PM kisan farmers ಗಳಿಗೆ ನಾಳೆ ಪಿಎಂ ಕಿಸಾನ್ 18ನೇ ಕಂತಿನ ಹಣ ಜಮೆ

Written by Admin

Published on:

Spread the love

PM kisan farmers : ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಫಲಾನುಭವಿಗಳಿಗೆ ಗುಡ್ ನ್ಯೂಸ್ ಇಲ್ಲಿದೆ. ನಾಳೆ ಅಂದರೆ ಅಕ್ಟೋಬರ್ 5 ರಂದು ಪಿಎಂ ಕಿಸಾನ್ ಹಣ ರೈತರ ಖಾತೆಗೆ ಜಮೆಯಾಗಲಿದೆ.

ಹಾಗಾಗಿ , ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು  ಇದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ರೈತರು ಚೆಕ್ ಮಾಡಬಹುದು.

Pm Kisan farmers name

ತಮಗೆಲ್ಲಾ ಗೊತ್ತಿದ್ದ ಹಾಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿಇಲ್ಲಿಯವರೆಗೆ 17 ಕಂತುಗಳು ರೈತರ ಖಾತೆಗೆ ಜಮೆಯಾಗಿದೆ.

ಈಗ 18ನೇ ಕಂತಿಗಾಗಿ ಕಾಯುತ್ತಿರುವ ರೈತರು ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಬಹುದು.

PM kisan farmers ಪಿಎಂ ಕಿಸಾನ್ ಯೋಜನೆಯ  ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ತಮ್ಮ ಹೆಸರು ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು.

ಆಗ ನಿಮಗೆ ನೀವು ಆಯ್ಕೆ ಮಾಡಿಕೊಂಡ ಊರಿನಲ್ಲಿ ಯಾರು ಯಾರು ಫಲಾನುಭವಿಗಳಾಗಿದ್ದಾರೆ ಅವರ ಹೆಸರು ಕಾಣಿಸುತ್ತದೆ. ಎ ದಿಂದ ಹೆಸರುಗಳು ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿಕೊಂಡು ಪಟ್ಟಿಯಲ್ಲಿ ನಿಮ್ಮ  ಹೆಸರು ಚೆಕ್ ಮಾಡಿಕೊಳ್ಳಬಹುದು.

PM kisan farmers ಪಿಎಂ ಕಿಸಾನ್ ಯೋಜನೆಯ ಲಾಭ ಸಿಗಲು ಇಕೆವೈಸಿ ಮಾಡಿಸುವುದು ಕಡ್ಡಾಯ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಲು ರೈತರು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.ಯಾವ ಯಾವ ರೈತರು ಇಕೆವೈಸಿ ಮಾಡಿಸಿಲ್ಲವೋ ಅಂತಹ ರೈತರು ಕೂಡಲೇ ಇಕೆವೈಸಿ ಮಾಡಿಸಿಕೊಳ್ಳಬಹುದು. ತಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಬಹುದು.

ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಬೇಕು.ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ಇಕೆವೈಸಿ ಆಗಿದ್ದರೆ ಇಕೆವೈಸಿ ಇಸ್ ಡನ್ ಸಕ್ಸೆಸಫುಲಿ ಎಂಬ ಸಂದೇಶ ಕಾಣಿಸುತ್ತದೆ.

ಇದನ್ನೂ ಓದಿ Check FID Number ಆಧಾರ್ ನಂಬರ್ ಹಾಕಿ ನಿಮ್ಮ ಎಫ್ಐಡಿ ಇಲ್ಲೇ ಚೆಕ್ ಮಾಡಿ 2024

ಇಕೆವೈಸಿ ಆಗಿಲ್ಲವಾದರೆ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಇಕೆವೈಸಿ ಮಾಡಿಸಿಕೊಳ್ಳಬಹುದು.

PM kisan farmers  ಪಿಎಂ ಕಿಸಾನ್ ಮುಂದಿನ ಕಂತು ಯಾವಾಗ ಜಮೆಯಾಗಬಹುದು?

ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಇದೇ ತಿಂಗಳ ಅಂತ್ಯದಲ್ಲಿ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಜಮೆಯಾಗುವ ಸಾಧ್ಯತೆಯಿದೆ. pm kisan beneficiary list

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಪ್ರತಿ ವರ್ಷ 6 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಚುನಾವಣೆ ಮುಗಿದ ನಂತರ ಅಧಿಕಾರಕ್ಕೆ ಬರುವ ಪಕ್ಷವು  ಯೋಜನೆಯ ಹಣವನ್ನುಹೆಚ್ಚಿಸಬಹುದು. ಅಥವಾ ಇದ್ದುದ್ದನ್ನೇ ಮುಂದುವರೆಸಬಹುದು. ಹಾಗಾಗಿ ಯಾರು ಯಾರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಾಗಿದ್ದೀರೋ  ಅವರಿಗೆ ಹಣ ಜಮೆಯಾಗಲಿದೆ.

Leave a Comment