Mutation check here : ರೈತ ಬಾಂಧವರಿಗೆ ನಮಸ್ಕಾರ. ಇಂದು ನಿಮಗಾಗಿ ಅತೀ ಮುಖ್ಯವಾದ ದಾಖಲೆ ಬಗ್ಗೆ ತಿಳಿಸುತ್ತೇನೆ. ಅದೇನೆಂದರೆ ಮುಟೇಶನ್.
ರೈತರ ಜಮೀನಿಗೆ ಸಂಬಂಧಿಸಿದ ದಾಖಲೆಗಳಲ್ಲಿ ಅತ್ಯಂತ ಪ್ರಮುಖವಾದ ದಾಖಲೆ ಮುಟೇಶನ್ ಆಗಿರುತ್ತದೆ. ಹೌದು ರೈತ ಬಾಂಧವರೇ ನಿಮಗೆ ಇಂದು ಮುಟೇಶನ್ ದಾಖಲೆ ಬಗ್ಗೆ ತಿಳಿಸುತ್ತೇನೆ. ರೈತರ ಬಳಿ ಮುಟೇಶನ್ ಇರುವುದು ಅತೀ ಮುಖ್ಯವಾಗಿದೆ. ಜಮೀನಿನ ಆರ್.ಟಿ.ಸಿ ಪಹಣಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಜಮೀನಿನ ಮುಟೇಶನ್ ಆಗಿರುತ್ತದೆ. ಈ ಮುಟೇಶನ್ ಪಡೆಯಲು ಈಗ ರೈತರು ತಹಶೀಲ್ದಾರ ಕಚೇರಿಗೆ ಹೋಗಬೇಕಿಲ್ಲ. ನಾಡ ಕಚೇರಿಗಳ ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ.ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಕೇವಲ ಒಂದೇ ನಿಮಿಷದಲ್ಲಿ ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಕೇವಲ ಒಂದೇ ನಿಮಿಷದಲ್ಲಿ ಮುಟೇಶನ್ ಪ್ರತಿ ಡೌನ್ಲೋಡ್ ಮಾಡಬಹುದು. ಅಥವಾ ( Mutation check here ) ಚೆಕ್ ಮಾಡಬಹುದು? ಹೌದು, ರೈತ ಮಿತ್ರರೆ ಈ ಕೆಳಗೆ ನೀಡಲಾದ ಮಾಹಿತಿಗಳ ಪ್ರಕಾರ ನೀವು ಚೆಕ್ ಮಾಡಬಹುದು.
Mutation check here ಜಮೀನಿನ ಮುಟೇಶನ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ?
ರೈತ ಬಾಂಧವರು ತಮ್ಮಲ್ಲಿರುವ ಮೊಬೈಲ್ ನಲ್ಲಿ ಜಮೀನಿನ ಮುಟೇಶನ್ ಡೌನ್ಲೋಡ್ ಮಾಡಲು ಈ
https://landrecords.karnataka.gov.in/service53/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಕಂದಾಯ ಇಲಾಖೆಯ ಭೂಮಿ ತಂತ್ರಾಂಶ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಸರ್ವೆ ನಂಬರ್ ವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು, ಹೋಬಳಿ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಂತರ ನೀವು ನಿಮ್ಮ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ನಂತರ ಸರ್ನೋಕ್ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ ನೀವು ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ವೀವ್ ಮುಟೇಶನ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ರಿಪೋರ್ಟ್ ಕಾಣಿಸುತ್ತದೆ.
ಮುಟೇಶನ್ ಪೇಜ್ ಓಪನ್ ಆಗಿದ್ದನಂತರ ನಿಮಗೆ ಮುಟೇಶನ್ ಸಮ್ಮರಿ ಕಾಲಂ ನಲ್ಲಿ ನಿಮ್ಮ ಸರ್ವೆ ನಂಬರ್, ಹಿಸ್ಸಾ ನಂಬರ್, ಜಮೀನು ಯಾವ ವರ್ಷ ಖರೀದಿಸಲಾಗಿದೆ. ರೈತರ ಹೆಸರಿಗೆ ಮುಟೇಶನ್ ಯಾವಾಗ ಆಗಿದೆ ತಹಶೀಲ್ದಾರ ರವರು ಅನುಮೋದಿಸಿದ ದಿನಾಂಕ ಕಾಣಿಸುತ್ತದೆ.
ಮುಟೇಶನ್ ಪ್ರಕಾರ ಜಮೀನಿನ ಮಾಲಿಕರು ಯಾರಿದ್ದಾರೆ? ಚೆಕ್ ಮಾಡಿ
ಜಮೀನಿನ ಮಾಲಿಕರು ಯಾರು, ಆ ಮಾಲಿಕರ ಹೆಸರು ಸೇರಿದಂತೆ ಇನ್ನಿತರ ಮಾಹಿತಿ ಕಾಣಿಸುತ್ತದೆ. ಈ ಮಾಹಿತಿಯನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Mutation check here ಜಮೀನು ಬದಲಾವಣೆಯ ಮಾಹಿತಿ
ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಹಕ್ಕು ಬದಲಾವಣೆಯ ಮಾಹಿತಿ ಇರುತ್ತದೆ. ಅಂದರೆ ಯಾರು ಯಾರಿಗೆ ಜಮೀನು ವರ್ಗಾವಣೆ ಮಾಡಿದ್ದಾರೆ. ಅಂದರೆ ಹಕ್ಕು ಬದಲಾವಣೆಯ ಪಡೆದವರು ಯಾರು ಹಾಗೂ ಎಷ್ಟು ಎಕರೆ ಜಮೀನು ವರ್ಗಾವಣೆಯಾಗಿದೆ ಎಂಬ ಸಂದೇಶ ಸಹ ಕಾಣುತ್ತದೆ. ( Mutation check here ) ಇದೆಲ್ಲಾ ಮಾಹಿತಿಯನ್ನು ಇಲ್ಲೇ ಚೆಕ್ ಮಾಡಬಹುದು.
ಇದನ್ನೂ ಓದಿ : Pm kisan beneficiary list ನಲ್ಲಿ ನಿಮ್ಮ ಹೆಸರು ಚೆಕ್ ಮೊಬೈಲ್ ನಲ್ಲಿ ಮಾಡಿ
ರೈತ ಮಿತ್ರರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ ನೀವು ನಿಮ್ಮ ಸ್ನೇಹಿತರಿಗೆ ಬಂಧು ಬಳಗದವರಿಗೆ ಶೇರ್ ಮಾಡಿಕೊಳ್ಳಬಹುದು. ಏಕೆಂದರೆ ಜಮೀನಿನ ಮುಟೇಶನ್ ಪ್ರತಿಯೊಬ್ಬ ರೈತರಿಗೆ ಮುಖ್ಯವಾಗಿರುತ್ತದೆ. ಜಮೀನಿನ ಮುಟೇಶನ್ ರೈತರಿಗೆ ಬಹಳ ಮುಖ್ಯವಾದ ದಾಖಲೆಯಾಗಿರುವುದರಿಂದ ನೀವು ನಿಮ್ಮ ಸ್ನೇಹಿತರಿಗೆ ತಿಳಿಸಬಹುದು.
ನಿಮಗೆ ಉಪಯುಕ್ತವೆನಿಸಿದರೆ ನೀವು ಕಾಮೆಂಟ್ ಮಾಡಿ ತಿಳಿಸಬಹುದು. ನಿಮ್ಮ ಕಾಮೆಂಟ್ ಗಳೇ ನಮಗೆ ಸ್ಪೂರ್ತಿ ನೀಡುತ್ತದೆ.ಅದನ್ನೇ ನಾವು ಆಶೀರ್ವಾದವೆಂದು ಸ್ವೀಕರಿಸುತ್ತೇವೆ.