land transfer ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ 2024

Written by Admin

Published on:

Spread the love

land transfer : ರೈತರಿಗೆ ಗುಡ್ ನ್ಯೂಸ್. ರೈತರು ಈಗ ಮನೆಯಲ್ಲಿಯೇ ಕುಳಿತು ತಮ್ಮ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ?

ಜಮೀನು ಈ ಹಿಂದೆ ಯಾರ ಹೆಸರಿನಲ್ಲಿತ್ತು? ಈಗ ಯಾರ ಹೆಸರಿಗೆ ವರ್ಗಾವಣೆಯಾಗಿದೆ? ಯಾವಾಗ ವರ್ಗಾವಣೆಯಾಗಿದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

Land Transfer detail

ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲೇ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

land transfer ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ?  ಮೊಬೈಲ್ ನಲ್ಲಿ ಚೆಕ್ ಮಾಡಿ

ರೈತರ ಜಮೀನು ಯಾರ ಹೆಸರಿನಿಂದ ಯಾರ ಹೆಸರಿಗೆ ಬದಲಾವಣೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಭೂಮಿ ಆನ್ಲೈನ್ ಮುಟೇಶನ್ ಎಕ್ಸಟ್ರ್ಯಾಕ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ಸರ್ವೆ ನಂಬರ್ ನಮೂದಿಸಬೇಕು.

ಹೌದು,  ನೀವು ಯಾವ ಸರ್ವೆ ನಂಬರ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು.  ನಂತರ Fetch Details ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ?

land transfer : ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಹಿಸ್ಸಾ ನಂಬರ್ ಗಳ ಪಟ್ಟಿ ಕಾಣಿಸುತ್ತದೆ. ಅದರ ಎದುರುಗಡೆ ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಹಿಸ್ಸಾ ನಂಬರ್ ಯಾವ ವರ್ಷ ಬದಲಾವಣೆ ಆಗಿದೆ ಎಂಬ ವರ್ಷ ಕಾಣಿಸುತ್ತದೆ. ನಂತರ ಮುಟೇಶನ್ ನಂಬರ್ ಕಾಣಿಸುತ್ತದೆ.

ಅದರ ನಂತರ ಜಮೀನು ಒಬ್ಬರಿಂದ ಇನ್ನೊಬ್ಬರಿಗೆ ಹೇಗೆ ಬದಲಾವಣೆಯಾಗಿದೆ  ಹಾಗೂ ತಹಶೀಲ್ದಾರರು ಯಾವಾಗ ಅಪ್ರೂವ್ ಮಾಡಿದ್ದಾರೆ ಎಂಬ ಮಾಹಿತಿ ಕಾಣಿಸುತ್ತದೆ.

ಇದನ್ನೂ ಓದಿ  Bele vime Application status ಬೆಳೆ ವಿಮೆ ಜಮೆಯಾಗಿಲ್ಲವೇ? ಇಲ್ಲೇ ಚೆಕ್ ಮಾಡಿ 2024

ನಿಮ್ಮ ಸರ್ವೆ ನಂಬರ್ ಹಾಗೂ ಹಿಸ್ಸಾನಂಬರ್ ಹಿಂದಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕಾಣುವ Preview ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಸರ್ವೆ ನಂಬರ್, ಸ್ವಾಧೀನದಾರರ ಹೆಸರು, ಜಮೀನು, ಖಾತೆ ನಂಬರ್ ಹಾಗೂ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

Land transfer

land transfer ರೈತರಿಗೆ ಅತೀ ಮುಖ್ಯವಾದ ದಾಖಲೆ ಯಾವುದು?

ರೈತರಿಗೆ ಅತೀ ಮುಖ್ಯವಾದ ದಾಖಲೆ ಪಹಣಿ (ಆರ್.ಟಿ.ಸಿ) ಆಗಿದೆ. ರೈತರು ತಮ್ಮ ಜಮೀನಿನ ಪಹಣಿಯಲ್ಲಿ ತಮ್ಮ ಹೆಸರು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಚೆಕ್ ಮಾಡಿಕೊಳ್ಳಬೇಕು. ಏಕೆಂದರೆ ಇತ್ತೀಚೆಗೆ ಸರ್ಕಾರದ ಸೌಲಭ್ಯಗಳು ಸಿಗಬೇಕಾದರೆ ಜಮೀನಿನ ಪಹಣಿಯಲ್ಲಿಹೆಸರು ಸರಿಯಿರುವುದು ಅತೀ ಮುಖ್ಯವಾಗಿದೆ. ಅಂದರೆ ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿಯಲ್ಲಿ ಹೆಸರು ಒಂದೇ ಆಗಿರಬೇಕು. ಹೆಸರು ವ್ಯತ್ಯಾಸವಾಗಿದ್ದರೆ ಕೂಡಲೇ ಜಮೀನಿನ ದಾಖಲೆ ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಜಮೀನಿನ ಮೇಲೆ ನಿಮಗೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ.

ಹೌದು, ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿದಂತೆ ಸರ್ಕಾರದ ಇತರ ಸೌಲಭ್ಯ ಸಿಗಬೇಕಾದರೆ ನಿಮ್ಮ ಹೆಸರು, ತಂದೆಯ ಹೆಸರು ಒಂದೇ ಆಗಿರಬೇಕು. ಇದರೊಂದಿಗೆ  ರೇಶನ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ಪ್ರತಿಯಲ್ಲಿಯೂ ಒಂದೇ ರೀತಿಯಾಗಿರಬೇಕು.

land transfer ಜಮೀನಿನ ಪಹಣಿ ಆಗಾಗ ಚೆಕ್ ಮಾಡಿಕೊಳ್ಳಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಜಮೀನಿನ ಪಹಣಿ (ಆರ್.ಟಿಸಿ) ಚೆಕ್ ಮಾಡಿಕೊಳ್ಳಬೇಕು.  ಹೌದು, ಜಮೀನಿನಲ್ಲಿ ಆಗುವ ಬದಲಾವಣೆಗಳ ಮಾಹಿತಿ ಸಿಗುತ್ತದೆ.

Leave a Comment