Solar pumpset subsidy : 2024-25ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ವತಿಯಿಂದ 5 ಹೆಚ್.ಪಿ ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಆಸಕ್ತಿಯುಳ್ಳ ಎಲ್ಲಾ ವರ್ಗದ ರೈತರಿಗೆ ಶೇ.50 ರಂತೆ ಸಬ್ಸಿಡಿ ನೀಡಲುಲಾಗುತ್ತಿದೆ. ಇದಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ (ಜಿಪಂ) ತೋಟಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ.
ಇಲಾಖೆಯ ಮಾರ್ಗಸೂಚಿಯಂತೆ 5 ಹೆಚ್.ಪಿ ಸೋಲಾರ್ ಪಂಪ್ ಸೆಟ್ ನ್ನು ಅಳವಡಿಸಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲಾಗುತ್ತಿದ್ದು, ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ತೋಟಗಾರಿಕೆ ಇಲಾಖೆಯ ತಾಲೂಕಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ಅಫಜಲ್ಪುರ 9743518608, ಆಳಂದ 8095809595143035, ಚಿಂಚೋಳಿ 9611250501, ಚಿತ್ತಾಪುರ 7760969088, ಕಲಬುರಗಿ 9900108196, ಜೇವರ್ಗಿ 9902838245 ಹಾಗೂ ಸೇಡಂ 9886752866 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Solar pumpset subsidy ಸೋಲಾರ್ ಪಂಪ್ಸೆಟ್ ಸಬ್ಸಿಡಿ ಹೆಚ್ಚಿಸಲಾಗಿದೆಯೇ?
ಸೋಲಾರ್ ಪಂಪ್ ಸೆಟ್ ಸಬ್ಸಿಡಿಯನ್ನುಶೇ.30 ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ರೈತರ ಆರ್ಥಿಕ ಹೊರೆಯನ್ನು ತಗ್ಗಿಸಲು ರಾಜ್ಯ ಸರ್ಕಾರವು ಶೇ.30 ರಿಂದ ಶೇ.50 ಕ್ಕೆ ಹೆಚ್ಚಿಸಲಾಗಿದೆ.
Solar pumpset subsidy ಸೋಲಾರ್ ಪಂಪ್ಸೆಟ್ ಪಡೆಯಲು ಯಾವ ಯಾವ ದಾಖಲೆ ಬೇಕು?
ಸೋಲಾರ್ ಪಂಪ್ ಸೆಟ್ ಪಡೆಯಲು ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ರೈತರ ಜಮೀನಿನ ಪಹಣಿ ಇರಬೇಕು.ಇದರೊಂದಿಗೆ ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಈ ದಾಖಲೆಗಳೊಂದಿಗೆ ಇನ್ನಿತರ ದಾಖಲೆಗಳು ಬೇಕಾಗಿದ್ದರೆ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಾಗಿದ್ದರೆ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕು.
Solar pumpset subsidy ಅರ್ಜಿ ಸಲ್ಲಿಸುವುದು ಹೇಗೆ?
ರೈತರು ತಮ್ಮ ಹತ್ತಿರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಫಾರ್ಮ್ ಗಳನ್ನು ಪಡೆದುಕೊಳ್ಳಬೇಕು.
ಇದನ್ನೂ ಓದಿ : Bara parihara jama ಯಾವ ಸರ್ವೆ ನಂಬರಿಗೆ ಬರ ಪರಿಹಾರ ಜಮೆ? ಹೀಗೆ ಚೆಕ್ ಮಾಡಿ 2024
ಭರ್ತಿ ಮಾಡಿದ ಅರ್ಜಿಗಳನ್ನು ನಿಗದಿತ ದಿನಾಂಕದೊಳಗೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ರೈತರು ಇಲ್ಲಿ ಸಂಪರ್ಕಿಸಿ
ರೈತರು ಹೆಚ್ತಿನ ಮಾಹಿತಿಗಾಗಿ ತಮ್ಮ ಹತ್ತಿರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು. ಅಥವಾ ಕಲಬುರಗಿ ಜಿಲ್ಲೆಯ ರೈತರು ಮೇಲ್ಗಡೆ ನೀಡಿದ ಮೊಬೈಲ್ ನಂಬರ್ ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
Solar pumpset subsidy ಸೋಲಾರ್ ಪಂಪ್ ಸೆಟ್ ದಿಂದ ರೈತರಿಗೆ ಉಪಯೋಗ?
Solar pumpset ಅಳವಡಿಸಿದರೆ ರೈತರಿಗೆ ತಮಗೆ ಬೇಕಾದಾಗ ಮೋಟರ್ ಸ್ಟಾರ್ಟ್ ಮಾಡಬಹುದು. ವಿದ್ಯುತ್ ಬಿಲ್ ಉಳಿತಾಯವಾಗುತ್ತದೆ. ರಾತ್ರಿ ಹೊತ್ತಿನಲ್ಲಿ ಮೋಟಾರ್ ಸ್ಟಾರ್ಟ್ ಮಾಡುವ ಅಗತ್ಯವಿರುವುದಿಲ್ಲ.ಹಾಗಾಗಿ ರೈತರು ಸಬ್ಸಿಡಿಯಲ್ಲಿ ಈ ಸೋಲಾರ್ ಪಂಪ್ ಸೆಟ್ ಪಡೆಯಬಹುದು. ಇದು ರೈತರಿಗೆ ತುಂಬಾ ಉಪಯುಕ್ತವಾಗಲಿದೆ.
Solar pumpset subsidy ರೈತರ ಆಯ್ಕೆ ಹೇಗೆ ಮಾಡಲಾಗುವುದು?
ಹಿರಿತನದ ಆಧಾರದ ಮೇಲೆ ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಲಾಗುವುದು. ಇದರೊಂದಿಗೆ ಈ ಹಿಂದೆ ಸೌಲಭ್ಯ ಪಡೆದುಕೊಳ್ಳದವರಿಗೆ ಈಗ ಮೊದಲ ಆದ್ಯತೆ ನೀಡಲಾಗುವುದು. ಇನ್ನೇಕೆ ತಡ ನಿಮ್ಮ ಹತ್ತಿರದ ತೋಟಗಾರಿಕೆ ಇಲಾಖೆಗೆ ತೆರಳಿ ಅರ್ಜಿ ಸಲ್ಲಿಸಿ.ಅರ್ಜಿ ಸಲ್ಲಿಸುವ ಮುನ್ನ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸಬೇಕು. ಅಂದಾಗ ಮಾತ್ರ ನಿಮಗೆ ಸೋಲಾರ್ ಪಂಪ್ ಸೆಟ್ ಸಬ್ಸಿಡಿಯಲ್ಲಿ ಸಿಗುವ ಸಾಧ್ಯತೆಯಿದೆ.