Red gram minimum support price ರೈತರಿಗೆ ಗುಡ್ ನ್ಯೂಸ್ : ತೊಗರಿ ಖರೀದಿಸಲು ಮಾರ್ಚ್ 31 ರವರೆಗೆ ಕಾಲಾವಕಾಶ

Written by Admin

Published on:

Spread the love

Red gram minimum support price : 2024-25 ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಸಲು ಕಾಲಾವಧಿಯನ್ನು 2025ರ ಮಾರ್ಚ್ 31 ರವರೆಗೆ ವಿಸ್ತರಿಸಿ, ನೋಂದಣಿಯ ಜೊತೆಗೆ ಖರೀದಿ ಪ್ರಕ್ರಿಯೆಯನ್ನೂ ಸಹ ಕೈಗೊಳ್ಳಲು ಸರ್ಕಾರವು ಆದೇಶಿಸಿದೆ.

Red gram minimum support price ಆದ್ದರಿಂದ ಜಿಲ್ಲೆಯ ರೈತ ಭಾಂದವರು ಇದರ ಸದುಪಯೋಗ ಪಡೆದುಕೊಂಡು ಇನ್ನೂ ಹೆಚ್ಚಿನ ರೈತರು ಎಫ್.ಎ.ಕ್ಯೂ. ಗುಣಮಟ್ಟದ ತೊಗರಿ ಮಾರಾಟಕ್ಕಾಗಿ ತಮ್ಮ ಸಮಿಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಥವಾ ರೈತ ಉತ್ಪಾದಕ ಸಂಘಗಳಿಗೆ ಭೇಟಿ ನೀಡಿ ತಾವು ಬೆಳೆದ ತೊಗರಿ ಮಾರಾಟಕ್ಕೆ ನೊಂದಾಯಿಸಿಕೊಂಡು ತಾವು ಬೆಳೆದ ತೊಗರಿ ಉತ್ಪನ್ನವನ್ನು ಮಾರಾಟ ಮಾಡಬೇಕೆಂದು ಕಲಬುರಗಿ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಅವರು ತಿಳಿಸಿದ್ದಾರೆ.

Red gram minimum support price

Red gram minimum support price  ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೊಗರಿಗೆ ಪ್ರತಿ ಕ್ವಿಂಟಾಲ್ ರೂ.7,550 ನಿಗದಿಪಡಿಸಿದ್ದು, ಇದಕ್ಕೆ ರಾಜ್ಯ ಸರ್ಕಾರದಿಂದ ಪ್ರೋತ್ಸಾಹಧನ 450 ರೂ.ಪ್ರತಿ ಕ್ವಿಂಟಾಲಗೆ ಸೇರಿಸಿ ಒಟ್ಟು ಪ್ರತಿ ಕ್ವಿಂಟಾಲ್‌ಗೆ 8,000 ರೂ.ದರದಂತೆ ಪ್ರತಿ ಎಕರೆಗೆ 04 ಕ್ವಿಂಟಾಲ್ ಮತ್ತು ಪ್ರತಿ ರೈತರಿಂದ ಗರಿಷ್ಠ 40 ಕ್ವಿಂಟಲ್ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಗಳ ಮೂಲಕ ಜಿಲ್ಲೆಯಲ್ಲಿ ಒಟ್ಟು 196 ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಎಫ್.ಎ.ಕ್ಯೂ ಗುಣಮಟ್ಟದ ತೊಗರಿಯನ್ನು ಖರೀದಿ ಮಾಡಲಾಗುತ್ತಿದೆ.

ಇದನ್ನೂ ಓದಿ Crop insurance sahayavani number ಬೆಳೆ ವಿಮೆ ಸಹಾಯವಾಣಿ ನಂಬರ್

Red gram minimum support price ಕಲಬುರಗಿ ಜಿಲ್ಲೆಯಲ್ಲಿ 2024-25ನೇ ಸಾಲಿಗೆ 6.27 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದ್ದು, 50 ಲಕ್ಷ ಕ್ವಿಂಟಲ್ ಇಳುವರಿ ನಿರೀಕ್ಷಿಸಲಾಗಿದೆ. ದಿನಾಂಕ:18-03-2025ರ ಅಂತ್ಯಕ್ಕೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಕಲಬುರಗಿ ಸಂಸ್ಥೆಯು 17,740 ರೈತರ ನೋಂದಣಿ ಹಾಗೂ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಕಲಬುರಗಿ ಸಂಸ್ಥೆಯು ಒಟ್ಟು 7,189 ರೈತರು ನೊಂದಣಿಯನ್ನು ಕೈಗೊಂಡಿದ್ದು, ಒಟ್ಟು ಜಿಲ್ಲೆಯಲ್ಲಿ 24,929 ರೈತರ ನೊಂದಣಿಯನ್ನು ಕೈಗೊಂಡು 5,713 ರೈತರಿಂದ ಒಟ್ಟು 84,844 ಕ್ವಿಂಟಲ್ ತೊಗರಿಯನ್ನು ಜಿಲ್ಲೆಯ ರೈತರಿಂದ ಖರೀದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Red gram minimum support price ರೈತ ಮಹಿಳೆಯರಿಗೆ ತರಬೇತಿ: ಹೆಸರು ನೋಂದಣಿಗೆ ಸೂಚನೆ

ಕಲಬುರಗಿಜಿಲ್ಲಾ ಕೃಷಿ ತರಬೇತಿ ಕೇಂದ್ರ ಯೋಜನೆಯಡಿ 2024-25ನೇ ಸಾಲಿನಲ್ಲಿ ಮೌಲ್ಯವರ್ಧನೆ, ಸಂಸ್ಕರಣೆ ಹಾಗೂ ಧಾನ್ಯ ಸಂಗ್ರಹಣೆ ಕುರಿತು ರೈತ ಮಹಿಳೆಯರಿಗೆ ಇದೇ ಮಾರ್ಚ್ 20 ರಂದು ಒಂದು ದಿನದ ತರಬೇತಿಯನ್ನು ಕೋಟನೂರ(ಡಿ) ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ ಕಲಬುರಗಿ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಮುಖ್ಯಸ್ಥರು ತಿಳಿಸಿದ್ದಾರೆ.

Red gram minimum support price ತರಬೇತಿ ಪಡೆಯಲು ಆಸಕ್ತಿಯುಳ್ಳ ಎಫ್.ಐ.ಡಿ. (ಈIಆ) ಹೊಂದಿರುವ ರೈತ ಮಹಿಳೆಯರು ಕೃಷಿ ಅಧಿಕಾರಿ ಸುಜಾತಾ.ಆರ್.ರಾಜನಾಳಕರ-9448651201, ಯಾಸ್ಮಿನ್-9901604822 ಹಾಗೂ ಸಹಾಯಕ ಕೃಷಿ ನಿರ್ದೇಶಕಿ (ರೈ.ಮ) ನೀಲಕ್ಕಾ ನರಸಲಗಿ- 9513839555 ಇವರನ್ನು ಸಂಪರ್ಕಿಸಿ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.

Red gram minimum support price ಕಲಬುರಗಿ ಮಹಾನಗರ ಪಾಲಿಕೆ ವಿವಿಧಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ಅನುಮೋದಿತ ಕ್ರೀಯಾ ಯೋಜನೆ 2012-13 ಮತ್ತು 2014-15ನೇ ಸಾಲಿನ ಪಾಲಿಕೆ ನಿಧಿ ಹಾಗೂ 2015-16 ಎಸ್.ಎಫ್.ಸಿ. ಮತ್ತು 2019-20ನೇ ಸಾಲಿನ ಪಾಲಿಕೆ ಪ.ಕ್ರೀಯಾ ಯೋಜನೆಯಡಿ ನಿಗದಿಪಡಿಸಿದ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣ ಕಾರ್ಯಕ್ರಮಗಳಿಗೆ ಈ ಕೆಳಕಂಡ ಯೋಜನೆಗಳಡಿ ಸೌಲಭ್ಯ ಪಡೆಯಲು 2024-25ನೇ ಸಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Crop insurance sahayavani number

Red gram minimum support price 2012-13 ಮತ್ತು 2014-15ನೇ ಸಾಲಿನ ಪಾಲಿಕೆ ನಿಧಿ ಯೋಜನೆಯಡಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಮುದಾಯ ಭವನಗಳಿಗೆ ಆಟದ ಸಾಮಗ್ರಿಗಳು ಒದಗಿಸುವುದು, 2015-16ನೇ ಸಾಲಿನ ಎಸ್.ಎಫ್.ಸಿ. ಕ್ರಿಯಾ ಯೋಜನೆಯಡಿ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಜನರಿಗೆ ಬ್ಯಾಂಡಸೆಟ್ ವಿತರಿಸುವುದು ಹಾಗೂ 2019-20ನೇ ಸಾಲಿನ ಪಾಲಿಕೆ ಪ.ಕ್ರೀ. ಯೋಜನೆಯಡಿ ಪರಿಶಿಷ್ಟ ಪಂಗಡದ ಜನರಿಗೆ ಲಘುವಾಹನ ತರಬೇತಿ ನೀಡಲಾಗುತ್ತದೆ.

Red gram minimum support price ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಮಹಾನಗರಪಾಲಿಕೆಯ ಶೇ. 24.10 ಮತ್ತು ಆವಕ ಶಾಖೆಯಿಂದ ಕಚೇರಿ ಸಮಯದಲ್ಲಿ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ ಕಡ್ಡಾಯವಾಗಿ ದೃಢೀಕರಣದೊಂದಿಗೆ 2025ರ ಏಪ್ರಿಲ್ 17ರ ಸಂಜೆ 5.30 ಗಂಟೆಯೊಳಗಾಗಿ ಕಲಬುರಗಿ ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.

kharif Crop survey check in mobile

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರಪಾಲಿಕೆ ಶೇ. 24.10 ಶಾಖೆಯನ್ನು ಸಂಪರ್ಕಿಸಬೇಕು. ಈ ಮೊದಲು ಮಹಾನಗರ ಪಾಲಿಕೆಯಿಂದ ಅಥವಾ ಸರ್ಕಾರದ ವಿವಿಧ ಯೋಜನೆಯಡಿ ಸೌಲಭ್ಯ ಪಡೆದವರು ಪುನಃ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.

Leave a Comment