Mobile Number : ರಾಜ್ಯದ ರೈತರು ತಮ್ಮ ಬಳಿಯಿರುವ ಮೊಬೈಲ್ ನಂಬರ್ ಹಾಕಿ ತಮಗೆ ಬರ ಪರಿಹಾರ ಹಣ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು.
ಹೌದು, ರೈತ ಬಾಂಧವರೇ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿದರೆ ಸಾಕು, ತಮಗೆ ಬರಗಾಲ ಪರಿಹಾರದ ಮೊದಲ ಕಂತು ಹಾಗೂ ಈಗಿನ ಕಂತು ಇದರೊಂದಿಗೆ ಕಳೆದ ಮೂರು ವರ್ಷಗಳಿಂದ ಬೆಳೆ ಹಾನಿ ಹಾಗೂ ಬರಗಾಲ ಪರಿಹಾರ ನಿಮ್ಮ ಯಾವ ಖಾತೆಗೆ ಯಾವಾಗ ಜಮೆಯಾಗಿದೆ ಹಾಗೂ ಎಷ್ಟು ಬರಗಾಲ ಪರಿಹಾರ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ 2 ಸಾವಿರ ರೂಪಾಯಿ ತಾತ್ಕಾಲಿಕವಾಗಿ ಕಳೆದಮೂರು ತಿಂಗಳ ಹಿಂದೆ ರೈತರ ಖಾತೆಗೆ ಜಮೆ ಮಾಡಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿ.ಈಗ ಕೇಂದ್ರ ಸರ್ಕಾರದ ವತಿಯಿಂದ ಬಿಡುಗಡೆಯಾದ ಬರಗಾಲ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.
ಎಸ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರ ಯಾವ ಬೆಳೆಗೆ ಎಷ್ಟು ಪರಿಹಾರ ನೀಡಬೇಕು?
ಎಸ್.ಡಿಆರ್.ಎಫ್ ಮಾರ್ಗಸೂಚಿಯ ಪ್ರಕಾರ ಶೇ. 33 ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿರುವ ರೈತರಿಗೆ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹಾಗೂ ನೀರಾವರಿ ಪ್ರದೇಶಕ್ಕೆ ಹೆಕ್ಟೇರಿಗೆ 17 ಸಾವಿರ ನೀಡಲಾಗುವುದು. ಆದರೆ ಸದ್ಯ ಪ್ರತಿ ರೈತರಿಗೆ ತಲಾ 2 ಸಾವಿರ ರೂಪಾಯಿಯಂತೆ ತಾತ್ಕಾಲಿಕ ಪರಿಹಾರ ಹಣ ಜಮೆ ಮಾಡಲಾಗಿದೆ.
Mobile Number ನಿಮಗೆಷ್ಟು ಬರ ಪರಿಹಾರ ಜಮೆಯಾಗಿದೆ? ಮೊಬೈಲ್ ನಂಬರ್ ಹಾಕಿ ಹೀಗೆ ಚೆಕ್ ಮಾಡಿ
ಬರ ಪರಿಹಾರ ಹಣ ಯಾವ ಯಾವ ರೈತರಿಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://parihara.karnataka.gov.in/service92/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಬರ ಪರಿಹಾರ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ. ವರ್ಷ 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಋತು ಮುಂಗಾರು ಆಯ್ಕೆ ಮಾಡಿಕೊಳ್ಳಬೇಕು. ವಿಪತ್ತು ಮಾಡಿ ಬರ ಆಯ್ಕೆ ಮಾಡಿಕೊಳ್ಳಬೇಕು. ನಂತರ ಹುಡುಕು ಮೇಲೆ ಕ್ಲಿಕ್ ಮಾಡಬೇಕು.
ಸರ್ವೆ ನಂಬರ್ ಮೇಲೆ ಕ್ಲಿಕ್ ಮಾಡಬೇಕು ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ಸರ್ ನಾಕ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಪಡೆಯಿರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಖಾತೆಗೆ ಬರ ಪರಿಹಾರ ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ.
Mobile Number ಬರಗಾಲ ಪರಿಹಾರ ಜಮೆಯಾಗದಿದ್ದರೆ ರೈತರೇನು ಮಾಡಬೇಕು?
ರೈತರಿಗೆ ಬರಗಾಲ ಪರಿಹಾರ ಹಣ ಜಮೆಯಾಗದಿದ್ದರೆ ಕೂಡಲೇ ನಿಮ್ಮ ಗ್ರಾಮ ಪಂಚಾಯತಿಗೆ ಮಾಹಿತಿ ನೀಡಬೇಕು.ಏಕೆಂದರೆ ಗ್ರಾಮ ಪಂಚಾಯತಿಯಿಂದ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರ ಮಾಹಿತಿಗಳನ್ನು ಅಪ್ಲೋಡ್ ಮಾಡಲಾಗುವುದು.
ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದೆಯೇ?
ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಇರಲೇಬೇಕು. ರೈತರ ಹೆಸರಿಗೆ ಫ್ರೂಟ್ಸ್ ಐಡಿ ಇದ್ದರೆ ಮಾತ್ರ ಅವರಿಗೆ ಬರಗಾಲ ಪರಿಹಾರ ಹಣ ಜಮೆ ಮಾಡಲಾಗುವುದು.
ಇದನ್ನೂಓದಿ : Bele vime money 35 ಕೋಟಿ ಬೆಳೆ ವಿಮೆ ಬಿಡುಗಡೆ-ನಿಮಗೆಷ್ಟು ಜಮೆ? ಇಲ್ಲೇ ಚೆಕ್ ಮಾಡಿ
ಯಾವ ರೈತರ ಹೆಸರಿಗೆ ಫ್ರೂಟ್ಸ್ ಐಡಿ ಇಲ್ಲವೋ ಅವರಿಗೆ ಬರ ಪರಿಹಾರ ಹಣ ಜಮೆಯಾಗುವುದಿಲ್ಲ. ಯಾರ ಹೆಸರಿಗೆ ಫ್ರೂಟ್ಸ್ ಐಡಿ ಇಲ್ಲವೋ ಕೂಡಲೇ ಅವರು ಫ್ರೂಟ್ಸ್ ಐಡಿ ಮಾಡಿಸಿಕೊಳ್ಳಬೇಕು.
Mobile Number ಬೆಳೆ ಹಾನಿ ಪರಿಹಾರ ಪಡೆಯಲು ಫ್ರೂಟ್ಸ್ ನೋಂದಣಿ ಕಡ್ಡಾಯವಾಗಿದೆ
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ ಫ್ರೂಟ್ಸ್ ನೋಂದಣಿ ಮಾಡಿಕೊಳ್ಳದ ರೈತರು ತಮ್ಮ ಆಧಾರ್ ಕಾರ್ಡ್, ಪಹಣಿ ಹಾಗೂ ಬ್ಯಾಂಕ್ ಪಾಸ್ ಬುಕ್ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದ ಕಂದಾಯ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದಲ್ಲಿ ಅಂತಹ ರೈತರು ಬೆಳೆ ಪರಿಹಾರಕ್ಕೆ ಅರ್ಹರಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.