Today Gruhalakshmi amount credit : ರ‍್ನಾಟಕ ಗೃಹಿಣಿಯರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಬಹುತೇಕ ಜಿಲ್ಲೆಯ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಜನವರಿ ತಿಂಗಳ ಹಣ ಇಂದು ಸೋಮವಾರ ಸಂಜೆ ಖಾತೆಗೆ ಜಮೆಯಾಗಿದೆ.
ರ‍್ನಾಟಕ ರ‍್ಕಾರ ಜಾರಿಗೆ ತಂದ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಮಾಸಿಕ ಹಣ ಹಬ್ಬದ ಸಂರ‍್ಭದಲ್ಲಿ ಪಾವತಿ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದರು. ಇತ್ತ ಯಾವಾಗ ಜಮೆಯಾಗುತ್ತದೆಯೋ ಎಂದು ಫಲಾನುಭವಿ ಮಹಿಳೆಯರು ಎರಡು ದಿನಗಳಿಂದ ಎದುರು ನೋಡುತ್ತಿದ್ದರು. ಸೋಮವಾರ ಸಂಜೆ ಕಲಬುರಗಿ, ದಾವಣಗೆರೆ, ಚಿತ್ರದರ‍್ಗ, ಬಳ್ಳಾರಿ, ಶಿವಮೊಗ್ಗ ಸೇರಿದಂತೆ ಬಹುತೇಕ ಜಿಲ್ಲೆಗಳ ಫಲಾನುಭವಿ ಮಹಿಳೆಯರ ಖಾತೆಗೆ ಹಣ ಜಮೆಯಾಗಿದೆ.
Today Gruhalakshmi amount credit ಜಮೆಯಾದ ಹಣ ಯಾವ ತಿಂಗಳದ್ದು?
2024 ಡಿಸೆಂಬರ್‌ವರೆಗೂ 17 ತಿಂಗಳ ಹಣ ಖಾತೆಗೆ ಜಮೆಯಾಗಿತ್ತು. ಜನವರಿ ಹಾಗೂ ಫೆಬ್ರವರಿ ತಿಂಗಳ ಹಣ ಬಾಕಿತ್ತು. ಸದ್ಯ ಜನವರಿ ತಿಂಗಳ ಹಣ ಜಮೆಯಾಗಿದ್ದು, ಫೆಬ್ರವರಿ ತಿಂಗಳ ಹಣ ಇದೇ ತಿಂಗಳು ಅಂದರೆ ಈ ವಾರದಲ್ಲಿಯೇ ಜಮೆಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
Today Gruhalakshmi amount credit ಬಾಕಿ ಇದ್ದವರಿಗೆ ಶೀಘ್ರ ಬಿಡುಗಡೆ
ಜನವರಿ ತಿಂಗಳ ಹಣ ಸೋಮವಾರದಿಂದ ಫಲಾನುಭವಿಗಳ ಖಾತೆಗೆ ಜಮೆ ಆಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ತಾಂತ್ರಿಕ ದೋಷದಿಂದ ಮಂಗಳವಾರ ಜಮೆ ಆಗಲಿದೆ. ಸೋಮವಾರವೇ ಖಾತೆ ಹಣ ಜಮೆಯಾಗಿಲ್ಲ ಎಂದು ಆತಂಕ ಪಡಬೇಕಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Today Gruhalakshmi amount credit ಮರ‍್ಚ್‌ನಲ್ಲೆ 3 ತಿಂಗಳ ಹಣ
ಮರ‍್ಚ್ ತಿಂಗಳಲ್ಲಿ ಹಲವರಿಗೆ ಮೂರು ತಿಂಗಳ ಗೃಹಲಕ್ಷ್ಮಿ ಹಣ ಜಮೆ ಆಗಿದೆ. ನವೆಂಬರ್‌ನಿಂದ ಬಾಕಿ ಇಟ್ಟುಕೊಂಡಿದ್ದ ರ‍್ಕಾರವು ಮರ‍್ಚ್‌ನ ಮೊದಲ ವಾರ ನವೆಂಬರ್ ತಿಂಗಳ ಕಂತು, ಎರಡನೇ ವಾರ ಡಿಸೆಂಬರ್ ಕಂತನ್ನು ಬಿಡುಗಡೆ ಮಾಡಿತ್ತು. ಸದ್ಯ ಜನವರಿ ತಿಂಗಳ ಕಂತು ಬಿಡುಗಡೆಯಾಗಿದೆ.
ಇದನ್ನೂ ಓದಿ Ekyc rejected list ಯಾರ ಇಕೆವೈಸಿ ಆಗಿಲ್ಲವೋ ಆ ರೈತರ ಪಟ್ಟಿ ಬಿಡುಗಡೆ ನಿಮ್ಮ ಹೆಸರು ಇಲ್ಲೇ ಚೆಕ್ ಮಾಡಿ 2025
ನಾಡಿನಾದ್ಯಂತ ಭಾನುವಾರ ಯುಗಾದಿ, ಸೋಮವಾರ ರಂಜಾನ್ ಹಬ್ಬವಿದೆ. ರ‍್ನಾಟಕದ ಹಲವು ಜಿಲ್ಲೆಗಳಲ್ಲಿ ಸೋಮವಾರ ಚಂದ್ರ ನೋಡುವ ಹಬ್ಬವಿದ್ದರೆ, ಕೆಲ ಭಾಗದಲ್ಲಿ ಹೊಸ ತೊಡಕು ಆಚರಣೆ ಮಾಡುತ್ತಾರೆ. ಹಬ್ಬದ ಸಂರ‍್ಭದಲ್ಲಿ ಗೃಹಲಕ್ಷ್ಮಿ ಹಣ ಖಾತೆ ಜಮೆ ಆಗಿರುವುದು ಮಹಿಳೆಯರ ಖುಷಿಯನ್ನು ಹೆಚ್ಚಿಸಿದೆ.
Today Gruhalakshmi amount credit ಡಿಬಿಟಿ ಆ್ಯಪ್ ನಲ್ಲಿ ಸಿಗಲಿದೆ ಗೃಹಲಕ್ಷ್ಮೀ ಹಣ ಜಮೆ
ಸರ್ಕಾರದ ವಿವಿಧ ಯೋಜನೆಗಳಿಂದ ತಮಗೆಷ್ಟು ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಗೂಗಲ್ ಪ್ಲೇ ಸ್ಟೋರ್ ನಲ್ಲಿ
DBT Karnataka ಎಂದು ಟೈಪ್ ಮಾಡಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಈ
https://play.google.com/store/apps/details?id=com.dbtkarnataka
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಡಿಬಿಟಿ ಆ್ಯಪ್ ಓಪನ್ ಆಗುತ್ತದೆ. ಅಲ್ಲಿ ಇನಸ್ಟಾಲ್ ಮೇಲೆ ಕ್ಲಿಕ್ ಮಾಡಿದ ನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ಡಿಬಿಟಿ ಕೆಳಗಡೆ ಅಲೋ ಮೇಲೆ ಕ್ಲಿಕ್ ಮಾಡಬೇಕು. ಮತ್ತೊಂದು ಸಲ ಅಲೋ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಅಲ್ಲಿ ಕೆಳಗಡೆ ಕಾಣಿಸುವ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಆಗ ನಿಮ್ಮ ಆಧಾರ್ ಕಾರ್ಡಿಗೆ ನೋಂದಣಿಯಾಗಿರುವ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ. ಆ ಓಟಿಪಿ ನಮೂದಿಸಿದ ನಂತರ ನೀವು ಪಿನ್ ಕ್ರಿಯೇಟ್ ಮಾಡಿಕೊಳ್ಳಬೇಕು. ಮೇಲ್ಗಡೆ ನಮೂದಿಸಿ ಪಿನ್ ನ್ನು ಮತ್ತೇ ಕೆಳಗಡೆ ಹಾಕಬೇಕು. ಈ ಪಿನ್ ಅನ್ನು ನೀವು ನೆನಪಿಟ್ಟುಕೊಳ್ಳಬೇಕು. ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು..ಆಗ ನಿಮ್ಮ ಫೋಟೋ ಕಾಣಿಸುತ್ತದೆ.