Mini Tractor Subsidy : ಮಿನಿ ಟ್ರ್ಯಾಕ್ಟರ್ ಖರೀದಿಗೆ 1 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಹ ರೈತರಿಂದ ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಪ್ರಸಕ್ತ ಸಾಲಿನ 2024-25ನೇ ಸಾಲಿನ ತೋಟಗಾರಿಕೆಯಲ್ಲಿ ಯಾಂತ್ರೀಕರಣ ಸಂರಕ್ಷಿತ ಬೇಸಾಯದಡಿ ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ ಸಬ್ಸಿಡಿ ನೀಡಲಾಗುವುದು. ಯಾವ ರೈತರಿಗೆ ಎಷ್ಟು ಸಬ್ಸಿಡಿ ನೀಡಲಾಗುವುದು? ತೋಟಗಾರಿಗೆ ಮಿಷನ್ ಯೋಜನೆ ಅಡಿಯಲ್ಲಿ ಮತ್ತೇನು ಸೌಲಭ್ಯ ಸಿಗಲಿದೆ ಅರ್ಜಿ ಎಲ್ಲಿ ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Mini Tractor Subsidy ಮಿನಿ ಟ್ರ್ಯಾಕ್ಟರ್ ಖರೀದಿಗೆ ಅರ್ಜಿ ಆಹ್ವಾನ
ತೋಟಗಾರಿಕೆ ಯಾಂತ್ರೀಕರಣ ಸಂರಕ್ಷಿತ ಬೇಸಾಯದಡಿ 20 ಪಿಟಿಓ ಹೆಚ್.ಪಿ ಅಶ್ವಶಕ್ತಿಯ ಕೆಳಗಡೆ ಮಿನಿ ಟ್ರ್ಯಾಕ್ಟರ್ ಖರೀದಿಗೆ ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಹೌದು, ಕೃಷಿ ಚಟುವಟಿಕೆಗಳಿಗೆ ದಿನದಿಂದ ದಿನಕ್ಕೆ ಕೂಲಿ ಕಾರ್ಮಿಕರ ಕೆಲಸ ಹೆಚ್ಚಾಗುತ್ತಿದ್ದರಿಂದ ಸಣ್ಣ ಅನುಕೂಲವಾಗಲೆಂದು ಸಬ್ಸಿಡಿ ಸಹ ನೀಡಲಾಗುವುದು. ರೈತರು ಈ ಟ್ರ್ಯಾಕ್ಟರ ಗಳನ್ನು ಖರೀದಿಸಿ ತಮ್ಮ ಕೃಷಿ ಚಟುವಟಿಕೆಗಳಿಗೆ ಬಳಸಬಹುದು.
Mini Tractor Subsidy ರೈತರು ಯಾವ ಯಾವ ದಾಖಲಾತಿ ಸಲ್ಲಿಸಬೇಕು?
ಅರ್ಹ ರೈತರು ನಿಗದಿತ ಅರ್ಜಿ ನಮೂನೆ ಜೊತೆಗೆ ಪಹಣಿ, ಇತ್ತೀಚಿನ ಭಾವಚಿತ್ರ, ಖಾತೆ ಉತಾರ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ ನೀಡಬೇಕು. ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ ಸಲ್ಲಿಸಬೇಕು. ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಪ್ರತಿ ಸಲ್ಲಿಸಬೇಕು.
Mini Tractor Subsidy ಸೇಡಂ ತಾಲೂಕಿನಿಂದ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನ
2024-25 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿ ಹೊಸ ಪ್ರದೇಶ ವಿಸ್ತರಣೆ (ಬಾಳೆ, ಸೀಬೆ, ಬಿಡಿ ಹೂಗಳು, ಹೈಬ್ರಿಡ್ ತರಕಾರಿ ಹಾಗೂ ಪ್ಲಾಸ್ಟಿಕ್ ಮಲ್ಚಿಂಗ್, ತೋಟಗಾರಿಕೆಯಲ್ಲಿ ಯಾಂತ್ರಿಕರಣ ಯೋಜನೆ ಅಡಿ 20 ಹೆಚ್.ಪಿ ಗಿಂತ ಕಡಿಮೆ ಇರುವ ಮಿನಿ ಟ್ರ್ಯಾಕ್ಟರ್, ಪಾಲಿ ಹೌಸ್, ಕೋಯ್ಲೋತ್ತರ ನಿರ್ವಹಣೆ ಘಟಕಗಳಾದ ಪ್ಯಾಕ್ ಹೌಸ್, ಕಡಿಮೆ ವೆಚ್ಚದ ಈರುಳ್ಳಿ ಶೇಖರಣಾ ಘಟಕಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸೇಡಂ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.
ಇದನ್ನೂ ಓದಿ : Pm kisan scheme ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಈ ರೈತರಿಗಷ್ಟೆ ಜಮೆ- ನಿಮ್ಮ ಹೆಸರು ಚೆಕ್ ಮಾಡಿ 2024
ನೀರಾವರಿ ಸೌಲಭ್ಯ ಹೊಂದಿರುವ ರೈತರು ಸೇಡಂ (ಜಿಪಂ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಜುಲೈ 20 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯ್ಲಲಿ ಘಟಕ ಅಳವಡಿಸಿಲು ಅರ್ಜಿ ಆಹ್ವಾನಿಸಲಾಗಿದೆ. ಸಾಮಾನ್ಯವರ್ಗದ ರೈತರಿಗೆ ಶೇ. 55 ರಂತೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ನೀಡಲಾಗುವುದು.
ಆಸಕ್ತ ರೈತರು ಪಹಣಿ, ಹೋಲ್ಡಿಂಗ್, ನೀರು ಬಳಕೆ ಪ್ರಮಾಣ ಪತ್ರ, ಗಣಕೀಕೃತ ಬೆಳೆ ದೃಢೀಕರಣ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಹಾಗೂ ಜಾತಿ ಪ್ರಮಾಣ ಪತ್ರ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕೆಂದು ಅವರು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
Mini Tractor Subsidy ಕೃಷಿ ಸಿಂಚಾಯಿ ಯೋಜನೆಯಡಿ ತರಬೇತಿ ತರಬೇತಿಗೆ ಹೆಸರು ನೋಂದಣಿ
2024-25ನೇ ಸಾಲಿನಲ್ಲಿ ಸೂಕ್ಷ್ಮ ನೀರಾವರಿ ಕಾರ್ಯಕ್ರಮದ ಯೋಜನೆಯಾದ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತುಂತುರು ಮತ್ತು ಹನಿ ನೀರಾವರಿ ಪದ್ಧತಿ ಅಳವಡಿಕೆಯಿಂದ ಆಗುವ ಉಪಯೋಗಗಳು ಅವುಗಳ ನಿರ್ವಹಣೆ ಕುರಿತು ಇದೇ ಜುಲೈ 9 ಹಾಗೂ 11 ರಂದು ಕಲಬುರಗಿ ಕೋಟನೂರು (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ಕೋಟನೂರು (ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಮುಖ್ಯಸ್ಥರು ಹಾಗೂ ಸಹಾಯಕ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ತರಬೇತಿ ಪಡೆಯಲು ಆಸಕ್ತಿಯುಳ್ಳ ಎಫ್.ಐಡಿ ಹೊಂದಿರುವ ರೈತರು ಮತ್ತು ರೈತ ಸಂಪರ್ಕ ಕೇಂದ್ರಗಳಿಂದ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಪಡೆದ ರೈತರು ಕೃಷಿ ಅಧಿಕಾರಿ ಸುಜಾತಾ ಆರ್. ರಾಜನಾಳಕರ್ ಅವರ ಮೊಬೈಲ್ ಸಂಖ್ಯೆ 9448651202 ಹಾಗೂ ಯಾಸ್ಮೀನ್ 9901604833 ಇವರನ್ನು ಸಂಪರ್ಕಿಸಲು ಕೋರಲಾಗಿದೆ.