Pmkisan fund release tomarrow : ರೈತರಿಗಿಲ್ಲಿದೆ ಗುಡ್ ನ್ಯೂಸ್ ನಾಳೆ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಹೌದು, ಇದೇ ಫೆಬ್ರವರಿ 24 ರಂದು ದೇಶದ ರೈತರ ಖಾತೆಗೆ ಏಕಕಾಲದಲ್ಲಿ ಪಿಎಂ ಕಿಸಾನ್ 19 ನೇ ಕಂತಿನ ಹಣವನ್ನು ಜಮೆ ಮಾಡಲಾಗುವುದು.
Pmkisan fund release tomarrow ತಮಗೆಲ್ಲಾ ಗೊತ್ತಿದ್ದ ಹಾಗೆ ಪಿಎಂ ಕಿಸಾನ್ ಯೋಜನೆಯನ್ನು 2019 ರಲ್ಲಿ ದೇಶದ ಬಡ ರೈತರಿಗಾಗಿ ಜಾರಿಗೆ ತರಲಾಗಿದೆ. ಇಲ್ಲಿಯವರೆಗೆ 18 ಕಂತುಗಳಲ್ಲಿ ಒಟ್ಟು 36 ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗಿದೆ. ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣವನ್ನು ಕಳೆದ ಅಕ್ಟೋಬರ್ 5 ರಂದು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಈಗ ಪಿಎಂ ಕಿಸಾನ ಯೋಜನೆಯ 19ನೇ ಕಂತಿನ ಹಣವನ್ನು ಬಿಹಾರ್ ರಾಜ್ಯದ ಭಾಗಲಪುರದಲ್ಲಿ ನಡೆಯುವ ರೈತರ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಲಾಗುವುದು.
ಇದನ್ನೂ ಓದಿ Gruhalakshmi and annbhagya amount credit ಇವರ ಖಾತೆಗೆ ಅನ್ನಭಾಗ್ಯ ಗೃಹಲಕ್ಷ್ಮೀಹಣ ಜಮೆ ಸಿದ್ದರಾಮಯ್ಯ 2025
Pmkisan fund release tomarrow ದೇಶದ ಪ್ರಧಾನಿ ನರೇಂದ್ರ ಮೋದಿಯವರು ಡಿಬಿಟಿ ಮೂಲಕ ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ 9 ಕೋಟಿಗೂ ಹೆಚ್ಚಿನ ರೈತರ ಖಾತೆಗೆ ಈ ಹಣ ಜಮೆಯಾಗಲಿದೆ.
Pmkisan fund release tomarrow ಪಿಎಂ ಕಿಸಾನ್ ಈ ಪಟ್ಟಿಯಲ್ಲಿರುವ ರೈತರಿಗೆ ಹಣ ಜಮೆ
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೆಸರು ಕೆಳಗಡೆ ನೀಡಲಾದ ಪಟ್ಟಿಯಲ್ಲಿದ್ದರೆ ಮಾತ್ರ ಜಮಯಾಗಲಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಲು ಈ
https://pmkisan.gov.in/Rpt_BeneficiaryStatus_pub.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಫಲಾನುಭವಿಗಳ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ.

ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ಲಾಕ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾವ ಯಾವ ರೈತರು ಫಲಾನುಭವಿಗಳಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ.
Pmkisan fund release tomarrow ಇಕೆವೈಸಿ ಆದ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ
ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಓಟಿಪಿ ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿರುವ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ರೈತರು ಈ
https://pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ ಪಿಎಂ ಕಿಸಾನ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ನೀವು ನಿಮ್ಮಆಧಾರ್ ಕಾರ್ಡ್ ನ್ನು ನಮೂದಿಸೇಕು. ನಂತರ search ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಇಕೆವೈಸಿ ಆಗಿದ್ದರೆ ಅಲ್ಲಿ EKYC is Already Done ಎಂಬ ಮೆಸೇಜ್ ಕಾಣಿಸುತ್ತದೆ. ಅಲ್ಲಿ ನೀವು ಓಕೆ ಬಟನ್ ಮೇಲೆ ಕ್ಲಿಕ್ ಮಾಡಬಹುದು.
Pmkisan fund release tomarrow ಪಿಎಂ ಕಿಸಾನ್ ಯೋಜನೆಯ ಹಣ ಪಡೆಯಲು ಬೇಕಾಗುವ ಅರ್ಹತೆಗಳು ಯಾವುವು?
ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದ ಮಾತ್ರಕ್ಕೆ ನಿಮಗೆ ಮುಂದಿನ ಕಂತು ಜಮೆಯಾಗುತ್ತದೆ ಎಂದು ಹೇಳಲಿಕ್ಕಾಗುವುದಿಲ್ಲ. ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಇರಬೇಕು. ಹೌದು, ನೀವು ಸಣ್ಣ ಮತ್ತು ಅತೀ ಸಣ್ಣ ರೈತರಾಗಿರಬೇಕು. ನೀವು ನಿಮ್ಮ ಪತಿ ಅಥವಾ ಪತ್ನಿ ಅಥವಾ ಮಕ್ಕಳು ಸರ್ಕಾರಿ ನೌಕರಿಯಲ್ಲಿರಬಾರದು.