Voter list released ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಓಟ್ ಹಾಕುವ ಹಕ್ಕಿದೆ 2024

Written by Admin

Published on:

Spread the love

Voter list released : ಲೋಕಸಭಾ ಚುನಾವಣೆ ಈಗಾಗಲೇ ಘೋಷಣೆಯಾಗಿದ್ದರಿಂದ ವೋಟರ್ ಲಿಸ್ಟ್ ನಲ್ಲಿ ಯಾರ ಯಾರ ಹೆಸರಿದೆ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ವೋಟರ್ ಲಿಸ್ಟ್ ನಲ್ಲಿ ಹೆಸರಿರಬೇಕು. ನಿಮ್ಮ ಹೆಸರು ವೋಟರ್ ಲಿಸ್ಟ್ ನಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಈಗ ಕೇವಲ ಒಂದೇ ನಿಮಿಷದಲ್ಲಿ ಚೆಕ್ ಮಾಡಬಹುದು. 18 ವಯೋಮಾನಕ್ಕಿಂತ ಹೆಚ್ಚಿನವರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

voter list released

Voter list released  ವೋಟರ್ ಲಿಸ್ಟ್ ನಲ್ಲೇ ಏನೇನು ಮಾಹಿತಿ ಸಿಗಲಿದೆ?

ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದವರು ತಮ್ಮಹೆಸರು ಪಟ್ಟಿಯಲ್ಲಿ ಸೇರಿಸಲಾಗಿದೆಯೇ? ಹೆಸರು ಸರಿಯಾಗಿದೆಯೇ? ಮತ್ತು ಚುನಾವಣೆಯಲ್ಲಿ ಮತದಾನ ಎಲ್ಲಿ ಸಲ್ಲಿಸಲು ಅವಕಾಶವಿದೆ ಎಂಬುದನ್ನುಸಹ ಚೆಕ್ ಮಾಡಬಹುದು. ಹೊಸದಾಗಿ ಅರ್ಜಿ ಸಲ್ಲಿಸಿದವರು ತಮ್ಮ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿದೆಯೋ ಇಲ್ಲವೋ ಎಂಬುದನ್ನು ನಲ್ಲಿ ಚೆಕ್ ಮಾಡಬಹುದು.

ಚುನಾವಣಾ ಆಯೋಗ ಈಗಾಗಲೇ ಮತದಾರರ ಪಟ್ಟಿಯನ್ನು ಸಿದ್ದಪಡಿಸಿದೆ. ಇದರೊಂದಿಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸೇಪರ್ಡೆ ಮಾಡಲು ಇನ್ನೂ ಕಾಲವಕಾಶವಿದೆ. 18 ವರ್ಷ ಮೇಲ್ಪಟ್ಟ ಎಲ್ಲರೂ ಮತದಾನ ಮಾಡಲು ಅರ್ಹರಾಗಿರುವುದರಿಂದ ಹೊಸದಾಗಿ ಅರ್ಜಿ ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು.

ಈಗಾಗಲೇ ಅರ್ಜಿ ಸಲ್ಲಿಸಿದ್ದರೆ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಪರಿಶೀಲಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Voter list released  ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು

https://electoralsearch.eci.gov.in/        

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ಮತದಾರರ ಪಟ್ಟಿಯಲ್ಲಿ ಹೆಸರು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮ ಹೆಸರು, ತಂದೆಯ/ಪತಿಯ ಹೆಸರು ಬರೆಯಬೇಕು.  ನಿಮ್ಮ ವಯಸ್ಸು ಸೆಲೆಕ್ಟ್ ಮಾಡಿಕೊಳ್ಳಬೇಕು.

ಲಿಂಗ, ರಾಜ್ಯ, ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು.  ನಂತರ ಅಲ್ಲಿಕಾಣುವ ಕ್ಯಾಪ್ಚ್ಯಾ ಕೋಡ್ ಆಯ್ಕ ಮಾಡಿ ಸರ್ಚ್  ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ.  ಅಲ್ಲಿ ನಿಮ್ಮ ಹೆಸರು ವಯಸ್ಸು, ತಂದೆಯ ಹೆಸರು ಕಾಣಿಸುತ್ತದೆ.

ಇದನ್ನೂ ಓದಿ : Land map ನಿಮ್ಮಜಮೀನಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ 2024

ವೀವ್ ಡಿಟೇಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮ್ಮ ಅಸೆಂಬ್ಲಿ ಕ್ಷೇತ್ರದ ಸಂಖ್ಯೆ, ಜಿಲ್ಲೆ. ನಿಮ್ಮ ಹೆಸರು, ತಂದೆಯ ಹೆಸರು, ಕಾಣಿಸುತ್ತದೆ. ಅದರ ಕೆಳಗಡೆ ಮತದಾರರ ಸಿರಿಯಲ್ ನಂಬರ್ ಸಹ ಕಾಣಿಸುತ್ತದೆ.

voter list

ಚುನಾವಣೆಯಲ್ಲಿ ಸಾರ್ವಜನಿಕರು ಆಮಿಷಕ್ಕೊಳಗಾಗಬಾರದು. ತಮ್ಮ ಮತವನ್ನು ಹಣಕ್ಕೆ ಮಾರಾಟ ಮಾಡಬಾರದು.  ಮತ ನೀವು ಯಾರಿಗೆ ಬೇಕಾದರೂ ಚಲಾಯಿಸಬಹುದು. ನಿಮಗೆ ಯಾರು ಸೂಕ್ತ ಅಭ್ಯರ್ಥಿ ಎನಿಸುತ್ತಾರೋ ಅಂತಹ ಅಭ್ಯರ್ಥಿಗಳೆ ಮತ ಹಾಕಬೇಕು.  ಇದರಿಂದಾಗಿ ದೇಶಕ್ಕೆ ಉತ್ತಮ ಪ್ರತಿನಿಧಿಯನ್ನುಆಯ್ಕೆ ಮಾಡಬೇಕು. ಏಕೆಂದರೆ ನೀವು 500 ರಿಂದ 1000 ರೂಪಾಯಿಗೆ ನಿಮ್ಮ ಓಟು ಮಾರಾಟ ಮಾಡಿಕೊಳ್ಳಬಾರದು. ನಿಮಗೆ ಸೂಕ್ತ ಅಭ್ಯರ್ಥಿ ಯಾರೂ ಇಲ್ಲವೆನಿಸಿದರೆ ಮತವನ್ನು ಸೂಕ್ತವಿಲ್ಲದ ಅಭ್ಯರ್ಥಿಗೆ ಮತ ಚಲಾಯಿಸಬಹುದು.ಹಾಗಾಗಿ ನೀವು ಮತ ಚಲಾಯಿಸುವ ಮುನ್ನು ವಿಚಾರಿಸಿ ಸೂಕ್ತಅಭ್ಯರ್ಥಿಗೆ ಆಯ್ಕೆ ಮಾಡಬೇಕು. ಆದರೆ ನಿಮ್ಮ ಓಟು ಅಮೂಲ್ಯವಾಗಿರುವುದರಿಂದ ನಿಮ್ಮ ಜಿಲ್ಲೆಯಲ್ಲಿ ಯಾವ ದಿನ ಮತದಾನ ಇರುತ್ತದೆಯೋ ಆ ದಿನ ನೀವು ಮತ ಚಲಾಯಿಸುವುದನ್ನು ಮರೆಯಬಾರದು.

1 thought on “Voter list released ಈ ಪಟ್ಟಿಯಲ್ಲಿರುವವರಿಗೆ ಮಾತ್ರ ಓಟ್ ಹಾಕುವ ಹಕ್ಕಿದೆ 2024”

Leave a Comment