Land mutation ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ 2024

Written by Admin

Published on:

Spread the love

Land mutation : ರೈತರ ಜಮೀನುಗಳು ಯಾವ ರೈತರಿಂದ ಯಾವ ರೈತರ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತ ಮಿತ್ರರೆ, ನೀವು ಸಾಗುವಳಿ ಮಾಡುತ್ತಿರುವ ಜಮೀನು ಹಾಗೂ ನಿಮ್ಮಅಕ್ಕಪಕ್ಕದ ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು. ಈಗ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಯಾವಾಗ ವರ್ಗಾವಣೆ ಆಗಿದೆ? ಜಮೀನಿಗೆ ಮುಟೇಶನ್ ಆಗಿದೆಯೋ ಇಲ್ಲವೋ ಎಂಬುದನ್ನು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡ್ರಿ ಮಾಹಿತಿ.

Land mutation transfer history

ರೈತರು ಈ ಹಿಂದೆ ತಮ್ಮ ಜಮೀನಿನ ಹಳೆಯ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುತ್ತಿದ್ದರು. ತಹಶೀಲ್ದಾರ್ ಅಥವಾ ಕಂದಾಯ ಕಚೇರಿಗೆ ತೆರಳಿ ಜಮೀನಿಗೆ ಸಂಬಂಧಿಸಿದ ಹಳೇಯೆ ದಾಖಲೆಗಳನ್ನು ಪಡೆಯುತ್ತಿದ್ದರು. ಆದರೆ ಈಗ ಕೇವಲ ಒಂದೇ ನಿಮಿಷದಲ್ಲಿ ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Land mutation transfer history  ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ರೈತರ ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು. ಈಗ ಯಾರ ಹೆಸರಿಗೆ ವರ್ಗಾವಣೆ ಆಗಿದೆ ಎಂಬುದನ್ನು ಚೆಕ್ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಭೂಮಿ ಆನ್ಲೈನ್ ಮುಟೇಶನ್ ಎಕ್ಸಟ್ರ್ಯಾಕ್ಟ್ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಅವರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಲೇಬೇಕು. ಇದಾದನಂತರ ರೈತರು ಯಾವ ಊರಿನವರೋ ಆ ಊರು / ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಯಾವ ಸರ್ವೆ ನಂಬರ್ ಜಮೀನಿನ ಇತಿಹಾಸ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು.  ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.

ಆಗ ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಹಿಸ್ಸಾ ನಂಬರ್ ಗಳ ಪಟ್ಟಿ ಕಾಣಿಸುತ್ತದೆ. ಅದರ ಎದುರುಗಡೆ ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಹಿಸ್ಸಾ ನಂಬರ್ ಯಾವ ವರ್ಷ ಬದಲಾವಣೆ ಆಗಿದೆ ಎಂಬ ವರ್ಷ ಕಾಣಿಸುತ್ತದೆ. ನಂತರ ಮುಟೇಶನ್ ನಂಬರ್ ಸಹ ರೈತರು ನೋಡಬಹುದು.

farmers crop
Farmer Crop growing

ಅದರ ನಂತರ ಜಮೀನು ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಬದಲಾವಣೆಯಾಗಿದೆ  ಹಾಗೂ ತಹಶೀಲ್ದಾರರು ಯಾವಾಗ ಅಪ್ರೂವ್ ಮಾಡಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ. ಇದು ಅತೀ ಮುಖ್ಯವಾದ ಮಾಹಿತಿಯಾಗಿರುತ್ತದೆ.

ಇದನ್ನೂ ಓದಿ RTC aadhar card link ಪಹಣಿಗೆ ಆಧಾರ್ ಲಿಂಕ್ ಹೀಗೆ ಮಾಡಿ 2024

ನಿಮ್ಮ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸರ್ವೆ ನಂಬರ್, ಸ್ವಾಧೀನದಾರರ ಹೆಸರು, ಜಮೀನು, ಖಾತೆ ನಂಬರ್ ಹಾಗೂ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

Land mutation transfer history ಜಮೀನಿನ ಪಹಣಿ ಆಗಾಗ ಚೆಕ್ ಮಾಡಿಕೊಳ್ಳಿ

ರೈತರು ತಮ್ಮ ಜಮೀನಿನ ದಾಖಲೆಯನ್ನು ಆಗಾಗ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬೇಕು. ಏಕೆಂದರೆ ಜಮೀನಿನಲ್ಲಿ ಆಗುವ ಬದಲಾವಣೆಯನ್ನು ಚೆಕ್ ಮಾಡಿಕೊಳ್ಳಬಹುದು.  ರೈತರಿಗೆ ಗೊತ್ತಿಲ್ಲದೆ ಕೆಲವು ಕಡೆ ಜಮೀನು ಬೇರೆಯವರ ಹೆಸರಿಗೆ ವರ್ಗಾವಣೆಯಾಗುವ ಹೆಚ್ಚು ಎಕರೆ ನಮೂದಿಸಿಕೊಳ್ಳುತ್ತಿರುತ್ತಾರೆ. ನಂತರ ಜಮೀನನಲ್ಲಿ ಆಗಿದ್ದ ಬದಲಾವಣೆ ಗೊತ್ತಾಗುವುದಿಲ್ಲ. ಹಾಗಾಗಿ ಆನ್ಲೈನ್ ನಲ್ಲೇ ರೈತರು ಚೆಕ್ ಮಾಡಿಕೊಳ್ಳಬಹುದು.  ರೈತರು ತಮ್ಮ ಮೊಬೈಲ್ ನಲ್ಲೇ ಈ ಮಾಹಿತಿಯನ್ನು ಚೆಕ್ ಮಾಡಿಕೊಳ್ಳಬಹುದು. ತಹಶೀಲ್ದಾರ್ ಕಚೇರಿಗೆ ಹೋಗಬೇಕಿಲ್ಲ.ಮನೆಯಲ್ಲಿಯೇ ಮೊಬೈಲ್ ನಲ್ಲಿಚೆಕ್ ಮಾಡಿಕೊಳ್ಳಬಹುದು.

Leave a Comment