Rastriya krishi vikas yojane ಮೂರನೇ ಕಂತಿನ 235 ಕೋಟಿ ಬಿಡುಗಡೆ

Written by Admin

Published on:

Spread the love

Rastriya krishi vikas yojane: ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ.

ಹೌದು,  ಕರ್ನಾಟಕ ಸರ್ಕಾರಕ್ಕೆ ಮೂರನೇ ಕಂತಿನ ಮೊತ್ತವಾದ 235.14 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಈ ಹಣವನ್ನು ಕೃಷಿ ವಲಯದ ಮೂಲ ಸೌಕರ್ಯ ಅಭಿವೃದ್ಧಿಗೆ, ಗೋದಾಮುಗಳ ನಿರ್ಮಾಣ, ಜಲ ಸಂಗ್ರಹಾಗಾರಗಳ ನಿರ್ಮಾಣ, ಟ್ರ್ಯಾಕ್ಟರ್, ಪವರ್ ಟಿಲ್ಲರ್, ಡ್ರೋನ್ ಗಳ ಖರೀದಿಗೆ, ಸಮಗ್ರ ಕೃಷಿ ಉತ್ತೇಜನ, ಮಣ್ಣಿನ ಫಲವತ್ತತೆ ಪರೀಕ್ಷೆ ಮೊದಲಾದ ಯೋಜನೆಗಳಿಗೆ ಬಳಸಿಕೊಳ್ಳಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಏನಿದು Rastriya krishi vikas yojane (ಕೃಷಿ ವಿಕಾಸ ಯೋಜನೆ)?

Rastriya krishi vikas yojaneಯಡಿ ವಿವಿಧ ಕೃಷಿ ಚಟುವಟಿಕೆಗಳಿಗೆ ರೈತರಿಗೆ ಸಹಾಯಧನ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ರೈತರಿಗೆ ಗರಿಷ್ಠ 1,25,000 ಸಬ್ಸಿಡಿ ಲಭ್ಯವಾಗುತ್ತದೆ. ವಿವಿಧ ಚಟುವಟಿಕೆಗಳಿಗೆ ಘಟಕ ವೆಚ್ಚದ ಶೇ. 50 ರಷ್ಟು ಸಹಾಯಧನ ಸಿಗಲಿದೆ.

Rastriya krishi vikas yojaneಯ ಉದ್ದೇಶ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಕಾರ್ಯಕ್ರಮದಡಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು.

ತೋಟಗಾರಿಕೆ ಹಾಗೂ ಪಶು ಸಂಗೋಪನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಪದ್ಧತಿ ಮೂಲಕ ರೈತರ ಆದಾಯ ಹೆಚ್ಚಳ ಮಾಡುವುದು.

ಇದನ್ನೂ ಓದಿ Crop Insurance money 2023-24 ಈ ರೈತರಿಗೆ ಪಾವತಿಸಲು ಸೂಚನೆ

ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಸುಧಾರಿತ ಬೇಸಾಯ ಪದ್ಧತಿ ಅಳವಡಿಸುವ ಮೂಲಕ ಅಧಿಕ ಇಳುವರಿ ಕೊಡುವ ತಳಿಗಳನ್ನು ಬಳಸುವುದು.

Rastriya krishi vikas yojane
Rastriya krishi vikas yojane fund released

ರೈತರ ಆದಾಯ ಹೆಚ್ಚಿಸಲು ಕೃಷಿ ಜೊತೆಗೆ ಇತರೆ ಆದಾಯ ಬರುವ ಉದ್ದಿಮೆಗಳನ್ನು ಅಳವಡಿಸಿಕೊಳ್ಳಲು ಪ್ರೇರೇಪಿಸುವುದು.

ಯಾವ ಯಾವ ಸೌಲಭ್ಯಕ್ಕೆ ಸಬ್ಸಿಡಿ ನೀಡಲಾಗುವುದು?

ಕೃಷಿ ಹೊಂಡ ನಿರ್ಮಾಣ ಅಂದರೆ ನೀರು ಸಂರಕ್ಷಣೆಗಾಗಿ ತಯಾರಿಸುವ ಚಿಕ್ಕ ಹೊಂಡಗಳ ನಿರ್ಮಾಣಕ್ಕೆ ಒಟ್ಟು ವೆಚ್ಚದ ಶೇ. 50 ರಷ್ಟು ಸಬ್ಸಿಡಿ ನೀಡಲಾಗುವುದು.

ಎರೆಹುಳು ಗೊಬ್ಬರ, ಅಜೋಲಾ, ಮರ ಆಧಾರಿತ ಕೃಷಿ ಕೈತೋಟಕ್ಕೆ ಒಟ್ಟು ವೆಚ್ಚದ ಶೇ. 25 ರಷ್ಟು ಸಹಾಯಧನ ಸಿಗಲಿದೆ. ಎರೆಹುಳು ಗೊಬ್ಬರ ಘಟಕಕ್ಕೆ ಅಂದಾಜು 17500ರೂಪಾಯಿ ವೆಚ್ಚವಾಗುತ್ತದೆ.ಇದಕ್ಕೆ ಸರ್ಕಾರದಿಂದ 8500 ರೂಪಾಯಿ ಸಬ್ಸಿಡಿ ನೀಡಲಾಗುವುದು. ಅಜೋಲಾ ಕೃಷಿಗೆ 1000 ರೂಪಾಯಿ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ PM kisan fund released ಸ್ಟೇಟಸ್ -2024 ಚೆಕ್ ಮಾಡಿ

ಅದೇ ರೀತಿ ಜೇನು ಕೃಷಿಗೆ ಪ್ರತಿ ಜೇನು ಗೂಡಿಗೆ 4000 ರೂಪಾಯಿ ವೆಚ್ಚವಾಗುತ್ತದೆ. ಇದರಲ್ಲಿ 1600 ಸಹಾಯಧನ ನೀಡಲಾಗುವುದು. ಮಳೆಯಾಶ್ರಿತ ಪ್ರದೇಶದ ಸಮಗ್ರ ಕೃಷಿ ಪದ್ಧತಿಗೆ ಗರಿಷ್ಠ 1,25,000 ಸಹಾಯಧನ ನೀಡಲಾಗುವುದು.

ನೀರು ಸಂಗ್ರಹಣಾ ಘಟಕ ನಿರ್ಮಾಣಕ್ಕೆ ಸಹಾಯಧನ

ನೆಲಮಟ್ಟಕ್ಕಿಂತ ಕೆಳಗೆ 4500 ಕ್ಯುಬೆಕ್ ಮೀಟರ್ ಗೆ ಘಟಕ ವೆಚ್ಚ 5.625 ಲಕ್ಷಗಳಿಗೆ ಶೇ. 50 ರಷ್ಟು  ಸಬ್ಸಿಡಿ ನೀಡಲಾಗುವುದು. 6500 ಕ್ಯೂಬೆಕ್ ಮೀಟರ್ ಘಟಕ ವೆಚ್ಚಕ್ಕೆ 8 ಲಕ್ಷ ರೂಪಾಯಿ ಅದರಲ್ಲಿ ಶೇ. 50 ರಷ್ಟು  ಅಂದರೆ 4 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು. 9000 ಕ್ಯುಬೆಕ್ ಘಟಕ ವೆಚ್ಚ 10 ಲಕ್ಷ ರೂಪಾಯಿಗೆ ಶೇ. 50 ರಷ್ಟು ರಂತೆ ಗರಿಷ್ಟ 5 ಲಕ್ಷ ರೂಪಾಯಿಯವರೆಗೆ ಸಬ್ಸಿಡಿನೀಡಲಾಗುವುದು.

ಫಲಾನುಭವಿಗಳ ಆಯ್ಕೆ ಹೇಗೆ ಮಾಡಲಾಗುವುದು?

ಫಲಾನುಭವಿಗಳನ್ನು ನಿಯಮಾನುಸಾರ ಆಯ್ಕೆ ಮಾಡಲಾಗುವುದು. ಪರಿಶಿಷ್ಟ ಜಾತಿಗೆ ಶೇ. 17.1, ಪರಿಶಿಷ್ಟ ಪಂಗಡಕ್ಕೆ ಶೇ. 6.9 ರಂತೆ ಆಯ್ಕೆ ಮಾಡಲಾಗುವುದು. ಮಹಿಳೆಯರಿಗೆ ಶೇ. 33 ರಷ್ಟು  ಅಲ್ಪಸಂಖ್ಯಾತರಿಗೆ ಶೇ. 15 ರಷ್ಟು ಆದ್ಯತೆ ನೀಡಲಾಗುವುದು.

Rastriya krishi vikas yojaneಯಡಿಯಲ್ಲಿ ಸೌಲಭ್ಯ ಪಡೆಯಲು ರೈತರ ಸ್ವಂತ ಜಮೀನು ಇರಬೇಕು. ಪಹಣಿ ಪತ್ರ (ಆರ್.ಟಿಸಿ) ಇರಬೇಕು. ಆಧಾರ್ ಕಾರ್ಡ್ ಇರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಇರಬೇಕು. ಬ್ಯಾಂಕ್ ಪಾಸ್ ಬುಕ್ ಇರಬೇಕು.

ಬರಗಾಲ ಪರಿಹಾರ ಫಲಾನುಭವಿಗಳ ಪಟ್ಟಿ ಬಿಡುಗಡೆ

ಬರಗಾಲ ಪರಿಹಾರ ಫಲಾನುಭವಿಗಳ ಪಟ್ಟಿ ಬಿಡುಗಡೆಯಾಗಿದೆ. ಈ ಲಿಸ್ಟ್ ನಲ್ಲಿ ಯಾರ ಯಾರ ಹೆಸರಿದೆಯೋ ಅವರಿಗೆ ಬರ ಪರಿಹಾರ ಹಣ ಬಿಡುಗಡೆಯಾಗಿದೆ. ಅತೀ ಶೀಘ್ರದಲ್ಲಿ ಎಲ್ಲಾ ರೈತರ ಖಾತೆಗೆ ಬರಗಾಲ ಪರಿಹಾರ ಹಣ ಜಮೆಯಾಗಲಿದೆ. ಹಾಗಾದರೆ ಬರ ಪರಿಹಾರ ಲಿಸ್ಟ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡುವುದು ಹೇಗೆ? ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು ಎಂಬುದರ ಮಾಹಿತಿ ಇಲ್ಲಿದೆ.

ಈಗಾಗಲೇ ರಾಜ್ಯದ ಬಹುತೇಕ ತಾಲೂಕುಗಳ ರೈತರಿಗೆ ಬರ ಪರಿಹಾರ ಹಣ ಜಮೆ ಮಾಡಲಾಗಿದೆ. ಬರ ಪರಿಹಾರ ಹಣ ತಾಂತ್ರಿಕ ತೊಂದರೆಯಿಂದ ತಡೆಹಿಡಿಯಲಾಗಿದೆಯೋ ಅಥವಾ ನಿಮ್ಮ ಆ್ಯಕ್ಟಿವ್ ಇಲ್ಲದ ಬ್ಯಾಂಕ್ ಖಾತೆಗೆ ಜಮೆಯಾಗಿದೆಯೇ ಎಂಬುದನ್ನೇಲ್ಲಾ ಇಲ್ಲೇ ಚೆಕ್ ಮಾಡಬಹುದು.

ಬರಗಾಲ ಪರಿಹಾರ ಫಲಾನುಭವಿಗಳ ಹೆಸರು ಚೆಕ್ ಮಾಡುವುದು ಹೇಗೆ?

ಬರ ಪರಿಹಾರ ಲಿಸ್ಟ್ ನಲ್ಲಿ ತಮ್ಮ ಹೆಸರು ಇರುವುದನ್ನು ಚೆಕ್ ಮಾಡಲು ಈ

https://parihara.karnataka.gov.in/service87/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಪರಿಹಾರ ಬೆನಿಫಿಶಿಯರಿ ಪೇಮೆಂಟ್ ರಿಪೋರ್ಟ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಯಾವ ಜಿಲ್ಲೆಯವರಾಗಿದ್ದೀರಿ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ನಿಮ್ಮ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು ಆಯ್ಕೆ ಮಾಡಿಕೊಳ್ಳಬೇಕು.

ಯಾವ ವರ್ಷದ ಬೆಳೆ ಹಾನಿ ಪರಿಹಾರ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷವನ್ನು select Year ನಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ನಂತರ select Season ನಲ್ಲಿ ಖಾರೀಪ್ ಆಯ್ಕೆ ಮಾಡಿಕೊಳ್ಳಬೇಕು.  Select Calamity  ನಲ್ಲಿ Flood ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ಊರಲ್ಲಿ ಯಾರು ಯಾರಿಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಹಾಗೂ ಅವರಿಗೆ ಎಷ್ಟು ಹಣ ಜಮೆಯಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಅದರ ಮುಂದುಗಡೆ ಇರುವ View Status ಮೇಲೆ ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಜಿಲ್ಲೆ, ಬ್ಯಾಂಕಿನ ಹೆಸರು ಹಾಗೂ ನಿಮಗೆ ಎಷ್ಟು ಹಣ ಜಮೆಯಾಗಿದೆ? ನಿಮ್ಮ ಹೆಸರು ಹಾಗೂ ಪೇಮೆಂಟ್ ಸ್ಟೇಟಸ್ ಕಾಣಿಸುತ್ತದೆ. ಅದರ ಕೆಳಗಡೆ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಬೆಳೆ, ಹಾಗೂ ಎಷ್ಟು ಎಕರೆಗೆ ಬೆಳೆ ಹಾನಿ ಪರಿಹಾರ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

Leave a Comment