Nabour land details ನಿಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾರಿಗೆಷ್ಟು ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Nabour land details : ರೈತರ ತಮ್ಮ ಜಮೀನಿನ ಸುತ್ತಮುತ್ತಲಿನ ಅಂದರೆ ಅಕ್ಕಪಕ್ಕದಲ್ಲಿ ಯಾರಿಗೆಷ್ಟು ಜಮೀನಿದೆ ಎಂಬುದನ್ನು ಈಗ ಮೊಬೈಲ್ ನಲ್ಲಿ ಚೆಕ್ ಮಾಡಬಹುದು.

ಹೌದು, ರೈತಮಿತ್ರರೆ ರೈತರ ಪಹಣಿಯಲ್ಲಿ ತೋರಿಸಿದಂತೆ ನಿಮ್ಮ ಹಾಗೂ ಅಕ್ಕಪಕ್ಕದವರ ಹೆಸರಿನಲ್ಲಿ ಜಮೀನು ಇದೆಯೇ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲೇ ಚೆಕ್ ಮಾಡಬಹುದು.

ಜಮೀನಿಗೆ ಸಂಬಂಧಿಸಿದ ಹಾಗೂ ರೈತರಿಗೆ ಉಪಯೋಗವಾಗುವಂತಹ ಮಾಹಿತಿಗಳು ಈಗ ಆನ್ಲೈನ್ ನಲ್ಲೇ ಸಿಗುತ್ತಿದೆ. ರೈತರಿಗೆ ಸುಲಭವಾಗಿ ಜಮೀನಿಗೆ ಸಂಬಂಧಿಸಿದ ಮಾಹಿತಿ ಸಿಗಲೆಂಬ ಉದ್ದೇಶದಿಂದ ಕಂದಾಯ ಇಲಾಖೆಯು ಆನ್ಲೈನ್ ವ್ಯವಸ್ಥೆ ಮಾಡಿದೆ. ಹೌದು ರೈತ ಮಿತ್ರರೇ ನೀವು ನಿಮ್ಮ ಜಮೀನಿನ ಪಹಣಿ, ಮುಟೇಶನ್, ಖಾತಾ ಸೇರಿದಂತೆ ಇನ್ನಿತರ ದಾಖಲೆ ಪಡೆಯಬಹುದು. ಇದರೊಂದಿಗೆ ಜಮೀನಿನ ಅಳತೆ ಮಾಡುವ ವ್ಯವಸ್ಥೆ, ಮೋಜಿನಿಗೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹುದು.

Nabour land details ಜಮೀನಿನ ಅಕ್ಕಪಕ್ಕದವರಿಗೆ ಎಷ್ಟು ಜಮೀನಿದೆ? ಹೀಗೆ ಚೆಕ್ ಮಾಡಿ

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಯಾರ ಹೆಸರಿಗೆ ಎಷ್ಟು ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ಪಹಣಿ, ಮುಟೇಶನ್, ಖಾತಾ, ಆಕಾರಬಂದ್ ಸೇರಿದಂತೆ ಇನ್ನಿತರ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿನೀವು ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು.ಇದಾದ ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನೀವು ಯಾವ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಯಾರ ಹೆಸರಿಗೆ ಎಷ್ಟು ಜಮೀನಿಗೆ ಎಂಬುದನ್ನು ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ನಿಮ್ಮ ಸರ್ವೆ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಇದಾದನಂತರ surnoc  ಹಾಗೂ Hissa No ನಲ್ಲಿ  ಸ್ಟಾರ್ (*) ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

land RTC mutation

Nabour land details ಸರ್ವೆ ನಂಬರ್ ನಲ್ಲಿ ಏನೇನು ಮಾಹಿತಿ ಸಿಗಲಿದೆ?

ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರ್ ಅಕ್ಕ ಪಕ್ಕದಲ್ಲಿ ಯಾರು ಯಾರು ಜಮೀನಿನ ಮಾಲಿಕರಿದ್ದಾರೆ ಅವರ ಹೆಸರು ಕಾಣಿಸುತ್ತದೆ. ಅದರ ಮುಂದುಗಡೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದು ಕಾಣಿಸುತ್ತದೆ.

ಇದನ್ನೂ ಓದಿ Parihara hana 18 ಲಕ್ಷ ಈ ರೈತರ ಖಾತೆಗೆ ವಾರದೊಳಗೆ ಬರ ಪರಿಹಾರ ಜಮೆ-ಕೃಷ್ಣ ಭೈರೇಗೌಡ ನಿಮ್ಮ ಹೆಸರು ಚೆಕ್ ಮಾಡಿ

ಇದರೊಂದಿಗೆ ಅವರ ಹೆಸರಿಗಿರುವ ಖಾತಾ ನಂಬರ್ ಸಹ ಕಾಣಿಸುತ್ತದೆ.  ಇದಾದ ನಂತರ ನೀವು View ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

Nabour land details ಪಹಣಿಯಲ್ಲಿ ಜಮೀನಿನ ಮಾಲಿಕರ ಹೆಸರು ಹಾಗೂ ಇನ್ನಿತರ ಮಾಹಿತಿ ಸಿಗಲಿದೆ

ಅದೇ ನೀವು ನಮೂದಿಸಿದ ಸರ್ವೆ ನಂಬರ್  ಪಹಣಿಯಾಗಿರುತ್ತದೆ.  ಇಲ್ಲಿ ಜಮೀನಿನ ಮಾಲಿಕರ ಹೆಸರು, ಅವರ ಹೆಸರಿಗಿರುವ ಜಮೀನು ಹಾಗೂ ಮುಟೇಶನ್ ಯಾವಾಗ ಆಗಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅವರು ತಮ್ಮ ಜಮೀನಿನಲ್ಲಿ ಯಾವ ಯಾವ ಬೆಳೆ ಹಾಕಿದ್ದಾರೆ. ಮುಂಗಾರು ಹಂಗಾಮಿಗೆ ಯಾವ ಬೆಳೆ ಬಿತ್ತಿದ್ದಾರೆ ಎಂಬ ಮಾಹಿತಿ ಸಹ ಕಾಣಿಸುತ್ತದೆ.

ರೈತರಿಗೆ ಜಮೀನಿಗೆ ಸಂಬಂಧಿಸಿದ ಮಾಹಿತಿಗಳು ಸುಲಭವಾಗಿ ಸಿಗಲೆಂಬ ಉದ್ದೇಶದಿಂದಾಗಿ ಈ ಲೇಖನ ಬರೆಯಲಾಗುತ್ತಿದೆ. ರಾಜ್ಯದ ರೈತರಿಗೆ ಇಂತಹ ಮಾಹಿತಿ ತುಂಬಾ ಉಪಯುಕ್ತವಾಗಲಿದೆ. ನಿಮಗೆ ಈ ಲೇಖನ ಇಷ್ಟವಾದರೆ  ನಿಮ್ಮ ಸ್ನೆಹಿತರಿಗೆ ಬಂಧು ಬಳಗದವರಿಗೆ ಶೇರ್ ಮಾಡಬಹುದು.ಇಂತಹ ಲೇಖನ ಅವರಿಗೂ ಉಪಯುಕ್ತವಾಗಲಿದೆ.

Leave a Comment