Two thousand rupees credited to farmers account : ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 17.61 ಲಕ್ಷ ಫಲಾನುಭವಿಗಳಿಗೆ 2,021.17 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
ಯೂಟೂಬ್ ಚಾನೆಲ್ ಗೆ ಇಲ್ಲೇ ಸಬಸ್ಕ್ರೈಬ್ ಮಾಡಿ
Two thousand rupees credited to farmers account ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 22.97 ಲಕ್ಷ ರೈತ ಪ್ರಸ್ತಾವನೆಗಳು 17.60 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೋಂದಣಿ ಆಗಿದೆ.
2024-25ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಈವರೆಗೆ 25148 ರೈತ ಪ್ರಸ್ತಾವನೆಗಳು 31690.28 ಹೆಕ್ಟೇರ್ ಪ್ರದೇಶಕ್ಕೆ ನೋಂದಣಿ ಆಗಿದ್ದು, ಕಾರ್ಯ ಪ್ರಗತಿಯಲ್ಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
Two thousand rupees credited to farmers account ಸಿರಿಧಾನ್ಯ ಹಬ್ ಸ್ಥಾಪನೆ
ಹೆಬ್ಬಾಳದಲ್ಲಿ 20 ಕೋಟಿ ರೂಪಾಯಿ ವೆಚ್ಚದಲ್ಲಿ ಸಿರಿಧಾನ್ಯ ಹಬ್ ಸ್ಥಾಪಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
2023-24ನೇ ಸಾಲಿನಲ್ಲಿ 3.06 ಲಕ್ಷ ರೈತರಿಗೆ 3.12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ಅಥವಾ ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 627.10 ಕೋಟಿ ರೂಪಾಯಿ ಸಹಾಯಧನ ನೀಡಲಾಗಿದೆ.
ಇದನ್ನೂ ಓದಿ Mungaru belehani parihara ಮುಂಗಾರು ಬೆಳೆ ಹಾನಿ ಪರಿಹಾರ ಈ ರೈತರಿಗೆ 3 ದಿನದಲ್ಲಿ ಜಮೆ
2024-25ನೇ ಸಾಲಿನಲ್ಲಿ 100 ಹೈಟೆಕ್ ಹಾರ್ವೆಸ್ಟರ್ ಹಬ್ ಗಳ್ನು 45 ಕೋಟಿ ರೂಪಾಯಿ ಅನುದಾನದಲ್ಲಿ ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಹೇಳಿದರು.
Two thousand rupees credited to farmers account ನಿಮಗೆಷ್ಟು ಬೆಳೆ ವಿಮೆ ಹಣ ಜಮೆಯಾಗಿದೆ?
ಬೆಳೆ ವಿಮೆ ಹಣ ನಿಮ್ಮ ಖಾತೆ ಗೆ ಜಮೆಯಾಗಿದೆಯೋ ಇಲ್ಲವೋ ಹಾಗೂ ಎಷ್ಟು ವಿಮೆ ಹಣ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://samrakshane.karnataka.gov.in/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. . ಆಗ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿನೀವು 2023-24 ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂಗಾರು ಹಂಗಾಮಿಗೆ ಪರಿಹಾರ ಚೆಕ್ ಮಾಡಬೇಕಾದರೆ ಖಾರೀಪ್ ಆಯ್ಕೆಮಾಡಿಕೊಳ್ಳಬೇಕು. ಹಿಂಗಾರು ಹಂಗಾಮಿನ ಬೆಳೆ ಪರಿಹಾರ ಚೆಕ್ ಮಾಡಬೇಕಾದರೆ ನೀವು ರಾಬಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮುಂದೆ/Go ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. Farmers ಕಾಲಂ ಕೆಳಗಡೆ ಕಾಣುವ Check Status ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಪೇಜ್ ನಲ್ಲಿ ಮೊಬೈಲ್ ನಂಬರ್ ಬಾಕ್ಸ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಮೊಬೈಲ್ ನಂಬರ್ ನಮೂದಿಸಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Search ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಬೆಳೆ ವಿಮೆ ಹಣ ಜಮೆಯಾಗಿರುವ ಮಾಹಿತಿ ಕಾಣಿಸುತ್ತದೆ
Two thousand rupees credited to farmers account ಬೆಳೆ ಹಾನಿ ಪರಿಹಾರ ಹಣ ಜಮೆಯಾಗಲು ನಿಮ್ಮ ಹೆಸರಿಗೆ ಎಫ್ಐಡಿ ಇರುವುದು ಕಡ್ಡಾಯ
ರೈತರಿಗೆ ಬೆಳೆ ಹಾನಿ ಪರಿಹಾರ ಜಮೆಯಾಗಬೇಕಾದರೆ ಅವರ ಹೆಸರಿನಲ್ಲಿ ಫ್ರೂಟ್ಸ್ ಐಡಿ ಇರುವುದು ಕಡ್ಡಾಯವಾಗಿದೆ. ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಅವರ ಹೆಸರಿಗೆ ಎಫ್ಐಡಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ
https://fruitspmk.karnataka.gov.in/MISReport/GetDetailsByAadhaar.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಫಾರ್ಮರ್ಸ್ ಡಿಟೇಲ್ ಕೆಳಗಡೆ ನಿಮ್ಮ ಆಧಾರ್ ನಂಬರ್ ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಹೆಸರಿಗೆ ಫ್ರೂಟ್ಸ್ ಐಡಿ ಆಗಿದ್ದರೆ ನಿಮ್ಮ ಹೆಸರು, ಫ್ರೂಟ್ಸ್ ಐಡಿ ನಂಬರ್ ಕಾಣಿಸುತ್ತದೆ.ಈ ಫ್ರೂಟ್ಸ್ ಐಡಿ ನಂಬರ್ ಸಹಾಯದಿಂದ ನೀವು ಸರ್ಕಾರಿ ಯೋಜನೆಗಳ ಮೂಲಕ ವಿವಿಧ ಸೌಲಭ್ಯಗಳನ್ನು ಪಡೆಯಬಹುದು.
ನಿಮ್ಮ ಹೆಸರಿಗೆ ಎಫ್ಐಡಿ ಇಲ್ಲದಿದ್ದರೆ ನೀವು ಎಲ್ಲಾಅರ್ಹತೆ ಪಡೆದಿದ್ದರೂ ಸಹ ನಿಮಗೆ ಪಹಿರಾ ಹಣ ಜಮೆಯಾಗುವುದಿಲ್ಲ.ಹಾಗಾಗಿ ಯಾರು ಯಾರು ಎಫ್ಐಡಿ ಮಾಡಿಸಿಲ್ಲವೋ ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಫ್ಐಡಿ ಮಾಡಿಕೊಳ್ಳಬಹುದು.