Totagarike ilakheyinda siguva subsidigala ತೋಟಗಾರಿಕೆ ಇಲಾಖೆಯಿಂದ ಉಳುಮೆಯಿಂದ ಬೆಳೆ ಕಟಾವುವವರೆಗೂ ಬೇಕಾಗುವ ಕೃಷಿ ಯಂತ್ರೋಪಕರಣಗಳಿಗೆ ಸಿಗುವ ಸಬ್ಸಿಡಿಗಳ ಮಾಹಿತಿ ಇಲ್ಲಿದೆ.
ಹನಿ ನೀರಾವರಿಗೆ ಎಷ್ಟು ಸಬ್ಸಿಡಿ ಇರುತ್ತದೆ?
ಹನಿ ನೀರಾವರಿ ಅಳವಡಿಕೆಗೆ ಪ್ರತಿ ಫಲಾನುಭವಿಗೆ ಗರಿಷ್ಠ 5 ಹೆಕ್ಟೇರ್ ಪ್ರದೇಶಕ್ಕೆ ಹಾಗೂ ತರಕಾರಿ ಮತ್ತು ವಾಣಿಜ್ಯ ಹೂವು ಬೆಳೆಗಳಿಗೆ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು. ಮೊದಲು 2 ಹೆಕ್ಟೇರ್ ಪ್ರದೇಶಕ್ಕೆ ಇತರೆ ವರ್ಗದ ರೈತರಿಗೆ ಶೇ. 75 ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಮತ್ತು ನಂತರದ 3 ಹೆಕ್ಟೇರ್ ಪ್ರದೇಶಕ್ಕ ಎಲ್ಲಾ ವರ್ಗದ ರೈತರಿಗೆ ಶೇ. 45 ರಷ್ಟು ಸಬ್ಸಿಡಿ ನೀಡಲಾಗುವುದು.
ನೀರು ಸಂಗ್ರಹಣಾ ಘಟಕ (krishi Honda)
ವೈಯಕ್ತಿಕ ಕೃಷಿ ಹೊಂಡ(20 ಮೀ, 20 ಮೀ 3 ಮೀ) ನಿರ್ಮಾಣಕ್ಕೆ ಗರಿಷ್ಠ 75 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಸಂರಕ್ಷಿತ ಬೇಸಾಯಕ್ಕೆ ಸಿಗುವ ಸಬ್ಸಿಡಿಗಳು
ಪಾಲಿ ಹೌಸ್ ನಿರ್ಮಾಣಕ್ಕೆ ಪ್ರತಿ ಫಲಾನುಭವಿಗೆ 798 ರೂಪಾಯಿಯಿಂದ 1094 ರೂಪಾಯಿ ಪ್ರತಿ ಚದರ ಮೀಟರ್ ನಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುವುದು.
ನೆರಳು ಪರದೆ ನಿರ್ಮಾಣಕ್ಕೆ ಸಬ್ಸಿಡಿ
ಪ್ರತಿ ಫಲಾನುಭವಿಗೆ 394 ರೂಪಾಯಿ ಪ್ರತಿ ಚದರ್ ಮೀಟರ್ ರಂತೆ ಗರಿಷ್ಠ 4000 ಚದರ ಮೀಟರ್ ವರೆಗೆ ಸಹಾಯಧನ ನೀಡಲಾಗುವುದು.
ಪಕ್ಷಿ ನಿರೋಧಕ ಬಲೆ
ಪ್ರತಿ ಫಲಾನುಭವಿಗೆ 10 ರೂಪಾಯಿ ಚದರ ಮೀಟರ್ ನಂತೆ ಗರಿಷ್ಠ 5000 ಚದರ್ ಮೀಟರ್ ವರೆಗೆ 50 ಸಾವಿರ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
Totagarike ilakheyinda siguva subsidigala: ತೋಟಗಾರಿಕೆಯಲ್ಲಿ ಯಾಂತ್ರೀಕರಣ
20 ಹೆಚ್.ಪಿ ವರೆಗೆ ಟ್ರ್ಯಾಕ್ಟರ್ ಖರೀದಿಗೆ ಸಾಮಾನ್ಯ ರೈತರಿಗೆ ಶೇ. 35 ರಂತೆ75 ಸಾವಿರ ರೂಪಾಯಿ ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ಮಹಿಳೆಯರಿಗೆ ಶೇ. 35 ರಂತೆ ಗರಿಷ್ಠ 1 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.
ಇದನ್ನೂ ಓದಿ Baragala parihara hana bidugade 2023-24 ನಿಮಗೆಷ್ಟು ಜಮೆ? ಚೆಕ್ ಮಾಡಿ
8 ಹೆಚ್.ಪಿ ಗಿಂತ ಕಡಿಮೆಯ ಇರುವ ಪವರ್ ಟಿಲ್ಲರ್ ಖರೀದಿಗೆ ಸಾಮಾನ್ಯ ರೈತರಿಗೆ ಶೇ. 40 ರಂತೆ ಗರಿಷ್ಠ 40 ಸಾವಿರ ರೂಪಾಯಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ಮಹಿಳೆಯರಿಗೆ 50 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.
ಸಮಗ್ರ ಕೊಯ್ಲೋತ್ತರ ನಿರ್ವಹಣೆ
ಪ್ಯಾಕ್ ಹೌಸ್ ನಿರ್ಮಾಣಕ್ಕೆ 162 ಘನ ಮೀಟಲ್ ಅಳತೆಯ 9ಮಿ. 6 ಮಿ. 4ಮೀ ಪ್ಯಾಕ್ ಹೌಸ್ ನ ಘಟಕ ವೆಚ್ಚ 4 ಲಕ್ಷ ರೂಪಾಯಿಗಳಾಗಿದ್ದು 2 ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು.
ಶೀತಲ ವಾಹನ ಖರೀದಿಗೆ ಸಬ್ಸಿಡಿ
ಶೀತಲ ವಾಹನ ಖರೀದಿಗೆ ಶೇ. 35 ರಂತೆ ರಂತೆ 9 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.
ಎರೆಹುಳ ಘಟಕಕ್ಕೆ ಸಹಾಯಧನ (Vermicompost unit)
ಕೇಂದ್ರ ಸರ್ಕಾರದ ಎಮ್.ಐ.ಡಿ.ಹೆಚ್ ಮಾರ್ಗಸೂಚಿ ಪ್ರಕಾರ 15 ಮೀ. ಉದ್ದ 0.9 ಮೀಟರ್ ಅಗಲ ಮತ್ತು 24 ಮೀಟ ಆಳದ ಎರೆಹುಳ ಘಟಕ ನಿರ್ಮಾಣದ ವೆಚ್ಚಕ್ಕೆ ಶೇ. 50 ರಂತೆ ಗರಿಷ್ಠ 15 ಸಾವಿರ ರೂಪಾಯಿ ಪ್ರತಿ ಘಟಕಕ್ಕೆ ಸಹಾಯಧನ ನೀಡಲಾಗುವುದು.
ತಾಳೆ ತೋಟದಲ್ಲಿ ಅಂತರ ಬೆಳೆ ಬೇಸಾಯಕ್ಕೆ ಸಹಾಯಧನ
ರೈತರು ಕನಿಷ್ಟ ಒಂದು ಎಕರೆ ಪ್ರದೇಶದಲ್ಲಿ (ಕನಿಷ್ಟ 57 ತಾಳೆ ಮರಗಳು) ತಾಳೆ ಸಸಿಗಳನ್ನು ನಾಟಿ ಮಾಡಿರಬೇಕು.ಹಾಗೂ ಪ್ರತಿ ವರ್ಷಕ್ಕೆ ಪ್ರತಿ ಹೆಕ್ಟೇರ್ ಪ್ರದೇಶದ ತಾಳೆ ಬೆಳೆ ತಾಕಿನಲ್ಲಿ ಅಂತರ ಬೆಳೆ ಬೇಸಾಯಕ್ಕಾಗಿ 5250 ರೂಪಾಯಿಯಂತೆ ಮೊದಲ ನಾಲ್ಕು ವರ್ಷಗಳಿಗೆ 21 ಸಾವಿರ ರೂಪಾಯಿ ಪ್ರತಿ ಹೆಕ್ಟೇರ್ ನಂತೆ ಸಹಾಯಧನ ನೀಡಲಾಗುವುದು.
ಕೃಷಿ ಸಿಂಚಾಯಿ ಯೋಜನೆ (Krishi sinchayi scheme)
ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಲು ಸಾಮಾನ್ಯ ರೈತರಿಗಂ ಶೇ. 75 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಂತೆ ಗರಿಷ್ಠ 2 ಹೆಕ್ಟೇರ್ ಪ್ರದೇಶದವರಿಗೆ ಹಾಗೂ 2 ಹೆಕ್ಟೇರ್ ಮೇಲ್ಪಟ್ಟ ಎಲ್ಲಾ ವರ್ಗದ ರೈತರಿಗೆ (ಶೇ. 45 ರಷ್ಟು ಬಹುವಾರ್ಷಿಕ ಬೆಳೆಗಳಿಗೆ) ಸಹಾಯಧನ ನೀಡಲಾಗುವುದು. ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆಯ ಮೇರೆಗೆ ಸಹಾಯಧನ ವಿತರಿಸಲಾಗುವುದು.
ಕಡಿಮೆ ವೆಚ್ಚದ ಈರುಳ್ಳಿ ಶೇಖರಣ ಘಟಕ
25 ಮೆ. ಟನ್ ಈರುಳ್ಳಿ ಶೇಖರಣಾ ಘಟಕ ನಿರ್ಮಾಣಕ್ಕೆ ಕನಿಷ್ಠ 25 ಮೆಟ್ರಿಕ್ ಟನ್ ಶೇಖರಣ ಸಾಮರ್ಥ್ಯವಿರುವ ಘಟಕ್ಕೆ1.75 ಲಕ್ಷ ರೂಪಾಯಿಗಳವರೆಗೆ ಯೋಜನಾ ಪ್ರಸ್ತಾವನೆ ವೆಚ್ಚವು ಇದ್ದು, ಇದರಲ್ಲಿ ಶೇ. 50 ರಂತೆ ಗರಿಷ್ಠ 85 ಸಾವಿರ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು.
ಕೃಷಿ ಯಾಂತ್ರೀಕರಣ ಉಪ ಅಭಿಯಾನ (ಎಸ್.ಎಮ್.ಎ.ಎಮ್)ಯೋಜನೆ
ಎಸ್.ಎಮ್.ಎ.ಎಮ್ ಯೋಜನೆಯಡಿಯಲ್ಲಿ ಕೃಷಿ ಯಂತ್ರೋಪಕರಣ ಖರೀದಿಗೂ ಸಹಾಯಧನ ನೀಡಲಾಗುವುದು. ಹೌದು ಗರಿಷ್ಠ 1.25 ಲಕ್ಷರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ಮಹಿಳಾ ರೈತರಿಗೆಮತ್ತು ಶೇ. 50 ರಷ್ಟ ಸಬ್ಸಿಡಿ ನೀಡಲಾಗುವುದು. ಸಾಮಾನ್ಯ ಮತ್ತು ಇತರೆ ವರ್ಗದ ರೈತರಿಗೆ ಶೇ. 40 ರಷ್ಟು ಸಬ್ಸಿಡಿ ನೀಡಲಾಗುವುದು.
ಸೂಕ್ಷ್ಮ ಹನಿ ನೀರಾವರಿ ಅಳವಡಿಕೆಗೆ ಅರ್ಜಿ ಆಹ್ವಾನ
Totagarike ilakheyinda siguva subsidigala ಮಾಹಿತಿ. 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ, ಸೂಕ್ಷ್ಮ ಹನಿ ನೀರಾವರಿಯೋಜನ ಅನುಷ್ಠಾನಗೊಳಿಸುತ್ತಿದ್ದು, ಸದರಿ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗುವುದು.
ಇದನ್ನೂ ಓದಿ : Crop Insurance Status 2023-24 ಮೊಬೈಲ್ ನಲ್ಲೇ ಚೆಕ್ ಮಾಡಿ
ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಹಾಗೂ ಇತರೆ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು.
ನೀರಾವರಿ ಸೌಲಭ್ಯ ಹೊಂದಿರುವ ಆಸಕ್ತ ರೈತರು ಕೂಡಲೇ ಅಗತ್ಯ ದಾಖಲೆಗಳೊಂದಿಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಯಲ್ಲಿ ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುಬಹುದು.
Totagarike ilakheyinda siguva subsidigala ಮಾಹಿತಿ: ಕೃಷಿ ಪಂಪ್ ಸೆಟ್ ಗೆ ಒಂದೂವರೆ ಲಕ್ಷ ರೂಪಾಯಿ ಸಬ್ಸಿಡಿ
ಪ್ರಸಕ್ತ ಸಾಲಿನ 2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್ ಗಳಿಗೆ ಸಹಾಯಧನ ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸುವಾಗ ರೈತರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ಇಲ್ಲಿ ಸಂಪರ್ಕಿಸಿ.
Totagarike ilakheyinda siguva subsidigala ಕುರಿತು ಮೇಲೆ ನೀಡಲಾದ ಕೃಷಿ ಯಂತ್ರೋಪಕರಣಗಳು ಹಾಗೂ ಸೌಲಭ್ಯಗಳನ್ನುತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನಿಸುವಾಗ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ತೋಟಗಾರಿಕೆ ಇಲಾಖೆ ಅಥವಾ ಕೃಷಿ ಇಲಾಖೆಗೆ ಸಂಪರ್ಕಿಸಬಹುದು.
Totagarike ilakheyinda siguva subsidigala ಲ್ಲಿ ಯಂತ್ರೋಪಕರಣಗಳ ಖರೀದಿಗೆ ಬೇಕಾಗುವ ದಾಖಲೆಗಳು
ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಆರ್.ಡಿ ಸಂಖ್ಯೆ ಹೊಂದಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಬ್ಯಾಂಕ್ ಪಾಸ್ ಬುಕ್ ಹೊಂದಿರಬೇಕು. ಮೊಬೈಲ್ ನಂಬರ್ ಇರಬೇಕು. ಜಮೀನಿಗೆ ಸಂಬಂಧಿಸಿ ಪಹಣಿ ಇರಬೇಕು. ಫ್ರೂಟ್ಸ್ ಐಡಿ ಹೊಂದಿರಬೇಕು.