Orignial land tippani ನಿಮ್ಮ ಜಮೀನಿನ ಟಿಪ್ಪಣಿ, ಪೋಡಿ ಮೊಬೈಲ್ ನಲ್ಲೇ ಚೆಕ್ ಮಾಡಿ 2024

Written by Admin

Published on:

Spread the love

Orignial land tippani : ರೈತರ ಅಂಗೈಯಲ್ಲೇ ಈಗ ಜಮೀನಿನ ದಾಖಲೆಗಳು ಸಿಗಲಿವೆ.

ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲಿ ಈಗ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಸಿಗುತ್ತವೆ. ರೈತರು ತಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು, ಜಮೀನಿನ ಟಿಪ್ಪಣಿ, ಮೂಲ ಸರ್ವೆ ಪ್ರತಿ ಹಾಗೂ ಪೋಡಿ ಟಿಪ್ಪಣಿಯನ್ನು ಕೇವಲ ಒಂದೇ ನಿಮಿಷದಲ್ಲಿ ಪಡೆಯಬಹುದು.

Orignial land tippani

ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ರೈತರು ಈಗ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ, ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಪಡೆಯಲು ಯಾವ ತಹಶೀಲ್ದಾರ, ನಾಡ ಕಚೇರಿಗಳಿಗೆ ಹೋಗಬೇಕಿಲ್ಲ, ಯಾವ ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಂತುಕೊಳ್ಳುವ ಅಗತ್ಯವಿಲ್ಲ. ಕಚೇರಿಗಳ ಮುಂದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ಕಾಯಬೇಕಿಲ್ಲ,  ನಿಮ್ಮ ಹತ್ತಿರ ಇರುವ ಸ್ಮಾರ್ಟ್ ಫೋನ್ ನಲ್ಲಿ ಎಲ್ಲಾ ದಾಖಲೆಗಳನ್ನು ಒಂದೇ ನಿಮಿಷದಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

Orignial land tippani ಮೊಬೈಲ್ ನಲ್ಲೇ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಸರ್ವೆ ಪೋಡಿ ಟಿಪ್ಪಣಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮಲ್ಲಿರುವ ಸ್ಮಾರ್ಟ್ ಫೋನ್ ನಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ ಹಾಗೂ ಹಿಸ್ಸಾ ಸರ್ವೆ ಸರ್ವೆ ಪೋಡಿ ಟಿಪ್ಪಣಿ ಚೆಕ್ ಮಾಡಲು ಈ

https://bhoomojini.karnataka.gov.in/service35/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಒಂದು ವೇಳೆ ನಿಮಗೆ I am not Robot ಆಯ್ಕೆ ಕಂಡರೆ ಬಾಕ್ಸ್ ಆಯ್ಕೆ ಮಾಡಬೇಕು. ನಂತರ  ಆಗ ಭೂ ಕಂದಾಯ ಇಲಾಖೆಯ ಸರ್ವೆ ಡಾಕುಮೆಂಟ್ಸ್ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಯಾವ ಜಿಲ್ಲೆಗೆ ಸಂಬಂಧಿಸಿದ್ದಾರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.

ಇದಾದ ಮೇಲೆ ಹೋಬಳಿ ಆಯ್ಕೆ ಮಾಡಿಕೊಂಡು ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ರೈತರು ಸರ್ವೆ ನಂಬರ್ ಹಾಕಬೇಕು. ಸರ್ನೋಕ್ ಕಾಲಂ ಹಾಗೂ ಹಿಸ್ಸಾ ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ Search ಹಾಗೂ  View Akarband ಎರಡು ಆಯ್ಕೆಗಳು ಕಾಣಿಸುತ್ತದೆ. ನೀವು Search ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ Drought compensation ಈ ರೈತರ ಖಾತೆಗೆ ಬರ ಪರಿಹಾರ ಜಮೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2024

ಆಗ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾವ ಯಾವ ದಾಖಲೆಗಳನ್ನು ಚೆಕ್ ಮಾಡಬಹುದು ಎಂಬ ಪಟ್ಟಿ ಕಾಣಿಸುತ್ತದೆ. ಅಲ್ಲಿ ಮೂಲ ಸರ್ವೆ ಟಿಪ್ಪಣಿ ಪುಸ್ತಕ, ಮೂಲ ಸರ್ವೆ ಪ್ರತಿ ಪುಸ್ತಕ, ಹಿಸ್ಸಾ ಸರ್ವೆ ಪೋಡಿ ಟಿಪ್ಪಣಿ ಹೀಗೆ ಹಲವಾರು ಆಯ್ಕೆಗಳು ನಿಮಗೆ ಕಾಣಿಸುತ್ತವೆ.  ಅದರಲ್ಲಿ ನೀವು ಮೂಲ ಸರ್ವೆ ಟಿಪ್ಪಣಿ ನೋಡಬೇಕಾಗಿದೆ ಎಂದುಕೊಳ್ಳೋಣ.

Orignial land tippani ಮೂಲ ಸರ್ವೆ ಟಿಪ್ಪಣಿ ಪುಸ್ತಕ ಚೆಕ್ ಮಾಡುವುದು ಹೇಗೆ?

land tippani

ಮೂಲ ಸರ್ವೆ ಟಿಪ್ಪಣಿ ಪುಸ್ತಕ ಚೆಕ್ ಮಾಡಬೇಕಾದರೆ ಅಲ್ಲಿ ಕಾಣುವ ಮೂಲ ಸರ್ವೆ ಟಿಪ್ಪಣಿ ಪುಸ್ತಕ ಎದುರುಗಡೆ ಕಾಣುವ View Document ಪಿಡಿಎಫ್ ಮೇಲೆ ಕ್ಲಿಕ್ಮಾಡಬೇಕು. ಆಗ ಮೂಲ ಸರ್ವೆ ಟಿಪ್ಪಣಿ ಪುಸ್ತಕ ತೆರೆದುಕೊಳ್ಳಉತ್ತದೆ. ಅಲ್ಲಿ ನಿಮ್ಮ ಸರ್ವೆ ನಂಬರ್ ಸಹ ಕಾಣಿಸುತ್ತದೆ. ಇದು ರೈತರ ಜಮೀನಿನ ಮೊದಲ ದಾಖಲೆಯಾಗಿರುತ್ತದೆ. ನಿಮ್ಮ ಜಮೀನಿನ ನಕ್ಷೆ ಹೇಗೆ ತಯಾರಿಸಲಾಗಿದೆ ಎಂಬುದನ್ನು ನೋಡಬಹುದು. ಈ ದಾಖಲೆಯನ್ನು ಡೌನ್ಲೋಡ್ ಸಹ ಮಾಡಿಕೊಳ್ಳಬಹುದು.

Orignial land tippani  ಮೂಲ  ಸರ್ವೆ ಪ್ರತಿ ಪುಸ್ತಕ

ಮೂಲ ಸರ್ವೆ ಪ್ರತಿ ಪುಸ್ತಕ ಪಡೆಯಲು ಅದರ ಮುಂದುಗಡೆ ಕಾಣುವ  ಅಂದರೆ ರೆಪಾಸಿಟರಿ ಮುಂದಿರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೂಲ ಸರ್ವೆ ಪ್ರತಿ ಪುಸ್ತಕ ತೆರೆದುಕೊಳ್ಳುತ್ತದೆ. ಈ ದಾಖಲೆಯನ್ನು ಸಹ ನೀವು ಡೌನ್ಲೋಡ್ ಮಾಿಕೊಳ್ಳಬಹುದು. ಇದೇ ರೀತಿ ನಿಮಗೆ ಯಾವ ದಾಖಲೆ ಬೇಕೋ ಆ ದಾಖಲೆಯನ್ನು ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದು.

Leave a Comment