National Horticulture fair 2025 : ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಎಚ್ಆರ್) ವತಿಯಿಂದ ಫೆಬ್ರವರಿ 27 ರಿಂದ ಮಾರ್ಚ್ 1 ರವರೆಗೆ ಹೆಸರುಘಟ್ಟದಲ್ಲಿರುವ ಐಐಎಚ್ಆರ್ ಆವರಣದಲ್ಲಿ ರಾಷ್ಟ್ರೀಯ ತೋಟಗಾರಿಕೆ ಮೇಳ – 2025 ಹಮ್ಮಿಕೊಳ್ಳಲಾಗಿದೆ.
ಬೆಂಗಳೂರಿನ ಸೊಸೈಟಿ ಫಾರ್ ಪ್ರಮೋಷನ್ ಆಫ್ ಹಾರ್ಟಿಕಲ್ಚರ್ ಬೆಸ್ಟ್ ಹಾರ್ಟ್, ಕೃಷಿ ತಂತ್ರಜ್ಞಾನ ಅನ್ವಯಿಕ ಸಂಶೋಧನಾ ಸಂಸ್ಥೆ ಸಹಯೋಗದಲ್ಲಿ ವಿಕಸಿತ ಭಾರತಕ್ಕಾಗಿ ತೋಟಗಾರಿಕೆ ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ ಘೋಷ ವಾಕ್ಯದೊಂದಿಗೆ ಈ ಮೇಳ ನಡೆಯಲಿದೆ.
National Horticulture fair 2025 ತೋಟಗಾರಿಕೆ ಮೇಳದಲ್ಲಿ ಏನೇನಿರಲಿದೆ?
ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಇರಲಿದೆ. ಪ್ರತಿ ಹೆಕ್ಟೇರಿಗೆ 80 ಟನ್ ಇಳುವರಿ ಬರುವ ಕಲ್ಲಂಗಡಿ ಸೆಲೆಕ್ಷನ್- 4 ಪ್ರತಿ ಹೆಕ್ಟೇರಿಗೆ 48 ಟನ್ ಇಳುವರಿ ಸಾಮರ್ಥ್ಯದ ಮತ್ತು ಅಂಟುಕಾಂಡ ಕೊಳೆ ರೋಗ ನಿರೋಧಕ ಶಕ್ತಿ ಹೊಂದಿರುವ ಸೋರೆಕಾಯಿ, ಅರ್ಕಾ ಶ್ರೇಯಸ್, ಎಲೆ ಸುರುಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ.

ಮಿಶ್ರ ತಳಿಗಳು ಅರ್ಕಾ ಧೃತಿ ಮತ್ತು ಅರ್ಕಾ ನಿಹಿರಾ, ಪ್ರತಿ ಗಿಡಕ್ಕೆ 185 ಕೆಜಿ ಹಣ್ಣುಗಳನ್ನು ನೀಡುವ ಅವಕಾಡೋ (ಬೆಣ್ಣೆ ಹಣ್ಣು) ಅರ್ಕಾ ಕೂರ್ಗ್ ರವಿ, ಅದೇ ರೀತಿ ಪ್ರತಿ ಗಿಡಕ್ಕೆ 90 ರಿಂದ120 ಹಣ್ಣುಗಳನ್ನು ಕೊಡುವ ಜಾವಾ ರೋಸ್ ಆ್ಯಪಲ್ ಸಿಎಚ್ಇಎಸ್ಎಂ 1 ತಳಿಯ ಪ್ರದರ್ಶನವಾಗಲಿದೆ.
ಇದನ್ನೂ ಓದಿ : Ekyc list ಇಕೆವೈಸಿ ಆಗದಿರುವ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2025
ಕೆಂಪು ಡ್ರ್ಯಾಗನ್ ಹಣ್ಣಿನ ಪುಡಿ ತಂತ್ರಜ್ಞಾನ, ಅರ್ಕಾ ಹಲಸಿನಕಾಯಿ ಪ್ರೋಜನ್ ಪ್ಯಾಟೀಸ್ ಮತ್ತು ಕಬಾಬ್ ಹಾಗೂ ಚಕ್ಕೋತ ಅರ್ಕಾ ಚಂದ್ರ, ಅರ್ಕಾ ಅನಂತ, ಸೀತಾಫಲ, ಅರ್ಕಾ ನೀಲಾಂಚಲ್ ವಿಕ್ರಮ್, ಡ್ರ್ಯಾಗನ್ ಹಣ್ಣಿನಲ್ಲಿ ಟ್ರೈನಿಂಗ್ ಸಿಸ್ಟಂ, ಎಲೆ ಸುರಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ ತಳಿಗಳು, ಅರ್ಕಾ ಗಗನ್, ಅರ್ಕಾ ಯಶಸ್ವಿ, ಅರ್ಕಾ ಸಾನ್ವಿ, ಅರ್ಕಾ ತನ್ವಿ, ಅರ್ಕಾ ತೇಜಸ್ವಿ ಮತ್ತು ಎಲ್ಮ್ ಅಣಬೆಯಲ್ಲಿ ಅರ್ಕಾ ವಿಟಮಿನ್ ಡಿ ಪುಷ್ಟೀಕರಣ ತಂತ್ರಜ್ಞಾನ ಪ್ರದರ್ಶನಗೊಳ್ಳಲಿದೆ.
National Horticulture fair 2025 ಈ ಚಾವಡಿನಲ್ಲಿ ರೈತರಿಗೆ ಸಿಗಲಿದೆ ಎಲ್ಲಾ ಸರ್ವೆ ನಂಬರ್ ಮಾಹಿತಿ
ರೈತರಿಗೆ ಸಹಕಾರಿಯಾಗುವ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮೊಬೈಲ್ ಆ್ಯಪ್ ಗಳು ಇನ್ನೂ ಮುಂದೆ ಇ ಚಾವಡಿ ಎಂಬ ಒಂದೇ ವೆಬ್ಸೈಟ್ ನಲ್ಲಿ ಲಭ್ಯವಾಗಲಿದೆ.
ರೈತರಿಗೆ ಅನುಕೂಲವಾಗುವಂತಹ ಕಂದಾಯ ಇಲಾಖೆಗೆ ಸಂಬಂಧಿಸಿದ ಎಲ್ಲಾ ಮೊಬೈಲ್ ಅಪ್ಲಿಕೇಶನ್ ಗಳನ್ನು ಇ ಚಾವಡಿ ವೆಬ್ಸೈಟ್ ನಲ್ಲಿ ಕಲ್ಪಿಸಲಾಗುವುದು.
National Horticulture fair 2025 ಇ ಚಾವಡಿಯಿಂದ ಯಾವ ಯಾವ ಮಾಹಿತಿ ಸಿಗಲಿದೆ?
ಕೃಷಿ ಭೂಮಿಯ ಮೇಲಿನ ವಹಿವಾಟಿನ ವಿವರಗಳು ಒಂದೇ ಸೂರಿನಡಿ ಜಿಪಿಎಸ್ ಪ್ಲಾಟ್ ಫಾರ್ಮ್ ನಲ್ಲಿ ಸಿಗಲಿದೆ. ಹೌದು, ರೈತರು ಈ
https://rdservices.karnataka.gov.in/echawadi/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ ಇ ಚಾವಡಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Advanced Search ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch Detail ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ನಿಮ್ಮ ಊರಿನ ಸುತ್ತಮುತ್ತಲಿರುವ ಸರ್ವೆ ನಂಬರ್ ಗಳು ಕಾಣಿಸುತ್ತವೆ.
ಗ್ರಾಮದ ನಕ್ಷೆಯಲ್ಲಿ ಕೆಂಪು ಬಣ್ಣದಲ್ಲಿ ಗುರುತಿಸಲಾದ ಸಂಖ್ಯೆಯು ವಹಿವಾಟಿನಲ್ಲಿ ಸಂಪೂರ್ಣ ಅಥವಾ ಹಿಸ್ಸಾ ನಂಬರ್ ಒಳಗೊಂಡಿರುತ್ತದೆ. ಅಲ್ಲಿ ನಿಮ್ಮ ಊರಿನ ಮ್ಯಾಪ್ ಸಹ ಕಾಣಿಸುತ್ತದೆ. ನಿಮ್ಮಊರಿನಲ್ಲಿ ಗುಡುಗುಂಡಾರ ಅಥವಾ ಇನ್ಯಾವುದೇ ಪ್ರಮುಖ ಸ್ಥಳಗಳಿದ್ದರೆ ಕಾಣಿಸುತ್ತದೆ. ಅಲ್ಲಿ ಊರಿನ ಮನೆಗಳು ಕಾಣಿಸುತ್ತವೆ. ನೀವು ಝೂಮ್ ಮಾಡಿ ನೋಡಬಹುದು. ನಿಮ್ಮಊರಿನ ಮೂಲಕ ಹಾದು ಹೋಗುವ ರಸ್ತೆಗಳು ಸಹ ಕಾಣಿಸುತ್ತವೆ.





