ತದೆ.