RTC aadhar card link ಪಹಣಿಗೆ ಆಧಾರ್ ಲಿಂಕ್ ಹೀಗೆ ಮಾಡಿ 2024

Written by Admin

Published on:

Spread the love

RTC aadhar card link : ಇನ್ನೂ ಮುಂದೆ ಸರ್ಕಾರದ ಸೌಲಭ್ಯಗಳು ಪಡೆಯಬೇಕಾದರೆ ರೈತರು ಪಹಣಿಗೆ ಆಧಾರ್ ಕಾರ್ಡಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

ಹೌದು, ಸರ್ಕಾರದ ಸೌಲಭ್ಯಗಳನ್ನು ರೈತರು ಸುಲಭವಾಗಿ ಪಡೆಯಬೇಕಾದರೆ ಆರ್.ಟಿ.ಸಿ ದಾಖಲೆಗಳಿಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಕಡ್ಡಾಯವಾಗಿ ಜೋಡಿಸಬೇಕು. ಈ ಕುರಿತು ರಾಜ್ಯ ಸರ್ಕಾರವುಆದೇಶ ಹೊರಡಿಸಿದೆ.

ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಗೆ ಸರ್ಕಾರದ ಹೊಸ ತಂತ್ರಾಂಶ ಸಿದ್ದಪಡಿಸಿದ. ಇನ್ನುಮುಂದೆ ಸರ್ಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೆ ರೈತರು ಈ ಹೊಸ ಪದ್ಧತಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ.  ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ? ಇದಕ್ಕೆ ಯಾವ ಯಾವ ದಾಖಲೆ ಬೇಕು? ರೈತರು ಸ್ವತಃ ಮೊಬೈಲ್ ನಲ್ಲೇ ಲಿಂಕ್ ಮಾಡಬಹುದೇ? ಹಾಗಾದರೆ ಮೊಬೈಲ್ ನಲ್ಲಿ ಆಧಾರ್ ಪಹಣಿ ಲಿಂಕ್ ಹೇಗೆ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

RTC aadhar card link
RTC aadhar link in mobile

ರೈತರ ಆರ್.ಟಿ.ಸಿ ದಾಖಲೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಿಸುವ ಕಾರ್ಯದ ಪೂರ್ಣ ಜವಾಬ್ದಾರಿಯನ್ನು ಗ್ರಾಮ ಲೆಕ್ಕಾಧಿಕಾರಿಗೆ ಸಂಬಂಧಪಟ್ಟಿದೆ. ಈ ಕಾರ್ಯದಲ್ಲಿ ನಿರ್ಲಕ್ಷ ವಹಿಸಿದರೆ ಸರ್ಕಾರದ ಸೌಲಭ್ಯವನ್ನು ರೈತರಿಗೆ ತಲುಪಿಸುವುದು ಸಾಧ್ಯವಾಗುವುದಿಲ್ಲ. ಈ ಹಿನ್ನೆಲಯಲ್ಲಿ ರೈತರಿಗೆ ಸೂಕ್ತ ತಿಳಿವಳಿಕೆ ನೀಡಿ ಆಧಾರ್ ಸಂಖ್ಯೆ ಪಡೆದು ಆರ್.ಟಿ.ಸಿ ದಾಖಲೆಗೆ ವಿವರ ಮಾಹಿತಿಯೊಂದಿಗೆ ಜೋಡಿಸಲು ಸರಕಾರ ಆದೇಶಿಸಿದೆ. ಗ್ರಾಮ ಲೆಕ್ಕಾಧಿಕಾರಿ ಆಧಾರ್ ಸಂಖ್ಯೆ ಜೋಡಿಸುವ ಕೆಲಸಕ್ಕೆ ಶೀಘ್ರ ಚಾಲನೆ ನೀಡುವುದು ಕಡ್ಡಾಯವಾಗಿದೆ.

RTC aadhar card link  ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಿಂದಲೇ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಈ

https://landrecords.karnataka.gov.in/service4

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್ ಹಾಕಬೇಕು. ನಂತರ ನಿಮ್ಮ ಬಳಿಯಿರುವ ಮೊಬೈಲ್ ನಂಬಿಗೆ ಓಟಿಪಿ ಬರುತ್ತದೆ.  ಆಗ ನೀವು ನಿಮ್ಮ ಮೊಬೈಲಿಗೆ ಬಂದ ಓಟಿಪಿಯನ್ನು ಅಲ್ಲಿ ಬರೆದು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಭೂಮಿ ಸಿಟಿಜನಟ್ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ RTC aadhar card link ಮಾಡಲು ನೀವು ಬಯಸುತ್ತೀರಾ ಎಂಬ ಸಂದೇಶ ಕಾಣಿಸುತ್ತದೆ. ಆಗ ನೀವು ಅಲ್ಲಿ ಯಸ್ ಎಂದು ನಮೂದಿಸಬೇಕು.ನಂತರ ನಿಮ್ಮ ಪಹಣಿಗೆ ಆಧಾರ್ ಕಾರ್ಡ್ ಲಿಂಕ್ ಆಗಿರುತ್ತದೆ. ಹಾಗೂ ಆಗಲೇ ನಿಮ್ಮ ಮೊಬೈಲಿಗೆ ಆಧಾರ್ ಪಹಣಿ ಲಿಂಕ್ ಆಗಿದೆ ಎಂಬ ಸಂದೇಶವೂ ನಿಮಗೆ ಕಾಣಿಸುತ್ತದೆ.

ಇದನ್ನೂ ಓದಿ Gruhalakshmi eligible non eligible list 2024 ಗೃಹಲಕ್ಷ್ಮೀ ಹಣ ಜಮೆ

ನಂತರ ನಿಮಗೆ ಅಲ್ಲಿ ಆಧಾರ್ ಕಾರ್ಡ್ ಗೆ ಪಹಣಿ ಲಿಂಕ್ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.

RTC aadhar card link

RTC aadhar card link  ಆಧಾರ್ ಕಾರ್ಡ್ ಗೆ ಪಹಣಿ ಏಕೆ ಲಿಂಕ್ ಮಾಡಿಸಬೇಕು?

ರೈತರು ತಮ್ಮ ಪಹಣಿಗಳಿಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ನಿಮ್ಮ ಜಮೀನಿನ ಮೇಲೆ ಯಾವುದೇ ವ್ಯಕ್ತಿ ದುರುಪಯೋಗ ಪಡೆದುಕೊಳ್ಳುವುದಿಲ್ಲ. ನಿಮ್ಮ ಜಮೀನಿಗೆ ಸಂಬಂಧಿಸಿದಂತೆ ಏನೇ ಚೇಂಜ್ ಮಾಡಿದರೂ ನಿಮ್ಮ ಮೊಬೈಲಿಗೆ ಸಂದೇಶ ಬರುತ್ತದೆ. ಇದರೊಂದಿಗೆ ಓಟಿಪಿ ಕೇಳಲಾಗುತ್ತದೆ. ಹಾಗಾಗಿ ನಿಮ್ಮ ಸಹಕಾರವಿಲ್ಲದ ಮಧ್ಯವರ್ತಿಗಳು ನಿಮ್ಮ ಜಮೀನಿನ ದಾಖಲೆಗಳನ್ನು ತಿದ್ದುಪಡಿ ಮಾಡುವುದಿಲ್ಲ. ಹಾಗಾಗಿ ರೈತರು ಕೂಡಲೇ ಪಹಣಿಗಳಿಗೆ ಆಧಾರ್ ಕಾರ್ಡ್ ನ್ನು ಲಿಂಕ್ ಮಾಡಿಸಿಕೊಳ್ಭಬೇಕು.

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಲೆಕ್ಕಾಧಿಕಾರಿಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಈ ಲೇಖನವು ನಿಮಗೆ ಉಪಯುಕ್ತವೆನಿಸಿದರೆ ನೀವು ಕಾಮೆಂಟ್ ಮಾಡಿ ತಿಳಿಸಬಹುದು. ನಿಮ್ಮ ಒಂದು ಕಾಮೆಂಟ್ ನಮಗೆ ಸ್ಪೂರ್ತಿ ನೀಡುತ್ತದೆ. ಮತ್ತೆ ರೈತರಿಗೆ ಉಪಯೋಗವಾಗುವ ಮಾಹಿತಿಗಳನ್ನು ಬರೆಯಲು ಪ್ರೇರಣೆ ನೀಡುತ್ತದೆ.

Leave a Comment