Pm kisan date announced: ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಫಲಾನುಭವಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ಹೌದು, 19ನೇ ಕಂತಿನ ಹಣ ಬಿಡುಗಡೆ ಯಾವಾಗಆಗುತ್ತದೆ ಯಾರು ಯಾರಿಗೆ ಜಮೆಯಾಗುತ್ತದೆ .
ತಮಗೆಲ್ಲಾ ಗೊತ್ತಿದ್ದ ಹಾಗೆ ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಇದನ್ನುಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.
Pm kisan date announced ಪಿಎಂ ಕಿಸಾನ್ ಯೋಜನೆಯ18ನೇ ಕಂತಿನ ಹಣ ಅಕ್ಟೋಬರ್ 5 ರಂದು ಜಮೆ ಮಾಡಲಾಗಿತ್ತು. ಜನವರಿ ತಿಂಗಳ ಮೊದಲ ವಾರದಲ್ಲಿ ಪಿಎಂಕಿಸಾನ್ ದಿನಾಚರಣೆಗೆ ಜಮೆಯಾಗಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಮೊದಲ ವಾರದಲ್ಲಿ ಪಿಎಂ ಕಿಸಾನ್ 19ನೇ ಕಂತಿನ ಹಣ ಜಮೆಯಾಗದಿದ್ದರೆ ಜನವರಿ ತಿಂಗಳ ಅಂತ್ಯದಲ್ಲಿ ರೈತರ ಖಾತೆಗೆ ಜಮೆಯಾಗುವ ಸಾದ್ಯತೆಯಿದೆ.
ಯಾರುಯಾರಿಗೆ ಪಿಎಂ ಕಿಸಾನ್ ಹಣ ಜಮೆಯಾಗಬಹುದು ಎಂಬುದರ ಕುರಿತು ಫಲಾನುಭವಿಗಳ ಪಟ್ಟಿಬಿಡುಗಡೆಯಾಗಿದೆ ಈ ಪಟ್ಟಿಯಲ್ಲಿ ತಮ್ಮಹೆಸರಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.ಅದು ಹೇಗೆ ಅಂದುಕೊಂಡಿದ್ದೀರಾ ? ಇಲ್ಲಿದೆ ನೋಡಿ ಮಾಹಿತಿ.
ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಅಕ್ಟೋಬರ್ 5 ರಂದು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ದೇಶದ 9.5 ಕೋಟಿ ರೈತರ ಖಾತೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಯನ್ನು ಏಕಕಾಲದಲ್ಲಿ ಜಮೆ ಮಾಡಲಾಗಿತ್ತು. ಆದರೆ ಆಗ ಕೆಲವುರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರ ಖಾತೆಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿರಲಿಲ್ಲ. ಯಾವ ಕಾರಣಕ್ಕಾಗಿ ಜಮೆಯಾಗುತ್ತಿಲ್ಲ ಎಂಬುದನ್ನು ಸಹ ಇಲ್ಲಿ ಮಾಹಿತಿ ನೀಡಲಾಗುವುದು.
Pm kisan date announced ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹೊಸ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಇದನ್ನೂ ಓದಿ : Grahalakshmi 15th installment amount credit ಗೃಹಲಕ್ಷ್ಮೀ ಯೋಜನೆಯ 15ನೇ ಕಂತಿನ ಹಣ ಜಮೆ
ಅಲ್ಲಿ ಹೆಸರುಗಳು ಎ ಅಕ್ಷರದಿಂದ ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೀವು ಚೆಕ್ ಮಾಡಲು ಅಲ್ಲಿ ಕಾಣುವ ಮುಂದಿನ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಜಮೆಯಾಗುವ ಸಾಧ್ಯತೆಯಿದೆ.
Pm kisan date announced ಪಿಎಂ ಕಿಸಾನ್ ಈ ಪಟ್ಟಿಯಲ್ಲಿ ಹೆಸರಿದ್ದ ಮಾತ್ರಕ್ಕೆ ಜಮೆಯಾಗಲ್ಲ
ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಪಟ್ಟಿಯಲ್ಲಿ ನಿಮ್ಮಹೆಸರಿದ್ದರೆ ಸಾಲದು, ಈ ಪಟ್ಟಿಯಲ್ಲಿರುವ ರೈತರು ಅರ್ಹತೆ ಪಡೆದಿದ್ದರೂ ಕೆಲವರಿಗೆ ಜಮೆಯಾಗುವುದಿಲ್ಲ. ಏಕೆಂದರೆ ಕೆಲವರಿಗೆ ಇಕೆವೈಸಿ ಮಾಡಿಸಿರುವುದಿಲ್ಲ. ಹಾಗಾಗಿ ಕೆಲವು ರೈತರಿಗೆ ಜಮೆಯಾಗುತ್ತಿಲ್ಲ.
Pm kisan date announced ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೇ?
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಇಕೆವೈಸಿ ಮಾಡಿಸಿರುವುದು ಕಡ್ಡಾಯವಾಗಿರುತ್ತದೆ. ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದ್ದರೆ ಮಾತ್ರ ರೈತರಿಗೆ ಮುಂದಿನ ಕಂತು ಜಮೆಯಾಗಲಿದೆ. ಇಲ್ಲದಿದ್ದರೆ ಮುಂದಿನ ಕಂತು ಜಮೆಯಾಗುವುದಿಲ್ಲ. ನಿಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ನಮೂದಿಸಬೇಕು. ನಮೂದಿಸಬೇಕು.ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇಕೆವೈಸಿ ಆಗಿದ್ದರೆ ಸಕ್ಸೆಸಫುಲಿ ಇಕೆವೈಸಿ ಡನ್ ಎಂಬ ಸಂದೇಶಬರುತ್ತದೆ. ಒಂದುವೇಳೆ ಇಕೆವೈಸಿ ಆಗಿಲ್ಲವಾದರೆ ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬೇಕು.