Rain alert again four days : ರಾಜ್ಯದ ಹಲವೆಡೆ ಸುರಿಯುತ್ತಿರುವ ಬೇಸಿಗೆ ಮಳೆ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
Rain alert again four days ಯಾವ ಯಾವ ಜಿಲ್ಲೆಗಳಲ್ಲಿ ಮಳೆ
ಏಪ್ರೀಲ್ 8 ರವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ, ಬಾಗಲಕೋಟೆ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಆಲಿಕಲ್ಲು ಮಳೆಯಾಗಲಿದೆ.
ಇದನ್ನೂ ಓದಿ : Crop insurance sahayavani number ಬೆಳೆ ವಿಮೆ ಸಹಾಯವಾಣಿ ನಂಬರ್
ಬಂಗಾಳ ಕೊಲ್ಲಿಯ ಆಗ್ನೆಯ ಭಾಗದಲ್ಲಿ ತೇವಾಂಶ ಭರಿತ ಮೋಡಗಳಿರುವ ಕಾರಣ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರೀಲ್ 12 ರವರೆಗೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಕೊಡಗು, ಮೈಸೂರು, ಚಾಮರಾಜನಗರದಲ್ಲಿ ಬಿರುಸಾಗಿ ಮಳೆಯಾಗುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.
Rain alert again four days ಯಾವ ಯಾವ ಜಿಲ್ಲೆಗಳಲ್ಲಿ ಮಳೆ
ಬಳಿಕ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ದಗದ, ಹಾವೇರಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗದಲ್ಲಿ ಏಪ್ರೀಲ್ 6 ರಿಂದ ಏಪ್ರೀಲ್ 7 ರವರೆಗೆ ಮಳೆ ಸುರಿಯಲಿದೆ.
ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ರಾಮನಗರ, ಮಂಡ್ಯ, ಕೋಲಾರ, ಬಳ್ಳಾರಿ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಏಪ್ರೀಲ್ 6 ರಂದು ಹಗುರವಾದ ಕೂಡಿದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಮುಂದಿನ 2 ದಿನ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ.
Rain alert again four days ಮೇಘದೂತ್ ಆ್ಯಪ್ ನಲ್ಲಿ ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ
ಮೇಘದೂತ್ ಆ್ಯಪ್ ಮೂಲಕ ರೈತರು ಐದು ದಿನ ಮೊದಲೇ ಮಳೆಯ ಮಾಹಿತಿ ಸಿಗಲಿದೆ. ಮಳೆಯ ಮಾಹಿತಿ ಪಡೆಯಲು ಈ
https://play.google.com/store/apps/details?id=com.aas.meghdoot&hl=en_IN&gl=US&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ Install ಮೇಲೆ ಕ್ಲಿಕ್ ಮಾಡಬೇಕು. ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮೇಘದೂತ್ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ನೀವು ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮಗೆ ನಿಖರವಾದ ಬೆಳೆ ಸಲಹೆ ಪಡೆಯಿರಿ ಎಂಬ ಸಂದೇಶ ಕಾಣಿಸುತ್ತದೆ. ಅದರ ಕೆಳಗಡೆಯಿರುವ ಮುಂದೆ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿವಿಧ ಭಾಷೆಗಳಲ್ಲಿ ದಾದನಂತರ ಹವಾಮಾನ ಮುನ್ಸೂಚನೆ ಎಂಬ ಸಂದೇಶ ಕಾಣಿಸುತ್ತದೆ.
Rain alert again four days ನಿಮ್ಮೂರಿನ ಮಳೆಯ ಮಾಹಿತಿ ಬೇಕೆ?
ನಿಮ್ಮೂರಿನಲ್ಲಿ ಮಳೆಯಾಗುವ ಬರುತ್ತದೆ ಎಂಬ ಮಾಹಿತಿ ಬೇಕೆ? ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಮಳೆಯ ಮಾಹಿತಿ ದೊರೆಯಲಿದೆ. ಮುಂದಿನ ದಿನಗಳಲ್ಲಿ ಮಳೆ ಯಾವಾಗ ಬರುತ್ತದೆ ಎಂಬುದನ್ನು ಸಹ ತಿಳಿದುಕೊಳ್ಳಬಹುದು.
Rain alert again four days ಮಳೆಯ ಮಾಹಿತಿ ನೀಡಲು ಬಂದಿವೆ ಮೊಬೈಲ್ ಆ್ಯಪ್
ನೀವು ಮನೆಯಲ್ಲಿಯೇ ಮಳೆಯ ಮಾಹಿತಿ ಚೆಕ್ ಮಾಡಲು ಮೇಘದೂತ, ಮೌಸಮ್ ಆ್ಯಪ್ ಗಳು ಇವೆ. ಈ ಆ್ಯಪ್ ಗಳನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮಗೆ ಮುಂದಿನ ಐದು ದಿನಗಳ ಮಳೆಯ ಮಾಹಿತಿಯನ್ನು ಚೆಕ್ ಮಾಡಬಹುದು.
ಗುಡುಗು ಸಿಡಿಲಿನ ಮಾಹಿತಿ ನೀಡಲು ಬಂದಿವ್ ಆ್ಯಪ್ ಗಳು
ಗುಡುಗು ಸಿಡಿಲು ಬೀಳುವ ಐದು, ಹತ್ತು ನಿಮಿಷ ಮೊದಲೇ ಸಿಡಿಲಿನ ಮಾಹಿತಿ ನೀಡಲು ಸಿಡಿಲು ಹಾಗೂ ದಾಮಿನಿ ಆ್ಯಪ್ ಗಳು ಇವೆ.ಈ ಆ್ಯಪ್ ಗಳನ್ನು ಮೊಬೈಲ್ ನಲ್ಲಿ ಇನಸ್ಟಾಲ್ ಮಾಡಿಕೊಂಡು ಸಿಡಿಲು ಬಡಿಯುವ ಐದು ನಿಮಿಷ ಮೊದಲೇ ಮಾಹಿತಿ ಪಡೆಯಬಹುದು.