Pm kisan18th installment date ರೈತರಿಗೆ ಗುಡ್ ನ್ಯೂಸ್ – ಪಿಎ ಕಿಸಾನ್ ಹಣ ಈ ರೈತರ ಖಾತೆಗೆ ಅಕ್ಟೋಬರ್ 5 ರಂದು ಜಮೆ

Written by Admin

Published on:

Spread the love

Pm kisan18th installment date : ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ. ಅದೇನಪಾ  ಅಂತಂದ್ರೆ ಇದೇ ತಿಂಗಳು ಅಕ್ಟೋಬರ್ 5ರಂದು ದೇಶದ ಎಲ್ಲಾ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಯಾವ ಯಾವ ರೈತರಿಗೆ ಜಮೆಯಾಗಲಿದೆ? ಪಿಎಂ ನರೇಂದ್ರ ಮೋದಿಯವರು ಯಾವ ರಾಜ್ಯದಿಂದ ಹಣ ಬಿಡುಗಡೆ ಮಾಡಲಿದ್ದಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವನ್ನು ಇದೇ ತಿಂಗಳು ಅಕ್ಟೋಬರ್ 5 ರಂದು ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿಡುಗಡೆಗೆ ಚಾಲನೆ ನೀಡಲಿದ್ದಾರೆ. ಹೌದು, ಮಹಾರಾಸ್ಟ್ರದ ವಾಸೀಮ್ ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 18ನೇ ಕಂತಿನ ಹಣ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ.

ದೇಶದ 9 ವರೆ ಕೋಟಿ ರೈತರ ಖಾತೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಯನ್ನು ಏಕಕಾಲದಲ್ಲಿ ಜಮೆ ಮಾಡಲಾಗುವುದು.

Pm kisan18th installment date ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ? ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು  ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನೀವು ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಬೇಕು. ನಂತರ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ನಿಮ್ಮ ಹೆಸರು ನೀವು ಚೆಕ್ ಮಾಡಿಕೊಳ್ಳಬಹುದು.

ಅಲ್ಲಿ ಹೆಸರುಗಳು ಎ ಅಕ್ಷರದಿಂದ ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೀವು ಚೆಕ್ ಮಾಡಲು ಅಲ್ಲಿ ಕಾಣುವ ಮುಂದಿನ ಪೇಜ್ ನಂಬರ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಜಮೆಯಾಗುವ ಸಾಧ್ಯತೆಯಿದೆ.  ಈ ಪಟ್ಟಿಯಲ್ಲಿ ನಿಮ್ಮಹೆಸರಿದ್ದರಸ್ಟೇ  ನೀವು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿರುತ್ತದೆ.

ಇದನ್ನೂ ಓದಿ Rejected Ration card list ರೇಷನ್ ಕಾರ್ಡ್ ಲಿಸ್ಟ್ ನಿಂದ ನಿಮ್ಮ ಹೆಸರು ರದ್ದಾಗಿದೆಯೇ? ಚೆಕ್ ಮಾಡಿ 2024

ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದ್ದರೆ ಮಾತ್ರ ರೈತರಿಗೆ ಮುಂದಿನ ಕಂತು ಜಮೆಯಾಗಲಿದೆ. ಇಲ್ಲದಿದ್ದರೆ ಮುಂದಿನ ಕಂತುಜಮೆಯಾಗುವುದಿಲ್ಲ.

Pm kisan18th installment date ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೇ?

ಪಿಎಂ ಕಿಸಾನ್ ಯೋಜನೆಯ 17 ನೇ ಕಂತು ಜಮೆಯಾಗಿಲ್ಲವೇ? ನಿಮಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತು ಜಮೆಯಾಗದಿದ್ದರೆ 155261 ಅಥವಾ 011 2430024300606 ಗೆ ಕರೆ ಮಾಡಿ ವಿಚಾರಿಸಬಹುದು. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಬಹುದು.

Pm kisan 18th installment date

Pm kisan 18th installment date  ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಜಮೆಯಾಗಿದೆ?

ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳಿಂದ ಎಷ್ಟು ಹಣ ಜಮೆಯಾಗಿದೆ ನಿಮಗೆ ಗೊತ್ತಾ. ಪ್ರತಿ ಕಂತಿನ 2 ಸಾವಿರ ರೂಪಾಯಿಯಂತೆ ಒಟ್ಟು 17 ಕಂತುಗಳು 34 ಸಾವಿರ ರೂಪಾಯಿ ಹಣ ಜಮೆಯಾಗಿದೆ. ಈಗ 18ನೇ ಕಂತಿನ ಹಣ ರೈತರ ಖಾತೆಗೆ ಜಮೆಯಾಗಲಿದೆ.

Pm kisan18th installment date ಇಲ್ಲೇ ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಇನ್ನೂ ಹಲವಾರು ಮಂದಿ ತಮ್ಮ ಹೆಸರನ್ನು ಸೇರಿಸದೆ ಇರುವ ಕಾರಣ ಅವರಿಗೆ ಹಣ ಜಮೆಯಾಗಿಲ್ಲ. ಆದ್ದರಿಂದ ಕೂಡಲೇ ಫಲಾನುಭವಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ತಾಲೂಕು ಕೃಷಿ ಇಲಾಖೆಯ ಸಹಾಯಕಕೃಷಿ ನಿರ್ದೇಶಕಿ ಪೂಜಾ ತಿಳಿಸಿದ್ದಾರೆ.

pM Narendra Modi

ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ಕಿಸಾನ್ ಯೋಜನೆಯ ಲಾಭ ಪಡೆಯಲು ಕುಟುಂಬದ ಸದಸ್ಯರು ಏಕ ವ್ಯಕ್ತಿಗೆ ಅಧಿಕಾರ ನೀಡಬೇಕು. ಜಮೀನಿರುವ ವ್ಯಕ್ತಿಗಳ ಪಡಿತರ ಪತ್ರದಲ್ಲಿ ಒಂದಕ್ಕಿಂತ ಹೆಚ್ಚು ಮಂದಿಯ ಹೆಸರಿದ್ದರೆ ಕುಟುಂಬದ ಸದಸ್ಯರು ಒಡಂಬಡಿಕೆ ಮಾಡಿಕೊಂಡು ಸದಸ್ಯರಲ್ಲಿ ಒಬ್ಬರಿಗೆ ಆಧಾರ್ ಲಿಂಕ್ ಮಾಡಿಕೊಳ್ಳಬೇಕೆಂದು ಸೂಚಿಸಿದರು

Leave a Comment