Pm kisan release : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿಯಲ್ಲಿ ನೋಂದಣಿ ಮಾಡಿಸಿದ ರೈತರಿಗೆ ಇಂದು 2 ಸಾವಿರ ರೂಪಾಯಿ ಜಮೆಯಾಗಲಿದೆ.
ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 17ನೇ ಕಂತಿನ ಹಣವನ್ನು ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ವಾರಣಾಸಿಯಿಂದ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. 9.3 ಕೋಟಿ ರೈತರ ಖಾತೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆಯಾಗಲಿದೆ.
Pm kisan release ಯಾವ ರೈತರಿಗೆ ಜಮೆ ಯಾವ ರೈತರಿಗೆ ಜಮೆಯಾಗಲ್ಲ? ಮೊಬೈಲ್ ನಲ್ಲಿ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ಮಾತ್ರಕ್ಕೆ ಎಲ್ಲಾ ರೈತರ ಖಾತೆಗೆ ಹಣ ಜಮೆಯಾಗುವುದಿಲ್ಲ. ಏಕೆಂದರೆ ಈಗ ಪಾರದರ್ಶಕವಾಗಿ ನಿಜವಾದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಅರ್ಹತೆ ಹೊಂದಿದ್ದರು ಯಾವ ರೈತರ ಹೆಸರು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಜಮೀನಿನ ಪಹಣಿಯಲ್ಲಿ ತಾಳೆಯಾಗುವುದಿಲ್ಲವೋ ಅವರ ಖಾತೆಗೆ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.
Pm kisan release ಪಿಎಂ ಕಿಸಾನ್ ಜಮೆಯಾಗಿದೆಯೋ ಇಲ್ಲವೋ ಸ್ಟೇಟಸ್ ಹೀಗೆ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ನಿಮಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/BeneficiaryStatus_New.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ನಮೂದಿಸಿ ನೀವು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
ನಿಮಗೆ ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ ನೀವು ಈ know your registration no. ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಆಗ ನೀವು ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಮೊಬೈಲ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : Check crop insurance money ರೈತರ ಈ ಬೆಳೆಗಳಿಗೆ ಇಷ್ಟು ವಿಮೆ ಹಣ ಜಮೆ? ಹೀಗೆ ಚೆಕ್ ಮಾಡಿ 2024
ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿ ಗೆಟ್ ಡಿಟೇಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ಕಾಣಿಸುತ್ತದೆ. ನಿಮ್ಮ ಹೆಸರು ಕಾಣಿಸುತ್ತದೆ. ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
Pm kisan release ಇಕೆವೈಸಿ ಆದ ರೈತರಿಗೆ ಮಾತ್ರ ಹಣ ಜಮೆ
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರಲ್ಲಿ ಯಾರು ಇಕೆವೈಸಿ ಮಾಡಿಸಿದ್ದಾರೋ ಅಂತಹವರಿಗೆ ಮಾತ್ರ 17ನೇ ಕಂತಿನ ಹಣ ಜಮೆಯಾಗಲಿದೆ. ನಿಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ಇಕವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಇಕೆವೈಸಿ ಚೆಕ್ ಮಾಡುವ ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.
Pm kisan release ಪಿಎಂ ಕಿಸಾನ್ ಯೋಜನೆಗೆ ಯಾರು ಅರ್ಹರು?
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು.ನೋಂದಣಿ ಮಾಡಿಸಿದ ಕುಟುಂಬದಲ್ಲಿ ಪತಿ ಪತ್ನಿ ಅಥವಾ ಮಕ್ಕಳು ಸರ್ಕಾರಿ ನೌಕರರಾಗಿದ್ದಲ್ಲಿ ಅವರಿಗೆ ಹಣ ಜಮೆಯಾಗುವುದಿಲ್ಲ. ಕುಟುಂಬದಲ್ಲಿ 10 ಸಾವಿರ ರೂಪಾಯಿಯವರೆಗೆ ಪಿಂಚಣಿ ಪಡೆಯುತ್ತಿದ್ದರೆ ಅಂತಹವರಿಗೂ ಹಣ ಜಮೆಯಾಗುವುದಿಲ್ಲ. ಒಂದು ವೇಳೆ ಕುಟುಂಬದ ಮುಖ್ಯಸ್ಥರು ತೆರಿಗೆ ಪಾವತಿಸುತ್ತಿದ್ದರೂ ಅವರಿಗೆಹಣ ಜಮೆಯಾಗಲ್ಲ.