Subsidy for women ಮಹಿಳೆಯರಿಗೆ 1.50 ಲಕ್ಷ ಸಬ್ಸಿಡಿ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನ

Written by Admin

Published on:

Spread the love

Subsidy for women : ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ 2024-25 ನೇ ಸಾಲಿಗೆ ಉದ್ಯೋಗಿನಿ, ಚೇತನಾ, ಧನಶ್ರೀ, ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ ಹಾಗೂ ದೇವದಾಸಿ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆ ಯೋಜನೆಗಳಡಿ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟಲ್ ದಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

Subsidy for women ಉದ್ಯೋಗಿನಿ ಯೋಜನೆ ಸಬ್ಸಿಡಿ

ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆ ಹಾಗಾೂ ಸೇವಾ ಚುಟವಟಿಕೆಗಳನ್ನು ಕೈಗೊಳ್ಳಲು 3 ಲಕ್ಷ ರೂಪಾಯಿಗಳವರಿಗಿನ ಬ್ಯಾಂಕ್ ಸಾಲ ಹಾಗೂ ನಿಗಮದಿಂದ ಸಹಾಯಧನ ಸೌಲಭ್ಯ ಇರುತ್ತದೆ. ಪರಿಶಿಷ್ಟ ಜಾತಿ  ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಸಾಲದ ಶೇ. 50 ರಷ್ಟು ಗರಿಷ್ಠ 1,50,000 ರೂಪಾಯಿಗಳವರೆಗಿನ ಸಹಾಯಧನ ಹಾಗೂ ಸಾಮಾನ್ಯ ವರ್ಗದವರಿಗೆ ಶೇ. 30 ರಷ್ಟು  ಅಂದರೆ ಗರಿಷ್ಠ 90,000 ರೂಪಾಯಿಗಳ ಸಬ್ಸಿಡಿ ನೀಡಲಾಗುವುದು. ವಯೋಮಿತಿ 18 ರಿಂದ 55 ವಯೋಮಾನದೊಳಗಿರಬೇಕು.  ಆದಾಯಮಿತಿ ಪರಿಶಿಷ್ಟಜಾತಿ ಪರಿಶಿಷ್ಟಪಂಗಡದವರಿಗೆ 2,00000 ರೂಪಾಯಿ ಹಾಗೂ ಸಾಮಾನ್ಯವರ್ಗದವರಿಗೆ 1,50,000 ರೂಪಾಯಿ ಇರುತ್ತದೆ. ಅರ್ಹ ಫಲಾನುಭವಿಗಳನ್ನು ಮತಕ್ಷೇತ್ರವಾರು ಶಾಸಕರ ಆಯ್ಕೆ ಸಮಿತಿಯಲ್ಲಿ ಆಯ್ಕೆ ಮಾಡಲಾಗುತ್ತದೆ.

Subsidy for women

Subsidy for women ಚೇತನ, ಧನಶ್ರೀ ಹಾಗೂ ಲಿಂಗತ್ವಅಲ್ಪಸಂಖ್ಯಾತರ ಪುನರ್ವಸತಿ  ಹಾಗೂ ದೇವದಾಸಿ ಪುನರ್ವಸತಿ ಯೋಜನೆ

ಈ ಯೋಜನೆಗಳಡಿ 18 ರಿಂದ 60 ವಯೋಮಾನದೊಳಗಿನ ದಮನಿತ ಮಹಿಳೆಯರು, ಹೆಚ್.ಐ.ವಿ ಸೋಂಕಿತ ಮಹಿಳೆಯರು ಹಾಗೂ ಲಿಂಗತ್ವ ಅಲ್ಬಸಂಖ್ಯಾತರಿಗೆ ವಿವಿಧ ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳಲು 30,000 ರೂಪಾಯಿಗಳ ಆರ್ಥಿಕ ಪ್ರೋತ್ಸಾಹಧನ ನೀಡಲಾಗುತ್ತದೆ. ಅರ್ಹ ಫಲಾನುಭವಿಗಳನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ನಿಗಮದ ಎಲ್ಲಾ ಯೋಜನಗಳಡಿ ಜಾಲತಾಣ https://sevasindhu.karnataka.gov.in ದಲ್ಲಿ 2024 ರ ಸೆಪ್ಟೆಂಬರ್ 21 ರೊಳಗಾಗಿ ಆನ್ಲೈನ್ ಮೂಲಕಅರ್ಜಿ ಆರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕು ಶಿಶು ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ಕೃಷಿ ಯಾಂತ್ರೀಕರಣ ಯೋಜನೆಯಡಿ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ : ಕೃಷಿ ಇಲಾಖೆಯ ಕೃಷಿ ಯಾಂತ್ರೀಕರಣ ಯೋಜನೆಯಡಿ ಸಹಾಯಧನ ಸೌಲಭ್ಯ ಕಲ್ಪಿಸಲು ಭೂ ಸಿದ್ಧತೆ ಉಪಕರಣಗಳಾದ ಲೆವಲರ್, ರೋಟೋವೇಟರ್, ಕಲ್ಟಿವೇಟರ್, ಎಂ.ಬಿ.ನೇಗಿಲು, ಫರೋ ಓಪನರ್, ಪವರ್ ಟಿಲ್ಲರ್,  ಮಿನಿ ಟ್ರ್ಯಾಕ್ಟರ್ ಹಾಗೂ ಅಂತರ ಬೇಸಾಯ ಉಪಕರಣಗಳಾದ ಪವರ್ ವೀಡರ್, ಬ್ರಷ್ ಕಟರ್, ಮತ್ತಿತರ ಉಪಕರಣಗಳಿಗೆ ಶೇ. 50 ರಷ್ಟು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನದಲ್ಲಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ Bele Darshak ಬೆಳೆ ಸಮೀಕ್ಷೆ ಸರಿಯಾಗಿ ಆಗಿದೆಯೇ? ಇಲ್ಲೇ ಹೀಗೆ ಚೆಕ್ ಮಾಡಿ 2024

ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹನಿ ನೀರಾವರಿ ಯೋಜನೆಗೆ ಅರ್ಜಿ ಆಹ್ವಾನ

ಚಿಕ್ಕಬಳ್ಳಾಪುರ : 2024-25 ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಮತ್ತು ಅಟಲ್ ಭೂಜಲ್ ಯೋಜನೆಯಡಿ ಕೃಷಿ ಬೆಳೆಗಳಲ್ಲಿ ನೀರಿನ ಸಮರ್ಥ ಬಳಕೆಯನ್ನು ಉತ್ತೇಜಿಸಲು ಕೃಷಿ ಇಲಾಖೆ ವತಿಯಿಂದ ತುಂತುರು ಮತ್ತು ಹನಿ ನೀರಾವರಿ ಘಟಕಗಳನ್ನು ಶೇ. 90 ರ ರಿಯಾಯಿತಿ ದರದಲ್ಲಿ ವಿತರಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

loan

ಪಹಣಿ, ಕೃಷಿ ಬೆಳೆ ದೃಢೀಕರಣ ಪತ್ರ, ಕೊಳವೆಬಾವಿ, ತೋಟಗಾರಿಕೆ ಮತ್ತು ರೇಷ್ಮೆಇಲಾಖೆಗಳ ನಿರಕ್ಷೇಪಣೆ ಪತ್ರ, 100 ರೂಪಾಯಿ, ಸ್ಟ್ಯಾಂಪ್ ಪೇಪರ್, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಪ್ರತಿ, 4 ಪಾಸ್ ಪೋರ್ಟ್ ಭಾವಚಿತ್ರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರು ಜಾತಿ ಪ್ರಮಾಣ ಪತ್ರ, ಮತ್ತಿತರ ದಾಖಲೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಗುಡಿಬಂಡೆ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರಾದಎ. ಕೇಶವರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment