Mungaru belehani parihara ಪ್ರಸಕ್ತ ಸಾಲಿನ ಅಂದರೆ 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಿಂದ ಹಾನಿಗೊಳಗಾದ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಪೈಕಿ ಪರಿಹಾರ ತಂತ್ರಾಂಶದ ಮೂಲಕ ನಮೂದಿಸಿದ ರೈತರಿಗೆ ಎನ್.ಡಿ.ಆರ್.ಎಫ್ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯನ್ವಯ ಮೊದಲನೇ ಹಂತದಲ್ಲಿ 33,718 ರೈತ ಫಲಾನುಭವಿಗಳಿಗೆ 13.02 ಕೋಟಿ ರೂಪಾಯಿ ಸಬ್ಸಿಡಿ ಬಿಡುಗಡೆಗೆ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅನುಮೋದನೆ ನೀಡಿದ್ದಾರೆ.
ಯೂಟೂಬ್ ಚಾನೆೆೆಲ್ ಸಬಸ್ಕ್ರೈಬ್ ಮಾಡಿ
ಇನ್ ಪುಟ್ ಸಬ್ಸಿಡಿ ಹಣ ನೇರವಾಗಿ ಆಧಾರ್ ಸಂಖ್ಯೆಗೆ ಜೋಡಣೆ ಹೊಂದಿರುವ ರೈತರ ಬ್ಯಾಂಕ್ ಖಾತೆಗಳಿಗೆ ಮುಂದಿನ 3-4 ದಿನದಲ್ಲಿ ಜಮೆಯಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
Mungaru belehani parihara ಪಹಣಿಗೆ ಆಧಾರ್ ಲಿಂಕ್ ಆಗಿದೆಯೋ ಇಲ್ಲವೋ ಮೊದಲು ಚೆಕ್ ಮಾಡುವುದು ಹೇಗೆ ?
ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುವುದನ್ನು ಚೆಕ್ ಮಾಡಲು ಈ
https://landrecords.karnataka.gov.in/service4
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಬಳಿಯಿರುವ ಮೊಬೈಲ್ ನಂಬಿಗೆ ಓಟಿಪಿ ಬರುತ್ತದೆ. ಆಗ ನೀವು ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಅಲ್ಲಿ ಬರೆದು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭೂಮಿ ನಾಗರಿಕ ಸೇವೆಗಳು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಮೂದಿಸಬೇಕು. ನಂತರ ನಾನು ಇಲ್ಲಿ ಸ್ವಯಂ ಪ್ರೇರಣೆಯಿಂದ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂಬ ಬಾಕ್ಸ್ ಆಯ್ಕೆ ಮಾಡಿ ಅಲ್ಲಿ ಕಾಣುವ Verify ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಧಾರ್ ಅನ್ನು ಯಶಸ್ವಿಯಾಗಿ ಪರಿಶೀಲಿಸಲಾಗಿದೆ ಎಂಬ ಸಂದೇಶ ಕಾಣಿಸುತ್ತದೆ. ಅಲ್ಲಿ ಒಕೆ ಮೇಲೆ ಕ್ಲಿಕ್ ಮಾಡಿದ ನಂತರ ಆಧಾರ್ ಪರಿಶೀಲನೆಯನ್ನು ಬಳಸಿಕೊಂಡು ಅರ್ಜಿದಾರರ ವಿವರಗಳನ್ನು ಭರ್ತಿ ಮಾಡಿ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಇದನ್ನೂ ಓದಿ : Check your pahani in mobile ನಿಮ್ಮ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ 2024
ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು. ನನ್ನ ಆಧಾರ್ ಮಾಹಿತಿ ಹಾಗೂ ಇತರ ಮಾಹಿತಿಗಳನ್ನು ಯುಐಡಿಎಐನೊಂದಿಗೆ ಇಕೆವೈಸಿ ದೃಢೀಕರಣಕ್ಕೆ ಬಾಕ್ಸ್ ಆಯ್ಕೆಮಾಡಿಕೊಂಡು ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ಓಟಿಪಿ ಪಡೆಯಿರಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
Mungaru belehani parihara ನಿಮ್ಮ ಮೊಬೈಲ್ ನಲ್ಲಿ ಯಾವಯಾವ ಮಾಹಿತಿ ಕಾಣಿಸುತ್ತದೆ?
ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ಊರು, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ.ಇದರೊಂದಿಗೆ ನಿಮ್ಮ ಊರು ವಿಳಾಸ ಹಾಗೂ ಫೋಟೋ ಸಹ ಕಾಣಿಸುತ್ತದೆ.
ಅಲ್ಲಿ ಕಾಣುವ ಲಿಂಕ್ ಆಧಾರ್ ಮೇಲೆ ಕ್ಲಿಕ್ ಮಾಡಬೇಕು ಆಗ ನಿಮ್ಮ ಆಧಾರ್ ಕಾರ್ಡಿಗೆ ಯಾವ ಯಾವ ಪಹಣಿ ಲಿಂಕ್ ಆಗಿದೆ ಆ ಸರ್ವೆ ನಂಬರ್ ಗಳು ಕಾಣಿಸುತ್ತವೆ. ಒಂದು ವೇಳೆ ಪಹಣಿ ಲಿಂಕ್ ಆಗದಿದ್ದರೆ ಭೂಮಿ ಲಿಂಕ್ ಡಿಟೇಲ್ ನಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಿ ಸರ್ವೆ ನಂಬರ್ ನಮೂದಿಸಿ ಲಿಂಕ್ ಮಾಡಬೇಕು.
Mungaru belehani parihara ರೈತರಿಗೆ ಆಧಾರ್ ಪಹಣಿ ಲಿಂಕ್ ಮಾಡದಿದ್ದರೆ ಯಾವ ಸೌಲಭ್ಯಗಳು ಸಿಗುವುದಿಲ್ಲ?
ರೈತರು ತಮ್ಮ ಜಮೀನಿನ ಪಹಣಿ ಗೆ ಆಧಾರ್ ಲಿಂಕ್ ಮಾಡಿಸದಿದ್ದಲ್ಲಿ ಅಂತಹ ರೈತರಿಗೆ ಸರ್ಕಾರ ಸೌಲಭ್ಯಗಳಾದ ಬೆಳೆ ಹಾನಿ ಪರಿಹಾರ, ಬರಗಾಲ ಪರಿಹಾರ, ಬೆಳೆ ವಿಮೆ ಪರಿಹಾರ, ಬ್ಯಾಂಕ್ ಸಾಲ ಸೇರಿದಂತೆ ಇನ್ನಿತರ ಸೌಲಭ್ಯಗಳಿಂದ ವಂಚಿತರಾಗುತ್ತಾರೆ.