Minimum support price increased ರೈತರಿಗೆ ಗುಡ್ ನ್ಯೂಸ್14 ಬೆಳೆಗಳ ಕನಿಷ್ಠಬೆಂಬಲ ಬೆಲೆ ಹೆಚ್ಚಳ ಇಲ್ಲಿದೆ ಮಾಹಿತಿ

Written by Admin

Published on:

Spread the love

Minimum support price increased  ಮುಂಗಾರು ಬಿತ್ತನೆ ಹಂಗಾಮಿಗೆ ಸಂಬಂಧಿಸಿದಂತೆ 14 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಹೆಚ್ಚಳಕ್ಕೆಅನುಮೋದನೆ ನೀಡುವ ಮೂಲಕ ಕೇಂದ್ರ ಸಚಿವ ಸಂಪುಟ ಬುಧವಾರ ಮಹತ್ವದ ನಿರ್ಧಾರ ಕೈಗೊಂಡಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಈ ನಿರ್ಧಾರವನ್ನು ತೆಗೆದುಕೊಂಡಿದೆ. ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, “ರೈತರ ಪಾಲಿಗೆ ದೊಡ್ಡ ನಿರ್ಧಾರ ತೆಗೆದುಕೊಳ್ಳಲಾಗಿದೆ.

ದೇಶದ ವಿವಿಧ ಭಾಗಗಳಲ್ಲಿ ಮುಂಗಾರು ಬಹಳ ಬೇಗ ಪ್ರವೇಶಿಸಿದೆ. ದೇಶದ ಒಟ್ಟು ವಾರ್ಷಿಕ ಆಹಾರ ಧಾನ್ಯ ಉತ್ಪಾದನೆಗೆ ಶೇ. 50ಕ್ಕಿಂತ ಹೆಚ್ಚು ಕೊಡುಗೆ ನೀಡುವ ಬೆಳೆಗಳ ಬಿತ್ತನೆಗೆ ಉತ್ತೇಜನ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ಕಳೆದ 10-11 ವರ್ಷಗಳಲ್ಲಿ ಮುಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಮಾಡಲಾಗಿದೆ. ಇದೇ ರೀತಿ 2025-26ರ ಮುಂಗಾರು ಹಂಗಾಮಿಗೆ ಎಂಎಸ್‌ಪಿಗೆ ಸಂಪುಟ ಅನುಮೋದನೆ ನೀಡಿದೆ. ಒಟ್ಟು ಸುಮಾರು 2,07,000 ಕೋಟಿ ರೂಪಾಯಿ ಮೊತ್ತದ ಯೋಜನೆ ಇದಾಗಿದ್ದು, ಪ್ರತಿಯೊಂದು ಬೆಳೆಗೂ, ವೆಚ್ಚದ ಜೊತೆಗೆ ಶೇ. 50 ಪ್ರತಿಶತ ಲಾಭವನ್ನು ಪರಿಗಣಿಸಲಾಗಿದೆ,” ಎಂದು ಅವರು ವಿವರಿಸಿದ್ದಾರೆ.

ಸಾಮಾನ್ಯ ಮತ್ತು ಎ ಗ್ರೇಡ್ ತಳಿಗಳಿಗೆ ಬೆಂಬಲ ಬೆಲೆಯನ್ನು ಕ್ವಿಂಟಾಲ್‌ಗೆ 69 ರೂ. ಹೆಚ್ಚಿಸಿ ಕ್ರಮವಾಗಿ 2,369 ರೂಪಾಯಿ ಮತ್ತು 2,389 ರೂಪಾಯಿ ನಿಗದಿಪಡಿಸಲಾಗಿದೆ. ಇದು ಮುಂಬರುವ 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಅನ್ವಯವಾಗುತ್ತದೆ.

ಇದನ್ನೂ ಓದಿ Gruhalakshmi helpline number ಗೃಹಲಕ್ಷ್ಮೀ ಹಣ ಜಮೆಯಾಗಿಲ್ಲವೇ ಇಲ್ಲಿ ನೀಡಲಾದ ನಂಬರಿಗೆ ಸಂಪರ್ಕಿಸಿ

ಇನ್ನು ಬೇಳೆಕಾಳುಗಳಲ್ಲಿ ತೊಗರಿಬೆಳೆ ಬೆಂಬಲ ಬೆಲೆಯನ್ನು ಸಹ ಹೆಚ್ಚಿಸಲಾಗಿದೆ.  ತೊಗರಿಗೆ  450 ರೂಪಾಯಿ ಹೆಚ್ಚಿಸಲಾಗಿದ್ದು 8,000 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಉದ್ದಿನಬೇಳೆಯ ಎಂಎಸ್‌ಪಿಯನ್ನು 400 ರೂಪಾಯಿ  ಹೆಚ್ಚಿಸಲಾಗಿದ್ದು 7,800 ರೂ.ಗಳಿಗೆ ಮತ್ತು ಹೆಸರುಬೇಳೆಯ ಎಂಎಸ್‌ಪಿಯನ್ನು 86 ರೂಪಾಯಿ ಹೆಚ್ಚಿಸಿ 8,768 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.

Minimum support price increased  ಹುಚ್ಚೆಳ್ಳು ಎಂಎಸ್‌ಪಿ ಭಾರೀ ಏರಿಕೆ

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಹುಚ್ಚೆಳ್ಳು ಎಂಎಸ್‌ಪಿಯನ್ನು ಹೆಚ್ಚು ಏರಿಸಲಾಗಿದೆ. ಪ್ರತಿ ಕ್ವಿಂಟಾಲ್‌ ಹುಚ್ಚೆಳ್ಳುಗೆ 820 ರೂಪಾಯಿ. (9,537 ರೂಪಾಯಿ), ರಾಗಿಗೆ 596 ರೂ. (4,886 ರೂಪಾಯಿ.), ಹತ್ತಿಗೆ 589 ರೂ. (7710 ರೂಪಾಯಿ -ಮಧ್ಯಮ ಎಳೆ, 8,110 ರೂಪಾಯಿ. – ಉದ್ದನೆಯ ಎಳೆ) ಎಳ್ಳಿಗೆ 579 ರೂ. (9,846 ರೂಪಾಯಿ) ಹೆಚ್ಚಿಸಲಾಗಿದೆ. ಮೆಕ್ಕೆಜೋಳಕ್ಕೆ 175 ರೂಪಾಯಿ (2,400 ರೂ.) ಏರಿಸಲಾಗಿದೆ. ಜೋಳಕ್ಕೆ 328 ರೂಪಾಯಿ (ಹೈಬ್ರಿಡ್‌-3,699 ರೂ, ಮಾಲ್ದಂಡಿ- 3,749 ರೂ.) ಹೆಚ್ಚಿಸಲಾಗಿದೆ.

ಎಣ್ಣೆಕಾಳುಗಳಾದ ಶೇಂಗಾಗೆ ಪ್ರತಿ ಕ್ವಿಂಟಾಲ್‌ಗೆ ಎಂಎಸ್‌ಪಿಯನ್ನು 480 ರೂ. (7,263 ರೂ.), ಸೂರ್ಯಕಾಂತಿ ಬೀಜಕ್ಕೆ 441 ರೂಪಾಯಿ (7721), ಸೋಯಾಬಿನ್‌ಗೆ 436 ರೂಪಾಯಿ (5,328 ರೂ. ) ಹೆಚ್ಚಿಸಲಾಗಿದೆ.

Minimum support price increased  ಬಾಜ್ರಾ ಬೆಳೆಗೆ ಗರಿಷ್ಠ ಲಾಭ

ಉತ್ಪಾದನಾ ವೆಚ್ಚದ ಮೇಲಿನ ನಿರೀಕ್ಷಿತ ಲಾಭವನ್ನು ನೋಡಿದಾಗ ಬಾಜ್ರಾದಲ್ಲಿ ಗರಿಷ್ಠ ಶೇ. 63ರಷ್ಟು ಲಾಭ ಇದೆ ಎಂದು ಸರಕಾರ ಹೇಳಿದೆ. ಮೆಕ್ಕೆಜೋಳ ಶೇ. 59, ತೊಗರಿ ಶೇ. 59 ಮತ್ತು ಉದ್ದು ಶೇ. 53ರೊಂದಿಗೆ ನಂತರದ ಸ್ಥಾನದಲ್ಲಿವೆ.

Leave a Comment