Pm kisan release date : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್. ಹೌದು, 17ನೇ ಕಂತಿಗಾಗಿ ಕಾಯುತ್ತಿರುವ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ.
ಲೋಕಸಭಾ ಚುನಾವಣೆ ಮುಗಿಯಿತು. ಜೂನ್ 8 ರಂದು ಮತ್ತೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ 3ನೇ ಬಾರಿಗೆ ಮುಂದುವರೆಯಲಿದ್ದಾರೆ. ಜೂನ್ 8 ರಂದು ನರೇಂದ್ರ ಮೋದಿಯವರು ಪ್ರಮಾಣ ವಚನವನ್ನು ಸಹ ಪಡೆಯಲಿದ್ದಾರೆ. ಜೂನ್ 8 ರ ನಂತರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ದೊರೆಯಲಿದೆ. ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮುಂದಿನ ವಾರ ಗುಡ್ ನ್ಯೂಸ್ ದೊರೆಯುವ ಸಾಧ್ಯತೆಯಿದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 17ನೇ ಕಂತಿನ ಹಣ ಮುಂದಿನ ವಾರ ಜಮೆಯಾಗುವ ಸಾಧ್ಯತೆಯಿರುವದರಿಂದ ರೈತರು ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Pm kisan release date ಈ ಪಟ್ಟಿಯಲ್ಲಿದ್ದ ರೈತರಿಗೆ ಪಿಎಂ ಕಿಸಾನ್ ಹಣ ಜಮೆ?
ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣವನ್ನು ಈ ಕೆಳಗಡೆ ಇರುವ ಪಟ್ಟಿಯಲ್ಲಿರುವ ರೈತರಿಗೆ ಜಮೆ ಮಾಡಲಾಗುವುದು. ಪಟ್ಟಿಯಲ್ಲಿ ನಿಮ್ಮಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ನಿಮ್ಮ ಜಿಲ್ಲೆ ಆಯ್ಕೆ ಮಾಡಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು ನಂತರ ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಫಲಾನುಭವಿಗಳ ಪಟ್ಟಿ ಕಾಣಿಸುತ್ತದೆ.
Pm kisan release date ಏನಿದು ಪಿಎಂ ಕಿಸಾನ್ ಯೋಜನೆ?
ಪಿಎಂ ಕಿಸಾನ್ ಯೋಜನೆಯನ್ನು ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಆರ್ಥಿಕ ನೆರವು ನೀಡುವುದಕ್ಕಾಗಿ ಜಾರಿಗೆ ತರಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷ 6 ಸಾವಿರ ರೂಪಾಯಿಯನ್ನುಮೂರು ಕಂತುಗಳಲ್ಲಿ ಹಣ ಬಿಡುಗಡೆ ಜಮೆ ಮಾಡಲಾಗಿದೆ. ರೈತರಿಗೆ ನಾಲ್ಕು ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಒಟ್ಟು ಒಂದು ವರ್ಷದಲ್ಲಿ 6 ಸಾವಿರ ರೂಪಾಯಿ ಜಮೆ ಮಾಡಲಾಗುವುದು.
ಇದನ್ನೂ ಓದಿ : Bhagyalakshmi status ಭಾಗ್ಯಲಕ್ಷ್ಮೀ ಯೋಜನೆಯಡಿ ನಿಮ್ಮ ಮಗಳ ಹೆಸರಿಗೆಷ್ಟು ಹಣ ಜಮೆ ಇಲ್ಲೇ ಚೆಕ್ ಮಾಡಿ 2024
ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಈಗಾಗಲೇ ದೇಶಾದ್ಯಂತ 9 ಕೋಟಿಗೂ ಹೆಚ್ಚು ರೈತರು ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಈ ಯೋಜನೆಯು ಅತೀ ಮಹತ್ವದ್ದಾಗಿದೆ..
Pm kisan release date ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ನಿಮಗೆ ಜಮೆಯಾಗಿದೆ?
ಪಿಎಂ ಕಿಸಾನ್ ಯೋಜನೆಯ ದೇಶದ ರೈತರಿಗೆ ಇಲ್ಲಿಯವರೆಗೆ ಅವರ ಖಾತೆಗೆ 16 ಕಂತುಗಳು ಜಮೆಯಾಗಿವೆ. ಒಟ್ಟು 16 ಕಂತುಗಳಿಂದ 32 ಸಾವಿರ ರೂಪಾಯಿ ಅವರ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿದೆ. ಯಾರು ಆರಂಭದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೋ ಅವರಿಗೆ 16 ಕಂತುಗಳು ಜಮೆಯಾಗಿವೆ.
Pm kisan release date ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಯಾವಾಗ ಜಮೆಯಾಗಲಿದೆ?
ಪಿಎಂ ಕಿಸಾನ್ ಯೋಜನೆಯ 16 ನೇ ಕಂತು ಫೆಬ್ರವರಿ 28 ರಂದು ಜಮೆ ಮಾಡಲಾಗಿತ್ತು. ಈ ಆಧಾರದ ಮೇಲೆ ಜೂನ್ ತಿಂಗಳಲ್ಲಿ 17ನೇ ಕಂತಿನ ಹಣ ಜಮೆ ಮಾಡಲಾಗುವುದು. ಜೂನ್ ತಿಂಗಳ ಎರಡನೇ ವಾರದಲ್ಲಿ ಹಣ ಜಮೆ ಮಾಡಲಾಗುವುದು. .