rain proverbs names ನಕ್ಷತ್ರಗಳ ಹೆಸರೇನು? 2025

Written by Admin

Published on:

Spread the love

Rain proverbs names : ಮಳೆಗಾಲವಿರಲಿ, ಚಳಿಗಾಲವಿರಲಿ ಹಿಂದೆ ಪೂರ್ವಜರು ಆಯಾ ಹವಾಗುಣಕ್ಕೆ ತಕ್ಕಂತೆ ಗಾದೆಗಳನ್ನು ಕಟ್ಟುತ್ತಿದ್ದರು.  ಈಗಲೂ ಸಹ ಹಳ್ಳಿಗಳಲ್ಲಿ  ಹಿರಿಯ ರೈತರಿಗೆ ನಿಮಗೆ ಮಳೆ ಬರುವುದು ಹೇಗೆ ಗೊತ್ತಾಗುತ್ತಿತ್ತು ಎಂದು ಕೇಳಿದರೆ ಸಾಕು ಮಳೆ ನಕ್ಷತ್ರಗಳ ಹೆಸರುಗಳು ಹಾಗೂ ಮಳೆಗೆ ಸಂಬಂಧಿಸಿದ ಗಾದೆಗಳನ್ನು ಪಟಪಟನೇ ಹೇಳುತ್ತಾರೆ. ಪೂರ್ವಜರು ಯಾವ ಆಧಾರವೂ ಇಲ್ಲದೆ 27 ನಕ್ಷತ್ರಗಳನ್ನು ಹೇಳುತ್ತಿದ್ದರು. ಹಾಗಾದರೆ  ಮಳೆಗೆ ಸಂಬಂಧಿಸಿದ  ನಕ್ಷತ್ರಗಳ ಮಾಹಿತಿಯನ್ನು ತಿಳಿದುಕೊಳ್ಳೋಣವೇ ಬನ್ನಿ

Rain proverbs names ಮಳೆಗೆ ಸಂಬಂಧಿಸಿದ 11 ನಕ್ಷತ್ರಗಳು,

ಆರಿದ್ರಾ, ಪುನರ್ವಸು, ಪುಷ್ಯ, ಆಶ್ಲೇಷ, ಮಖ, ಪುಬ್ಬ, ಉತ್ತರ, ಹಸ್ತ, ಚಿತ್ತ, ಸ್ವಾತಿ ಹಾಗೂ ವಿಶಾಖ ಈ  ನಕ್ಷತ್ರಗಳನ್ನು ಮಳೆಯ ನಕ್ಷತ್ರಗಳೆಂದು ಕರೆಯಲಾಗುತ್ತದೆ.ಉಳಿದ ನಕ್ಷತ್ರಗಳಲ್ಲಿ ಮಳೆ ಬರುವ ಸಾಧ್ಯತೆ ತುಂಬಾ ಕಡಿಮೆ.

ಮಳೆಗೆ ಸಂಬಂಧಿಸಿದ ಗಾದೆ ಮಾತುಗಳನ್ನು ರೈತರು ಹೀಗೆ ಹೇಳುತ್ತಿದ್ದರು

Rain proverbs names

ಮಘಾ ಮಳೆ ಬಂದಷ್ಟು ಒಳ್ಳೇದು, ಮನೆ ಮಗ ಉಂಡಷ್ಟು ಒಳ್ಳೇದು.

ಹುಬ್ಬೆ ಮಳೇಲಿ ಹುಬ್ಬೆತ್ತಕ್ಕೂ ಆಗಲ್ಲ. ಆಶ್ಲೇಷ ಮಳೆ, ಈಸಲಾರದ ಹೊಳೆ.

ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ! ಆರಿದ್ರಾ ಮಳೆ ಆರದೇ ಹುಯ್ಯುತ್ತೆ.

Rain proverbs names ಅಮ್ಮನ ಮನಸ್ಸು ಬೆಲ್ಲದ ಹಾಗೆ ; ಆರಿದ್ರಾ ಹನಿ ಕಲ್ಲಿನ ಹಾಗೆ.

ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

ಮಳೆಗಾಲದ ಮಳೆ ನಂಬಲಾಗದು ; ಮನೆ ಹೆಂಡ್ತಿನಗೆ ನಂಬಲಾಗದು.

ತುಂತುರು ಮಳೆಯಿಂದ ತೂಬು ಒಡೆದೀತೆ? ಅಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ.

ಮಗೆ ಮಳೆ ಮಗೆ ಗಾತ್ರ ಬೀಳ್ತದೆ. ಮಳೆ ಬಂದರೆ ಕೇಡಲ್ಲ ಮಗ ಉಂಡರೆ ಕೇಡಲ್ಲ

ಪುಷ್ಯ ಮಳೆ ಭಾಷೆ ಕೊಟ್ಟ ಮಳೆ, ಅಸ್ಲೆ ಮಳೆಗೆ ಸಸ್ಲೆ ಬೆಟ್ಟಕ್ಕೆ ನೆಗಿತು

ಬಂದರೆ ಮಗೆ ಹೋದರೆ ಹೊಗೆ, ಕುರುಡು ಚಿತ್ತೆ ಎರಚಿದತ್ತ ಬೆಳೆ

ಸ್ವಾತಿ ಮಳೆ ಹೇತೆನೆಂದ್ರೂ ಬಿಡದು. ಅಶ್ವಿನೀ ಸಸ್ಯನಾಶಿನೀ.

ಭರಣಿ ಮಳೆ ಧರಣಿ ಬೆಳೆ. ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.

ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ. ಸ್ವಾತಿ ಮಳೆ ಮುತ್ತಿನ ಬೆಳೆ. ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.

ಅನುರಾಧ ಬಂದರೆ ನಮ್ಮ ರಾಗಿ ನಮ್ಮದು. ಚಿತ್ತಾ ಮಳೆ ವಿಚಿತ್ರ ಬೆಳೆ! ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.

Rain proverbs names  ಅಶ್ವಿನಿ- (ಏಪ್ರೀಲ್ 13 ರಿಂದ ಏಪ್ರೀಲ್ 26 ರವರೆಗೆ)  ಅಶ್ವಿನಿ ಮಳೆ ಬಿದ್ದರೆ ಅರಿಶಿಣಕ್ಕೆ ಮೇಲು, ಅಶ್ವೀನಿ ಸನ್ಯಾಸಿನೀ,

ಭರಣಿ – (ಏಪ್ರೀಲ್ 27 ರಿಂದ ಮೇ 10ರವರೆಗೆ) ಭರಣಿಯಲ್ಲಿ ಮಳೆಯಾದರೆ ಧರಣಿಯೆಲ್ಲಾ ಬೆಳೆ,ಭರಣಿ ಸುರಿದರೆ ಧರಣಿ ಬದುಕೀತು

ಕೃತಿಕಾ- ( ಮೇ 11 ರಿಂದ ಮೇ 24ರವರೆಗೆ) ಕೃತಿಕ ನಕ್ಷತ್ರ ಕಾದರೆ ಗದ್ದೆಗೆ ಒಳ್ಳೆಯದು

ಇದನ್ನೂ ಓದಿ Crop insurance amount sanctioned ರೈತರಿಗೆ 667 ಕೋಟಿ ಪರಿಹಾರ ಮಂಜೂರು – ಪ್ರಿಯಾಂಕ್ ಖರ್ಗೆ

ರೋಹಿಣಿ- (ಮೇ 25 ರಿಂದ ಜೂನ್ 7ರವರೆಗೆ) ರೋಹಿಣಿ ಮಳೆ ಓಣಿಯೆಲ್ಲಾ ಕೆಸರು

ಮೃಗಶಿರ -(ಜೂನ್ 8 ರಿಂದ ಜೂನ್ 21ರವರೆಗೆ) ಮೃಗಶಿರೆಯಲ್ಲಿ ಮಿಸುಕಾಡದೆ ನೆರೆ ಬಂತು

ಆರಿದ್ರಾ (ಜೂನ್ 22 ರಿಂದ ಜುಲೈ 4ರವರೆಗೆ) ಆರಿದ್ರಾ ಮಳೆ ಆಗದೆ ಗುಡುಗಿದರೆ ಆರು ಮಳೆ ಆಗಲ್ಲ, ಆರಿದ್ರಾ ಮಳೆ ಆರದೆ ಹುಯ್ಯುತ್ತೇ, ಆರಿದ್ರಾ ಇಲ್ಲದಿದ್ದರೆ ದರಿದ್ರ ಖಂಡಿತ, ಅಮ್ಮನ ಮನಸ್ಸು ಬೆಲ್ಲದ ಹಾಗೆ, ಆರಿದ್ರಾ ಹನಿ ಕಲ್ಲಿನ ಹಾಗೆ.

Rain proverbs names  ಪುಷ್ಯ -ಜುಲೈ 19 ರಿಂದ ಆಗಸ್ಟ್ 1ರವರೆಗೆ) ಪುಷ್ಯ ಮಳೆ ಭಾಷೆ ಕೊಟ್ಟ ಹಾಗೆ (ತಪ್ಪಿಸುವುದಿಲ್ಲ

ಆಶ್ಲೇಷ -ಆಗಸ್ಟ್ 2 ರಿಂದ ಆಗಸ್ಟ್ 15ರವರೆಗೆ) ಆಶ್ಲೆ ಮಳೆ ಭೂಮಿ ಹಸ್ರುಗಟ್ಟಂಗೆ ಹುಯ್ತದೆ, ಅಸಲೆ ಮಳೆ ಕೈತುಂಬಾ ಬೆಳೆ, ಅಸಲೆ ಮಳೆ ಬಿದ್ದು ಸಸಿಲೆ(ಸಣ್ಣ ಮೀನು) ಬೆಟ್ಟಕ್ಕೇರಿತು

ಮಘ- (ಆಗಸ್ಟ್ 16 ರಿಂದ ಆಗಸ್ಟ್ 29ರವರೆಗೆ) ಬಂದರೆ ಮಗೆ ಹೋದರೆ ಹೊಗೆ, ಬಂದರೆ ಮಘೆ ಇಲ್ಲದಿದ್ದರೆ ಧಗೆ, ಮಘೆ ಮಳೆ ಬಂದಷ್ಟು ಒಳ್ಳೇದು, ಮನೆಮಗ ಉಂಡಷ್ಟು ಒಳ್ಳೇದು.

Leave a Comment