crop insurance status : ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಿದ ರೈತರಿಗೆ ಮುಂಗಾರು ಹಂಗಾಮಿನೊಂದಿಗೆ ಹಿಂಗಾರು ಹಂಗಾಮಿನ ಬೆಳೆ ವಿಮೆ ಹಣ ಬಿಡುಗಡೆಯಾಗಿದೆ. ಯಾವ ರೈತರಿಗೆ ಹಿಂಗಾರು ಹಂಗಾಮಿನ ಬೆಳೆ ವಿಮೆಹಣ ಜಮೆಯಾಗಿದೆ? ಯಾವ ಯಾವ ಬೆಳೆಗೆ ವಿಮೆ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
Rabi crop insurance status ಹಿಂಗಾರು ಹಂಗಾಮಿನ ನಿಮಗೆಷ್ಟು ಬೆಳೆ ವಿಮೆ ಹಣ ಜಮೆ? ಚೆಕ್ ಮಾಡಿ
ಹಿಂಗಾರು ಹಂಗಾಮಿನ ಯಾವ ಯಾವ ಬೆಳೆಗೆ ಎಷ್ಟು ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ರೈತರು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕರ್ನಾಟಕ ಸರ್ಕಾರದ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ ವರ್ಷ 2023-2024 ಕಾಣಿಸುತ್ತದೆ. ಅದರ ಕೆಳಗಡೆ ಋತು ಆಯ್ಕೆ ಯಲ್ಲಿ Rabbi ಕಾಣಿಸುತ್ತದೆ. ನಂತರ ನೀವು ಮುಂದೆ / Go ಮೇಲೆ ಕ್ಲಿಕ್ ಮಾಡಬೇಕು.
ಒಂದು ವೇಳೆ ನೀವು ಕಳೆದ ವರ್ಷದ ಅಂದರೆ 2022-23ನೇ ಸಾಲಿನ ಹಿಂಗಾರು ಅಥವಾ ಮುಂಗಾರು ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೆ ವರ್ಷ ಹಾಗೂ ಋತು ಬದಲಾಯಿಸಿ ಚೆಕ್ ಮಾಡಬಹುದು.
Rabi crop insurance status ಬೆಳೆ ವಿಮೆ ಸ್ಟೇಟಸ್ ಪೇಜ್ ನಲ್ಲಿ ಏನೇನು ಮಾಹಿತಿ ಇರುತ್ತದೆ?
ನೀವು ಮುಂದೆ ಮೇಲೆ ಕ್ಲಿಕ್ ಮಾಡಿದಾಗ ಸಂರಕ್ಷಣೆಯ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ Farmers ಕೆಳಗಡೆ ನೀವು check Status ಮೇಲೆ ಕ್ಲಿಕ್ ಮಾಡಬೇಕು.ನಂತರ ನೀವು ಮೊಬೈಲ್ ನಂಬರ್ ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಆಧಾರ್ ಕಾರ್ಡ್ ಸಹ ಆಯ್ಕೆ ಮಾಡಿ ಚೆಕ್ ಮಾಡಬಹುದು. ಇಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿಕೊಂಡ ನಂತರ ನಿಮ್ಮ ಮೊಬೈಲ್ ನಂಬರ್ ಅಲ್ಲಿ ನಮೂದಿಸಬೇಕಾಗತ್ತದೆ. ನಿಮ್ಮ ಮೊಬೈಲ್ ನಂಬರ್ ಹಾಕಿದ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಹಿಂಗಾರು ಬೆಳೆ ವಿಮೆಯ ಸ್ಟೇಟಸ್ ಚೆಕ್ ಮಾಡಬಹುದು.
Rabi crop insurance status ಬೆಳೆ ವಿಮೆ ಹಣ ಯಾವ ರೈತರಿಗೆ ಜಮೆಯಾಗುತ್ತದೆ ?
ಪ್ರಕೃತಿ ವಿಕೋಪದಿಂದಾಗಿ ಒಂದು ವೇಳೆ ಅಧಿಸೂಚಿತ ಘಟಕದಲ್ಲಿ ಶೇಕಡಾ 25ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಗುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುತ್ತದೆ. ಇಂತಹ ಸ್ಥಳೀಯ ಗಂಡಾಂತರ ಕಾರಣಗಳಿಂದ ಬೆಳೆ ನಷ್ಟ ಸಂಭವಿಸಿದರೆ ಬೆಳೆ ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ಅನುಷ್ಠಾನಗೊಳಿಸಿರುವ ವಿಮಾ ಸಂಸ್ಥೆಗಳ ಕಚೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು ಮತ್ತು ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣಗಳನ್ನು 72 ಗಂಟೆಯೊಳಗೆ ತಿಳಿಸಬೇಕು.
ಇದನ್ನೂ ಓದಿ : Land Measurement ನಿಮ್ಮ ಜಮೀನಿನ ಅಳತೆ ಮೊಬೈಲ್ ನಲ್ಲಿ ಹೀಗೆ ಮಾಡಿ 2024
72 ಗಂಟೆಯೊಳಗೆ ರೈತರು ಆಯಾ ವಿಮಾ ಕಂಪನಿಗೆ ತಿಳಿಸದ ನಂತರ ಆವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ಬೆಳೆ ಹಾಳಾಗಿರುವ ಕುರಿತು ಪರಿಶೀಲನೆ ನಡೆಸುತ್ತಾರೆ.ನಂತರ ನಿಮ್ಮ ಯಾವ ಪ್ರಮಾಣ ದಲ್ಲಿ ಬೆಳೆ ಹಾಳಾಗಿದೆ ಎಂಬುದನ್ನು ಚೆಕ್ ಮಾಡಿ ಮೇಲಧಿಕಾರಿಗಳಿಗೆ ರಿಪೋರ್ಟ್ ಕಳಿಸುತ್ತಾರೆ. ರಿಪೋರ್ಟ್ ಕಳಿಸಿದ ನಂತರ ರೈತರಿಗೆ ಬೆಳೆವಿಮೆ ಹಣ ಜಮೆ ಮಾಡಲಾಗುತ್ತದೆ.
ಆದರೆ ಬಹುತೇಕ ರೈತರು ವಿಮೆ ಮಾಡಿಸುತ್ತಾರೆ. ಬೆಳೆ ಹಾನಿಯಾದ ನಂತರ ಆಯಾ ವಿಮಾ ಕಂಪನಿಗೆ ದೂರು ನೀಡುವುದನ್ನೇ ಮರೆತುಬಿಡುತ್ತಾರೆ. ಹಾಗಾಗಿ ಬಹುತೇಕ ರೈತರಿಗೆ ವಿಮಾ ಹಣ ಜಮೆಯಾಗುವುದಿಲ್ಲ. ನಂತರ ವಿಮೆ ಹಣ ಜಮೆಯಾಗಿಲ್ಲವೆಂದು ಕೊರಗುತ್ತಾರೆ.