Land Tippani: ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ತಮ್ಮ ಜಮೀನಿನ ಅತ್ಯಂತ ಹಳೆಯ ಮತ್ತು ಓರಿಜಿನಲ್ ಟಿಪ್ಪಣಿಯನ್ನು ಡೌನ್ಲೋಡ್ ಮಾಡಬಹುದು.
ಹೌದು, ರೈತ ಬಾಂಧವರೆ ತಮಗೆಲ್ಲಾ ಗೊತ್ತಿದ್ದ ಹಾಗೆ ಜಮೀನಿನ ದಾಖಲೆಗಳಲ್ಲಿ ಮಹತ್ವದ ದಾಖಲೆ ಟಿಪ್ಪಣಿಯೂ ಒಂದಾಗಿದೆ. ಬಹುತೇಕ ರೈತರಿಗೆ ಪಹಣಿ ಆಕಾರಬಂದ್, ಮುಟೇಶನ್, ದಾಖಲೆಗಳು ಮಾತ್ರ ಗೊತ್ತಿರುತ್ತದೆ. ಟಿಪ್ಪಣಿಯ ಬಗ್ಗೆ ಕೇಳಿರುವುದಿಲ್ಲ. ಹಾಗಾಗಿ ರೈತರ ಜಮೀನಿನ ದಾಖಲೆಗಳಲ್ಲಿ ಒಂದಾದ ಟಿಪ್ಪಣಿ ಬಗ್ಗೆಇಲ್ಲಿ ಸಂಪೂರ್ಣ ಮಾಹಿತಿ ನೀಡುವುದರೊಂದಿಗೆ ಆ ದಾಖಲೆಯನ್ನು ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
Land Tippani ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
ರೈತರು ತಮ್ಮ ಜಮೀನಿನ ಮೂಲ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಈ
https://bhoomojini.karnataka.gov.in/Service35/Dashboard.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಐ ಯಮ್ ನಾಟ್ ರೋಬೋಟ್ ಕಂಡರೆ ಅಲ್ಲಿ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ಕಂದಾಯ ಇಲಾಖೆಯ ಸರ್ವೆ ಡಾಕುಮೆಂಟ್ಸ್ ಪೇಜ್ ತೆರೆದುಕೊಂಡಾಗ ರೈತರು ತಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನೋಕ್ ಸ್ಟಾರ್ (*) ಹಿಸ್ಸಾ ನಂಬರ್ ನಲ್ಲಿ ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು. ನಂತರ Search ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ನಿಮಗೆ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪುಸ್ತಕ ಹಾಗೂ ಕಾಯಂದರ ತಖ್ತೆದಾಖಲೆಗಳು ಕಾಣಿಸುತ್ತವೆ. ಅದರಲ್ಲಿ ನೀವು
ಲ ಸರ್ವೆ ಟಿಪ್ಪಣಿ ಪುಸ್ತಕ ಅದರ ಮುಂದುಗಡೆ ಎಷ್ಟು ಪೇಜ್ ಇದೆ ಎಂಬ ಮಾಹಿತಿ ಕಾಣಿಸುತ್ತದೆ. . ಅದರ ಮುಂದುಗಡೆ View Document ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಪೇಜ್ ಓಪನ್ ಆಗುತ್ತದೆ.
Land Tippani ಮೂಲ ಸರ್ವೆ ಟಿಪ್ಪಣಿ ಪುಸ್ತಕದಲ್ಲಿ ಏನೇನು ಮಾಹಿತಿ ಇರುತ್ತದೆ?
ನಿಮ್ಮ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ. ಇದು ನಿಮ್ಮ ಜಮೀನಿನ ಓರಿಜಿನಲ್ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಆಗಿರುತ್ತದೆ. ಅಲ್ಲಿ ನೀವು ನಮೂದಿಸಿ ಸರ್ವೆ ನಂಬರ್ ಕಾಣಿಸುತ್ತದೆ. ಅದರ ಅಕ್ಕ ಪಕ್ಕದಲ್ಲಿ ಯಾವ ಯಾವ ಸರ್ವೆ ನಂಬರ್ ಗಳು ಇವೆ ಎಂಬ ಮ್ಯಾಪ್ ಕಾಣಿಸುತ್ತದೆ.
ಇದನ್ನೂ ಓದಿ : Pm kisan farmers name ಪಿಎಂ ಕಿಸಾನ್ ಹಣ ಯಾರಿಗೆ ಜಮೆ ಯಾರಿಗೆ ಜಮೆಯಾಗಲ್ಲ ಇಲ್ಲಿದೆ ಲಿಸ್ಟ್ 2024
ನಿಮ್ಮ ಜಮೀನಿನ ಮೂಲ ಸರ್ವೆ ಟಿಪ್ಪಣಿ ಪುಸ್ತಕ ನಿಮಗೆ ಬೇಕಾದರೆ ನಿಮ್ಮ ಹತ್ತಿರದ ಕಂದಾಯ ಇಲಾಖೆಯಲ್ಲಿ ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. ಈಗ ತಂತ್ರಜ್ಞಾನ ಬೆಳೆದಂತೆ ರೈತರು ತಮ್ಮ ದಾಖಲೆಗಳನ್ನು ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು.
Land Tippani ಮೊಬೈಲ್ ನಲ್ಲೇ ಪಡೆಯಿರಿ
ರೈತರ ಜಮೀನಿನ ದಾಖಲೆಗಳನ್ನು ಈಗ ಪಡೆಯಲು ತಹಶೀಲ್ದಾರ್ ಕಚೇರಿಗಳಿಗೆ ಹೋಗಬೇಕಿಲ್ಲ. ಅಲ್ಲಿ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ನಿಮ್ಮಹತ್ತಿರದ ನಾಡ ಕಚೇರಿ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಪಡೆದುಕೊಳ್ಳಬಹುದು. ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕಂದಾಯ ಇಲಾಖೆಯ ದಾಖಲೆಗಳನ್ನು ಚೆಕ್ ಮಾಡಿಕೊಳ್ಳಬಹುದು. ನಿಮ್ಮ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು. ದಾಖಲೆ ಪರಿಶೀಲಿಸಿಸಲು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ನೀವು ನಿಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿಕೊಳ್ಳಬಹುದು.