Monsoon rain 2025 : ಈ ಬಾರಿ ನೈರುತ್ಯ ಮುಂಗಾರು ಮೇ 27 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶನಿವಾರ ತಿಳಿಸಿದೆ.
ವಾಡಿಕೆಯಂತೆ ಜೂನ್ 1 ರಂದು ಮಳೆ ಕೇರಳಕ್ಕೆ ಕಾಲಿಡುತ್ತದೆ. ಆದರೆ ಈ ಬಾರಿ 5 ದಿನ ಮುಂಚಿತವಾಗಿ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Monsoon rain 2025 ಹಿಂದೆ ಮುಗಾರು ಮಳೆ ಯಾವಾಗ ಬರುತ್ತಿತ್ತು?
ಹವಾಮಾನ ಇಲಾಖೆಯ ದತ್ತಾಂಶದ ಪ್ರಕಾರ, 2009 ರಲ್ಲಿ ಮೇ 23 ರಂದು ಮಳೆ ಪ್ರಾರಂಭವಾಗಿತ್ತು. ಈ ವರ್ಷ ನಿರೀಕ್ಷೆಯಂತೆ ಮೇ 27 ರಂದು ಕೇರಳಕ್ಕೆ ಮಾನ್ಸೂನ್ ಆಗಮಿಸಿದರೆ16 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಮುಖ್ಯ ಭೂ ಭಾಗದಲ್ಲಿಮುಂಗಾರು ಮಾರುತಗಳು ಬೇಗನೆ ಪ್ರವೇಶ ಮಾಡಿದಂತಾಗುತ್ತದೆ. ಮಳೆ ಕೇರಳವನ್ನು ಪ್ರವೇಶಿಸಿದ ನಂತರ ಭಾರತದ ಮುಖ್ಯ ಭೂಭಾಗದ ಮೇಲೆ ಮಳೆಯ ಆಗಮವನವನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಇದು ಖಾರೀಫ್ ಬಿತ್ತನೆ ಋತುವಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದು ನಿರೀಕ್ಷಿಸಲಾಗಿದೆ.2025 ರ ಮುಂಗಾರು ಋತುವಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯಲಿದೆ ಎಂದು ಏಪ್ರೀಲ್ ನಲ್ಲಿ ಮುನ್ಸೂಚನೆ ನೀಡಿದ್ದ ಐಎಂಡಿ ಎಲ್ ನಿನೋ ಸಾಧ್ಯತೆಯಿದೆ ತಳ್ಳಿಹಾಕಿತ್ತು.
ಇದನ್ನೂ ಓದಿ : Gruhalakshmi pending amount release ಈ ವಾರದಲ್ಲಿ ಗೃಹಲಕ್ಷ್ಮೀ ಪೆಂಡಿಂಗ್ ಹಣ ಹಣ ಜಮೆ 2025
ನಾಲ್ಕು ತಿಂಗಳ ಮುಂಗಾರು ಋತುವಿನಲ್ಲಿ (ಜೂನ್ ನಿಂದ ಸೆಪ್ಟೆಂಬರ್ ) ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಏ. 105 ರಷ್ಟು ಮಳೆಯಾಗಲಿದ್ದು, ಸರಾಸರಿ 97ಸೆಂ.ಮೀ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದ್ದಾರೆ.
ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಒಡಿಸ್ಸಾ, ಛತ್ತಿಸಗಢಛತ್ತಿಸಗಢ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಹೆಚ್ಚಿನ ಮಳೆಯಾಗುವ ನಿರೀಕ್ಷೆಯಿದೆ. ಜಮ್ಮುಮತ್ತು ಕಾಶ್ಮೀರ, ಲಡಾಖ್, ತಮಿಳುನಾಡು, ಬಿಹಾರಹಾಗೂ ಈಶಾನ್ಯ ರಾಜ್ಯಗಳಲ್ಲಿವಾಡಿಕೆಗಿಂತ ಕಡಿಮೆ ಮಳೆಯಾಗಬಹುದು.
Monsoon rain 2025 ನಿಮ್ಮೂರಿನಲ್ಲಿ ಮಳೆ ಯಾವಾಗ ಬರಲಿದೆ?
ನಿಮ್ಮೂರಿನಲ್ಲಿಇಂದು ಮಳೆಯಾಗುತ್ತೋ ಇಲ್ಲವೋ ಹಾಗೂ ನಿಮ್ಮೂರಿನಲ್ಲಿ ಮಳೆ ಯಾವಾಗಬರುತ್ತದೆ ಎಂಬ ಮಾಹಿತಿಯನ್ನು ಸಾರ್ವಜನಿಕರು ಪಡೆಯಬಹುದು.ಹೌದು, ವರುಣಮಿತ್ರ ಸಹಾಯವಾಣಿ ನಂಬರ್ 9243345433 ಗೆ ಕರೆ ಮಾಡಿದರೆ ಸಾಕು, ಈಗ ನೀವು ದಿನನಿತ್ಯದ ಹವಾಮಾನ ವರದಿಯನ್ನುಪಡೆದುಕೊಳ್ಳಬಹುದು. ಇದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ರೈತರು, ಸಾರ್ವಜನಿಕರು ಯಾವುದೇ ಸಮಯದಲ್ಲಿ ಕರೆ ಮಾಡಿ ಮಳೆಯ ಮಾಹಿತಿಯನ್ನುಪಡೆಯಬಹುದು.
Monsoon rain 2025 ಐದು ದಿನ ಮೊದಲೇ ಮಳೆಯ ಮಾಹಿತಿ ಇಲ್ಲಿ ಪಡೆಯಿರಿ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ. ಆ್ಯಪ್ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲಾದ ಮಾಹಿತಿಗಳ ಪ್ರಕಾರ ನೀವು ಆಯ್ಕೆ ಮಾಡಿಕೊಂಡರೆ ಮಂದೆ ನಿಮಗೆ ಮಳೆ ಮಾಹಿತಿ ಸಿಗಲಿದೆ.