Pm kisan farmers name ಪಿಎಂ ಕಿಸಾನ್ ಹಣ ಯಾರಿಗೆ ಜಮೆ ಯಾರಿಗೆ ಜಮೆಯಾಗಲ್ಲ ಇಲ್ಲಿದೆ ಲಿಸ್ಟ್ 2024

Written by Admin

Updated on:

Spread the love

Pm kisan farmers name : ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಯಾವ ರೈತರಿಗೆ ಜಮೆಯಾಗುತ್ತದೆ ಯಾವ ರೈತರಿಗೆ ಜಮೆಯಾಗುವುದಿಲ್ಲ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಈಗ ಪಿಎಂ ಕಿಸಾನ್ ಹಣ ನೋಂದಣಿ ಮಾಡಿಸಿದ ಎಲ್ಲಾ ರೈತರಿಗೆ ಜಮೆಯಾಗುವುದಿಲ್ಲ. ಹಾಗಾದರೆ ರೈತರೇನು ಮಾಡಬೇಕು? ಇಲ್ಲಿದೆ ಮಾಹಿತಿ.

Pm kisan farmers name ಏನಿದು ಪಿಎಂ ಕಿಸಾನ್ ಯೋಜನೆ?

ಪಿಎಂ ಕಿಸಾನ್ ಯೋಜನೆಯನ್ನು 2019 ರಲ್ಲಿ ಆರಂಭಿಸಲಾಯಿತು. ಹೌದು, ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿದೆ. ಪ್ರತಿ ವರ್ಷ ಮೂರು ಕಂತುಗಳಲ್ಲಿ ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 17 ಕಂತುಗಳ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.  ಈಗ 18 ನೇ ಕಂತಿನ ಹಣ ಸೆಪ್ಟೆಂಬರ್ ಕೊನೆಯ ವಾರ ಅಥವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಜಮೆ ಮಾಡುವ ಸಾಧ್ಯತೆಯಿದೆ.

Pm kisan farmers name ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಹೊಂದಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಜಮೆಯಾಗುವವರ ರೈತರ ಪಟ್ಟಿಯಲ್ಲಿನಿಮ್ಮ ಹೆಸರು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೆಸರು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ 18 ನೇ ಕಂತಿನ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ. ಅಲ್ಲಿ ಅಲ್ಪಾಬೆಟಿಕ್ ಪ್ರಕಾರ ಹೆಸರುಗಳಿರುತ್ತವೆ. ಅಂದರೆ ಎ ಅಕ್ಷರದಿಂದ ಹೆಸರುಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನುನೋಡಿಕೊಂಡು ನಿಮ್ಮ ಹೆಸರು ಚೆಕ್ ಮಾಡಬಹುದು.

ಇದನ್ನೂ ಓದಿ Farm 9 and 11B document ನಿಮ್ಮ ಆಸ್ತಿಗಳ ಫಾರ್ಮ್ 9 ಮತ್ತು 11ಬಿ ಇಲ್ಲೇ ಡೌನ್ಲೋಡ್ ಮಾಡಿ

ಅಲ್ಲಿ ಕೆಳಗಡೆ ಕಾಣಿಸುವ  1,2, 3, 4, 5, 6, ಹೀಗೆ ಅಕ್ಷರದ ಆಧಾರದ ಮೇಲೆ ನೀವು ನಂಬರ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಚೆಕ್ ಮಾಡಬಹುದು.

Pm kisan farmers name ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಯಾರಿಗೆ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಜಮೆಯಾಗಲು ರೈತರು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇನ್ನೂ ಇಕೆವೈಸಿ ಯಾರು ಯಾರು ಮಾಡಿಸಿಲ್ಲವೋ ಕೂಡಲೇ ನಿಮ್ಮ ಹತ್ತಿರ ನೆಟ್ ಸೆಂಟರ್, ಗ್ರಾಮ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ಕೇಂದ್ರಗಳಲ್ಲಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ಕಂತು ನಿಮಗೆ ಜಮೆಯಾಗುವುದಿಲ್ಲ.

Pm kisan farmers name

Pm kisan farmers name  ಪಿಎಂ ಕಿಸಾನ್ ಹಣ ಜಮೆಯಾಗಲು ಆಧಾರ್ ಸೀಡಿಂಗ್ ಮಾಡಿಸಲೇಬೇಕು

ಪಿಎಂ ಕಿಸಾನ್ ಹಣ ನಿಮಗೆ ಜಮೆಯಾಗಲು ನಿಂತಿದ್ದರೆ ಅಂದರೆ ತಡೆಹಿಡಿದಿದ್ದರೆ ಕೂಡಲೇ ನೀವು ಯಾವ ಬ್ಯಾಂಕಿನಲ್ಲಿ ಅಕೌಂಟ್ ಹೊಂದಿದ್ದೀರೋ ಆ ಶಾಖೆಯಲ್ಲಿ ಆಧಾರ್ ಸೀಡ್ ಮಾಡಿಸಬೇಕು. ನಿಮ್ಮ ಅಧಾರ್ ಕಾರ್ಡ್ ದೊಂದಿಗೆ ನೀವು ಬ್ಯಾಂಕಿಗೆ ತೆರಳಿ ಆಧಾರ್ ಸೀಡ್ ಅರ್ಜಿ ಪಡೆದುಕೊಳ್ಳಬೇಕು.  ಬಯೋಮೆಟ್ರಿಕ್ ನೀಡಿ ನೀವು ನಿಮ್ಮ ಆಧಾರ್ ಸೀಡ್ ಮಾಡಿಸಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 9 ಕೋಟಿಗೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಈ ಯೋಜನೆಯು ಅತೀ ಮಹತ್ವದ್ದಾಗಿದೆ..

Leave a Comment