Poultry unit subsidy ಕೋಳಿ ಘಟಕ ಸ್ಥಾಪನೆಗೆ ಸಿಗಲಿದೆ 46 ಸಾವಿರ ರೂಪಾಯಿಯವರೆಗೆ ಸಬ್ಸಿಡಿ

Written by Admin

Published on:

Spread the love

Poultry unit subsidy : ಬಿ.ವಿ. 380  ತಳಿಯ 20 ಮೊಟ್ಟೆ ಕೋಳಿ ಘಟಕ ಸ್ಥಾಪನೆಗೆ ರೈತರಿಗೆ 46 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ಸಿಗಲಿದೆ .

ಹೌದು, ನಿರುದ್ಯೋಗ ಯುವಕರು ಸ್ವಾವಲಂಬಿ ಜೀವನ ಸಾಗಿಸಲು ಅವರು ಆರ್ಥಿಕವಾಗಿ ಸಬಲರಾಗಲು ಸರ್ಕಾರದ ವತಿಯಿಂದ ಸಬ್ಸಿಡಿ ನೀಡಲಾಗುವುದು.

ಕೋಳಿ ಘಟಕ ಸ್ಥಾಪನೆಗೆ ಏನೇನು ಬೇಕು? ಯಾವ ಯಾವ ರೈತರಿಗೆ ಸಬ್ಸಿಡಿ ನೀಡಲಾಗುವುದು? ರೈತರು ಅರ್ಜಿ ಎಲ್ಲಿ ಸಲ್ಲಿಸಬೇಕು. ಯಾರಿಗೆ ಸಂಪರ್ಕಿಸಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Poultry unit subsidy

ಬಿ.ವಿ 380 ತಳಿಯ 20 ಮೊಟ್ಟೆ ಕೋಳಿ ಘಟಕ ಸ್ಥಾಪಿಸಲು ರೈತರಿಗೆ ಸಹಾಯಧನ ನೀಡಲಾಗುವುದು. ಹೌದು, ಗ್ರಾಮೀಣ ಭಾಗದಲ್ಲಿ ಮೊಟ್ಟೆ ಹಾಗೂ ಮಾಂಸದ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಸಬ್ಸಿಡಿ ನೀಡಲಾಗುವುದು.

ನಿರುದ್ಯೋಗ ಯುವಕ ಯುವತಿಯರಿಗೆ ಮತ್ತು ಸಣ್ಣ ರೈತರು ಕೋಳಿ ಸಾಕಾಣಿಕೆಯಲ್ಲಿ ಸ್ವಯಂ ಉದ್ಯೋಗ ಕಲ್ಪಿಸಲಾಗುವುದು.

Poultry unit subsidy  ರಿಯಾಯಿತಿ

ಘಟಕ ವೆಚ್ಚದ ರೂಪಾಯಿ 52 ಸಾವಿರ ರೂಪಾಯಿ ಇದರಲ್ಲಿ ಸಾಮಾನ್ಯ ವರ್ಗದವರಿಗೆ ಬ್ಯಾಂಕ್ ವತಿಯಿಂದ 26 ಸಾವಿರ ರೂಪಾಯಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ  ಬ್ಯಾಂಕ್ ನ ವತಿಯಿಂದ ಸಬ್ಸಿಡಿ ನೀಡಲಾಗುವುದು.

Poultry unit subsidy  ಯಾರು ಅರ್ಜಿ ಸಲ್ಲಿಸಬಹುದು?

ನಿರುದ್ಯೋಗ ಯುವಕ ಯುವತಿಯರು ಮತ್ತು ಸಣ್ಣ ರೈತರು ಅರ್ಜಿ ಸಲ್ಲಿಸಬಹುದು.

Poultry unit subsidy  ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು

ರೈತರು ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು. ಇತ್ತೀಚಿನ ಮೂರು ಫೋಟೋ ಇರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು.  ಅಱ್ಜಿ ಹಾಗೂ ದಾಖಲೆಗಳನ್ನು ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು.  ಆರ್.ಡಿ.ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ನೀಡಬೇಕು.

ಅರ್ಜಿಯನ್ನು ಆಫ್ಲೈನ್ ಮೂಲಕವೇ ಸಲ್ಲಿಸಬೇಕಾಗುತ್ತದೆ.

Poultry unit subsidy  ಅರ್ಜಿ ನಮೂನೆ ಹೀಗೆ ಡೌನ್ಲೋಡ್ ಮಾಡಿ

ಕೋಳಿ ಘಟಕ ಸ್ಥಾಪನೆಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿಯ ನಮೂನೆ ಡೌನ್ಲೋಡ್ ಮಾಡಲು ಈ

https://yuvakanaja.in/wp-content/uploads/2022/07/scheme-2.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಅರ್ಜಿ ನಮೂನೆ ಓಪನ್ ಆಗುತ್ತದೆ.ಈ ಅರ್ಜಿಯಲ್ಲಿ ಕೇಳಲಾದ ಅಗತ್ಯ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಸಂಬಂಧಿಸಿದ ಕಚೇರಿಗೆ ಅರ್ಜಿ ಸಲ್ಲಿಸಬಹುದು.

Poultry unit subsidy  ಅರ್ಜಿಯಲ್ಲಿ ಏನೇನು ಮಾಹಿತಿ ಭರ್ತಿ ಮಾಡಬೇಕು?

ಅರ್ಜಿದಾರರ ಹೆಸರು, ತಂದೆಯ ಹೆಸರು ಭರ್ತಿ ಮಾಡಬೇಕು. ಅರ್ಜಿಯಾದರ ವಯಸ್ಸು, ಖಾಯಂ ವಿಳಾಸ ಹಾಗೂ ದೂರವಾಣಿ ಸಂಖ್ಯೆ ನಮೂದಿಸಬೇಕಾಗುತ್ತದೆ. ಅರ್ಜಿದಾರರ ವಿದ್ಯಾರ್ಹತೆ, ವರ್ಗ. ಜಾತಿ ಪ್ರಮಾಣ ಪತ್ರ ಲಗತ್ತಿಸಬೇಕು. ಕೋಳಿ ಸಾಕಾಣಿಕೆಯ ತರಬೇತಿ ಪಡೆದಿದ್ದರೆ ಪ್ರತಿ ಲಗತ್ತಿಸಬೇಕು. ಕೋಳಿ ಸಾಕಾಣಿಕೆಗೆ ರೈತರ ಸ್ವಂತ ಜಮೀನು ಇರುವುದನ್ನು ಪಶುವೈದ್ಯರಿಂದ ದೃಢೀಕರಣ ಸಲ್ಲಿಸಬೇಕು. ಆಧಾರ್ ಕಾರ್ಡ್ಹಾಗೂ ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಲಗತ್ತಿಸಬೇಕು. ಕುಕ್ಕುಟ ಸಹಕಾರ ಸಂಘದ ಸದಸ್ಯರಾಗಿದ್ದರೆ ಸಂಘದ ಹೆಸರು, ವಿಳಾಸ  ಹಾಗೂ ಅರ್ಜಿದಾರರ ಶೇರು ಸಂಖ್ಯೆ ದಿನಾಂಕ ಝರಾಕ್ಸ್ ಪ್ರತಿ ಲಗತ್ತಿಸಬೇಕು. ರೈತರು ಬ್ಯಾಂಕ್ ಸಾಲ ಪಡೆದಿದ್ದಾರೋ ಅಥವಾ ಸ್ವಂತವಾಗಿ ವಂತಿಗೆ ಹಾಕಿದ್ದಾರೋ ಎಂಬುದನ್ನು ನಮೂದಿಸಬೇಕು.

ಇದನ್ನೂ ಓದಿ Bele vime calculate ನೀವೆಷ್ಟು ಬೆಳೆ ವಿಮೆ ಪಾವತಿಸಿದರೆ ಎಷ್ಟು ಜಮೆ? ಇಲ್ಲೇ ಚೆಕ್ ಮಾಡಿ 2024

ಆಯ್ಕೆಯಾದ ಫಲಾನುಭವಿಯ ವಂತಿಕೆಯಾದಲ್ಲಿ ಫಲಾನುಭವಿಯುವಂತಿಕೆ ಹಣವನ್ನು ಅವರ ಉಳಿತಾಯ ಖಾತೆಯಲ್ಲಿ ಜಮೆ ಮಾಡಿ ಅದರ ದೃಢೀಕರಣ ಪ್ರತಿಯನ್ನು ಸಲ್ಲಿಸಬೇಕು. ಸಾಮಾನ್ಯವರ್ಗದವರು 26 ಸಾವಿರ ರೂಪಾಯಿಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಚ ಪಂಗಡದವರು 5200 ರೂಪಾಯಿ ಸಲ್ಲಿಸಬೇಕು.ಉಳಿದ ಹಣ ಸಬ್ಸಿಡಿ ನೀಡಲಾಗುವುದು.

ರೈತರು ಸ್ವಂತವಾಗಿ ಹಣ ಪಾವತಿಸದಿದ್ದರೆ ಬ್ಯಾಂಕಿನಿಂದ ಸಾಲ ಪಡೆಯಬಹುದು. ಸಾಮಾನ್ಯ ವರ್ಗದವರಿಗೆ26 ಸಾವಿರ ರೂಪಾಯಿ ಸಾಲ ನೀಡಲಾಗುವುದು. ಎಸ್.ಸಿ, ಎಸ್ಟಿ ವರ್ಗದವರಿಗೆ 5200 ರೂಪಾಯಿ ಬ್ಯಾಂಕ್ ಸಾಲ ನೀಡಲಾಗಿದೆ.ಉಳಿದ ಮೊತ್ತ ರೈತರಿಗೆ ಸಬ್ಸಿಡಿ ಸಿಗಲಿದೆ.

Poultry unit subsidy check

ಅರ್ಜಿಯನ್ನುಸಂಪೂರ್ಣವಾಗಿ ಭರ್ತಿ ಮಾಡಬೇಕು. ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಮತ್ತು ದಾಖಲೆಗಳನ್ನು ಕಡ್ಡಾಯವಾಗಿ ತ್ರಿಪ್ರತಿಯಲ್ಲಿ ಸಲ್ಲಿಸಬೇಕು.

ಆಯ್ಕೆಯಾದ ಫಲಾನುಭವಿಯು ಕುಕ್ಕುಟ ಮಹಾಮಂಡಳ ವತಿಯಿಂದ ಪಡೆದ ಪಂಜರವನ್ನು ಮೂರು ವರ್ಷಗಳ ಕಾಲ ಹಾಗೂ ಕೋಳಿಗಳನ್ನು ಒಂದು ವರ್ಷಗಳ ಕಾಲ ಮಾರಾಟಮಾಡುವುದಿಲ್ಲವೆಂದು 20 ರೂಪಾಯಿಗಳ ಛಾಪಾ ಕಾಗದಲ್ಲಿ ದೃಢೀಕರಿಸತಕ್ಕದ್ದು.

ಆಯ್ಕೆಯಾದ ಫಲಾನುಭವಿಯುಪ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದಲ್ಲಿ 1200 ರೂಪಾಯಿ ಪಾವತಿಸಿ ನಾಮಪತ್ರ ಸದಸ್ಯತ್ವ ಪಡೆದನಂತರ ಪಂಜರ ಹಾಗೂ ಕೋಳಿಗಳನ್ನು ನೀಡಲಾಗುವುದು.

Leave a Comment