PM kisan ekyc do within a minute ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲು ಮೊಬೈಲ್ ನಲ್ಲಿ ಇಕೆವೈಸಿ ಹೀಗೆ ಮಾಡಿ 2025

Written by Admin

Published on:

Spread the love

PM kisan ekyc do within a minute : ಪಿಎಂ ಕಿಸಾನ್ ಫಲಾನುಭವಿಳಿಗೆ ಮುಂದಿನ ಕಂತು ಜಮೆಯಾಗಲು ಹಿಂದಿನ ಕಂತು ನಿಮಗೆ ಜಮೆ ಮಾಡುವುದನ್ನು ತಡೆಹಿಡಿದಿದ್ದರೆ ಕೂಡಲೇ ಇಲ್ಲಿ ನೀಡಲಾದ ಮಾಹಿತಿಯಂತೆ ಇಕೆವೈಸಿ ಮಾಡಿದರೆ ಸಾಕು, ನಿಮಗೆ ಮುಂದಿನ ಕಂತಿನ ಹಣ ಜಮೆಯಾಗಲಿದೆ.ಹಾಗಾದರೆ ಮೊಬೈಲ್ ನಲ್ಲಿ ಇಕೆವೈಸಿ ಹೇಗೆ ಮಾಡಬೇಕು? ಇಕೆವೈಸಿ ಮಾಡಲು ಯಾವ ದಾಖಲೆ ಬೇಕು? ಎಲ್ಲಿ ಇಕೆವೈಸಿ ಮಾಡಬೇಕು? ಇಕೆವೈಸಿ ಹಿಂದೆ ಮಾಡಿದ್ದರೆ ಅದನ್ನು ಹೇಗೆ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ನಿಮಗೆ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲ  ವಾರದಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಹೌದು, ಕಳೆದ ಕಂತು ಫೆಬ್ರವರಿ ತಿಂಗಳಲ್ಲಿ ರೈತರ ಖಾತೆಗೆ ಜಮೆಯಾಗಿತ್ತು. ಹೀಗಾಗಿ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಮೆಯಾಗುವ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ತಿಂಗಳ ಮೊದಲ ವಾರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ.

PM kisan ekyc do within a minute ಮೊಬೈಲ್ ನಲ್ಲಿ PM kisan eKYC ಮಾಡಿಸುವುದು ಹೇಗೆ

ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಓಟಿಪಿ ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿರುವ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್  ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು.  ರೈತರು ಈ

https://pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಪಿಎಂ ಕಿಸಾನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮಆಧಾರ್ ಕಾರ್ಡ್ ನ್ನು ನಮೂದಿಸೇಕು. ನಂತರ search ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಇಕೆವೈಸಿ ಆಗಿದ್ದರೆ ಅಲ್ಲಿ EKYC is Already Done ಎಂಬ ಮೆಸೇಜ್ ಕಾಣಿಸುತ್ತದೆ. ಅಲ್ಲಿ ನೀವು ಓಕೆ ಬಟನ್ ಮೇಲೆ ಕ್ಲಿಕ್ ಮಾಡಬಹುದು. ಒಂದು ವೇಳೆ ನಿಮ್ಮ ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿಲ್ಲದಿದ್ದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ನಮೂದಿಸದ ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ನೀವು ನಿಮ್ಮ ಮೊಬೈಲ್ ನಲ್ಲೇ ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.

PM kisan ekyc do within a minute ಮೊಬೈಲ್ ನಲ್ಲಿ ಇಕೆವೈಸಿ ಮಾಡಲು ಸಮಸ್ಯೆಯಾಗುತ್ತಿದ್ದರೆ ಏನು ಮಾಡಬೇಕು?

ಮೊಬೈಲ್ ನಲ್ಲಿ ಇಕೆವೈಸಿ ಮಾಡಲು ನಿಮಗೆ ಸಮಸ್ಯೆಯಾಗುತ್ತಿದ್ದರೆ ನೀವು ಹ್ತತಿರದ ರೈತ ಸಂಪರ್ಕ  ಕೇಂದ್ರ, ಅಥವಾ ಸಿ.ಎಸ್.ಕೆ ಕೇಂದ್ರಗಳಲ್ಲಿಯೂ ಇಕೆವೈಸಿಯನ್ನು ಮಾಡಿಕೊಳ್ಳಬಹುದು.

PM kisan ekyc do within a minute ಪಿಎಂ ಕಿಸಾನ್ ಕಂತಿನ ಬಗ್ಗೆ ಮಾಹಿತಿ

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿಯನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತದೆ. ಇದನ್ನುಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ ಜಮೆ ಮಾಡಲಾಗುತ್ತದೆ.

PM kisan ekyc do within a minute ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹೊಸ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು  ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು  ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ Bele vime ನಿಮಗೇಕೆ ಬೆಳೆ ವಿಮೆ ಜಮೆಯಾಗಿಲ್ಲ? ಇಲ್ಲಿದೆ ಮಾಹಿತಿ- 2025

ಅಲ್ಲಿ ಹೆಸರುಗಳು ಎ ಅಕ್ಷರದಿಂದ ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೀವು ಚೆಕ್ ಮಾಡಲು ಅಲ್ಲಿ ಕಾಣುವ ಮುಂದಿನ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಜಮೆಯಾಗುವ ಸಾಧ್ಯತೆಯಿದೆ.

Leave a Comment