Village Land map : ರೈತರು ಈಗ ತಮ್ಮೂರಿನ ಎಲ್ಲಾ ರೈತರ ಜಮೀನುಗಳ ಮ್ಯಾಪ್ ನ್ನು ಕೇವಲ ಒಂದೇ ನಿಮಿಷದಲ್ಲಿ ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬಹುದು.
ಹೌದು, ಈ ಮ್ಯಾಪ್ ನಲ್ಲಿ ರೈತರು ತಮ್ಮ ಜಮೀನುಗಳ ಸುತ್ತಮುತ್ತಲಿನ ರೈತರ ಮ್ಯಾಪ್ ನೊಂದಿಗೆ ತಮ್ಮೂರಿನಲ್ಲಿರುವ ಎಲ್ಲಾರೈತರ ಜಮೀನುಗಳ ಮೂಲಕ ಹೋಗುವ ಕಾಲುದಾರಿ, ಬಂಡಿದಾರಿ, ಹಳ್ಳಕೊಳ್ಳಗಳ ಹರಿಯುವ ಮಾರ್ಗ, ಅಕ್ಕಪಕ್ಕದ ಊರುಗಳಿಗೆ ಸಂಪರ್ಕಿಸುವ ರಸ್ತೆಗಳ ಮಾಹಿತಿ ಸಿಗುತ್ತದೆ. ಹಾಗಾದರೆ ಇಲ್ಲಿದೆ ನೋಡಿ ಜಮೀನುಗಳ ಮ್ಯಾಪ್ ನ ಮಾಹಿತಿ.
Village Land map ರೈತರು ಊರಿನ ಮ್ಯಾಪ್ ನಲ್ಲಿ ಏನೇನು ಮಾಹಿತಿ ಪಡೆಯಬಹುದು?
ರೈತರು ಡೌನ್ಲೋಡ್ ಮಾಡುವ ಮ್ಯಾಪ್ ನಲ್ಲಿ ತಮ್ಮ ಅಕ್ಕಪಕ್ಕದ ಜಮೀನು, ಹಳ್ಳಕೊಳ್ಳ, ಗುಡ್ಡಬೆಟ್ಟ, ಕಾಲದಾರಿ, ಬಂಡಿದಾರಿ, ಅಕ್ಕಪಕ್ಕದ ಊರುಗಳಿಗೆ ಹೋಗುವ ದಾರಿ, ಹಳ್ಳಕೊಳ್ಳಗಳು ಯಾವ ದಿಕ್ಕಿನಿಂದ ಯಾವ ದಿಕ್ಕಿನೆಡೆಗೆ ಹರಿದು ಹೋಗುತ್ತಿದೆ? ಹಳೇ ಕಾಲದ ಬಾವಿಗಳು, ನದಿಗಳು ಹರಿಯುವ ದಿಕ್ಕು, ಮರಗಳ ಮಾಹಿತಿ ಸಿಗುತ್ತವೆ.
Village Land map ರೈತರು ಮೊಬೈಲ್ ನಲ್ಲಿ ಜಮೀನುಗಳ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ?
ರೈತರು ತಮ್ಮೂರಿನ ಮ್ಯಾಪ್ ನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಲು ಈ
https://www.landrecords.karnataka.gov.in/service3/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯು ಸಿದ್ದಪಡಿಸಿದ ಕರ್ನಾಟಕದ ಎಲ್ಲಾ ಗ್ರಾಮಗಳ ಮ್ಯಾಪ್ ನ್ನು ಡೌನ್ಲೋಡ್ ಮಾಡಿಕೊಳ್ಳುವ ಪೇಜ್ ಕಾಣಿಸುತ್ತದೆ. ಅಲ್ಲಿನೀವು ಯಾವ ಜಿಲ್ಲೆಗೆ ಸೇರಿದ್ದೀರೋ ಆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಆಯ್ಕೆಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಊರಿನ ಮುಂದೆ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಒಂದು ವೇಳೆ ನಿಮಗೆ ಮ್ಯಾಪ್ ಓಪನ್ ಆಗದಿದ್ದರೆ ಅಲ್ಲಿ ನಿಮಗೆ Pop up blocked ಮೆಸೆಜ್ ಕಾಣಿಸುತ್ತದೆ. ಅಲ್ಲಿ ನೀವು Always allow pop up block ಆಯ್ಕೆ ಮಾಡಿಕೊಂಡು ನಂತರ Done ಮೇಲೆ ಕ್ಲಿಕ್ ಮಾಡಬೇಕು. ನಂತರ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಊರಿನ ಮ್ಯಾಪ್ ತೆರೆದುಕೊಳ್ಳುತ್ತದೆ..
Village Land map ರೈತರು ಡೌನ್ಲೋಡ್ ಮಾಡುವ ನಕ್ಷೆಯಲ್ಲಿ ಏನೇನು ಮಾಹಿತಿ ಇರುತ್ತದೆ ಅದನ್ನು ಹೇಗೆ ಗುರುತಿಸಬೇಕು?
ನೀವು ಓಪನ್ ಮಾಡಿದ ಗ್ರಾಮ ನಕ್ಷೆಯಲ್ಲಿ ಮೊದಲು ಗ್ರಾಮ ಗಡಿ ರೇಖೆ ಕಾಣುಸುತ್ತದೆ. ಸರ್ವೆ ನಂಬರ್ ಗಡಿಗಳು ಕಾಣಿಸುತ್ತವೆ. ಹಿಸ್ಸಾ ನಂಬರ್ ಹಾಗೂ ಸರ್ವೆ ನಂಬರ್ ಗಳ ಮಾಹಿತಿ ಇರುತ್ತದೆ. ಕಾಲುದಾರಿ ಬಂಡಿದಾರಿ ಮತ್ತು ಡಾಂಬಾರು ರಸ್ತೆ ಗಳ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮೂರಿನ ಸುತ್ತಮುತ್ತಲಿರುವ ಹಳ್ಳಕೊಳ್ಳಗಳು, ಬೆಟ್ಟ ಗುಡ್ಡಗಳ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮೂರಿನ ಸುತ್ತಮುತ್ತಲಿನಲ್ಲಿ ಕೆರೆಗಳಿದ್ದರೆ ಕೆರೆ ಯಾವ ಮೂಲೆಯಲ್ಲಿದೆ ಎಂಬುದು ಸಹ ಕಾಣಿಸುತ್ತದೆ.
ಇದನ್ನೂ ಓದಿ : Crop insurance calculates here ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಹಣ ಜಮೆ? ಹೀಗೆ ಚೆಕ್ ಮಾಡಿ 2024
ಇದರೊಂದಿಗೆ ಕೆರೆ ಅಥವಾ ಹಳ್ಳ ಅಥವಾ ನದಿ ಇದ್ದರೆ ಅದು ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹರಿಯುತ್ತಿದೆ ಎಂಬ ಮಾಹಿತಿಯನ್ನು ಮಾರ್ಕ್ ಮಾಡಲಾಗಿರುತ್ತದೆ.
Village Land map ರೈತರು ತಮ್ಮೂರಿನ ಸುತ್ತಮುತ್ತಲಿನ ಮಾಹಿತಿ ಚೆಕ್ ಮಾಡುವುದು ಹೇಗೆ?
ನಿಮ್ಮೂರಿನ ಸುತ್ತಮುತ್ತಲಿರುವ ಸರ್ವೆ ನಂಬರಗಳು, ಬೆಟ್ಟಗುಡ್ಡ, ಹಳ್ಳಕೊಳ್ಳಗಳು, ನದಿ, ನಿಮ್ಮೂರಿನ ಸುತ್ತಮುತ್ತಲಿರುವ ರಸ್ತೆಗಳು, ಬಂಡಿದಾರಿ, ಕಾಲುದಾರಿಗಳ ಮಾಹಿತಿಯನ್ನು ಗುರುತಿಸಲು ಮ್ಯಾಪ್ ಎಡಗಡೆ ಗುರುತು ಮಾಡಲಾಗಿರುತ್ತದೆ. ಆ ಆಧಾರದ ಮೇಲೆ ರೈತರು ಪತ್ತೆ ಹಚ್ಚಬಹುದು. ಇದು ರೈತರಿಗೆ ತುಂಬಾ ಉಪಯುಕ್ತವಾದ ಮ್ಯಾಪ್ ಆಗಿರುತ್ತದೆ. ಇದನ್ನು ರೈತರು ತಮಗೆ ಬೇಕಾದ ಗಾತ್ರದಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು. ಆಗಾಗ ನಿಮ್ಮ ಜಮೀನಿನ ಸುತ್ತಮುತ್ತಲಿರುವ ಜಮೀನುಗಳ ಸರ್ವೆ ನಂಬರ್ ಗಳನ್ನು ಚೆಕ್ ಮಾಡಿಕೊಳ್ಳಬಹುದು.