Why pm kisan not credited : ಪಿಎಂ ಕಿಸಾನ್ ಹಣ ಜಮೆಯಾಗಲು ರೈತರೇನು ಮಾಡಬೇಕು? ಪಿಎಂ ಕಿಸಾನ್ ಯೋಜನೆಯ 18ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ? ಯಾರು ಯಾರಿಗೆ ಬಿಡುಗಡೆಯಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ನಿಮಗೆಲ್ಲಾ ಗೊತ್ತಿದ್ದ ಹಾಗೆ ಈಗ ಪಿಎಂ ಕಿಸಾನ್ ಯೋಜನೆಯ ಹಣ ಈಗ ಕೆಲವು ರೈತರಿಗೆ ಜಮೆಯಾಗುತ್ತಿದ್ದರೆ ಕೆಲವು ರೈತರಿಗೆ ಜಮೆಯಾಗುತ್ತಿಲ್ಲ. ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲ? ಪಿಎಂ ಕಿಸಾನ್ ಹಣ ಜಮೆಯಾಗುತ್ತಿರುವುದು ನಿಂತುಹೊಗಿದ್ದರೆ ರೈತರೇನು ಮಾಡಬೇಕು ಎಂಬುದರ ಕುುರಿತು ಮಾಹಿತಿಯೂ ಇಲ್ಲಿದೆ.
Why pm kisan not credited: ನಿಮಗೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ನಿಂತುಹೋಗಿದೆ? ಇಲ್ಲಿ ಚೆಕ್ ಮಾಡಿ
ಪಿಎಂ ಕಿಸಾನ್ ಯೋಜನೆಯ ಹಣ ನಿಮಗೆ ಯಾವ ಕಾರಣಕ್ಕಾಗಿ ಜಮೆ ಮಾಡುವುದನ್ನು ನಿಲ್ಲಿಸಲಾಗಿದೆ ಎಂಬುದನ್ನು ಚೆಕ್ ಮಾಡಲು ಈ
https://pmkisan.gov.in/BeneficiaryStatus_New.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Know your status pm kisan ಕೆಳಗಡೆ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ನಮೂದಿಸಬೇಕು.ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿಯನ್ನು ನಮೂದಿಸಿ ನೀವು ನಿಮಗೆ ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ಜಮೆಯಾಗಿಲ್ಲ ಎಂಬುದನ್ನು ಚೆಕ್ ಮಾಡಬಹುದು.
Why pm kisan not credited ನಿಮಗೆ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ ಏನು ಮಾಡಬೇಕು?
ನಿಮಗೆ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ಗೊತ್ತಿಲ್ಲದಿದ್ದರೆ ಅಲ್ಲಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಬೇಕು.ನಂತರ ನಿಮ್ಮ ಹೆಸರು ಹಾಗೂ ನೋಂದಣಿಸಂಖ್ಯೆ ಕಾಣಿಸುತ್ತದೆ. ನೋಂದಣಿ ಸಂಖ್ಯೆ ಕಾಪಿ ಮಾಡಿಕೊಂಡು ಬ್ಯಾಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ನೋಂದಣಿ ಸಂಖ್ಯೆ ನಮೂದಿಸಿ ಆಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಿಟೇಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ತಂದೆಯ ಹೆಸರು, ನಿಮ್ಮ ಊರು, ಮೊಬೈಲ್ ನಂಬರ್ ಕಾಣಿಸುತ್ತದೆ.
Why pm kisan not credited ಪಿಎಂ ಕಿಸಾನ್ ಸ್ಟೇಟಸ್ ನಲ್ಲಿರಲೇಬೇಕಾದ ಮಾಹಿತಿ
ಎಫ್.ಟಿ.ಓ ಪ್ರೊಸೆಸಡ್ ಯಸ್ ಇರಬೇಕು. ಅದರ ಕೆಳಗಡೆನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ. ಯಾವ ಬ್ಯಾಂಕಿನಲ್ಲಿ ಹಣ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಇದನ್ನೂ ಓದಿ : Land Tippani ನಿಮ್ಮ ಜಮೀನಿನ ಹಳೆಯ ಟಿಪ್ಪಣಿ ಮೊಬೈಲ್ ನಲ್ಲಿ ಹೀಗೆ ಡೌನ್ಲೋಡ್ ಮಾಡಿ 2024
ನಿಮಗೆ ಕೊನೆಯ ಕಂತು ಯಾವಾಗ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
Reason of ineligibility
Reason of ineligibility ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಯಾವ ಕಾರಣಕ್ಕಾಗಿ ಹಣ ಜಮೆಯಾಗುತ್ತಿಲ್ಲ ಎಂಬ ಮಾಹಿತಿ ಕಾಣಿಸುತ್ತದೆ.
Eligibility status
Eligibility status ಮೇಲೆ ಕ್ಲಿಕ್ ಮಾಡಬೇಕು. ಲ್ಯಾಂಡ್ ಸೀಡಿಂಗ್, ಇಕೆವೈಸಿ ಸ್ಟೇಟಸ್ ಯಸ್ ಇರಬೇಕು. ಲ್ಯಾಂಡ್ ಸೀಡಿಂಗ್ ಇಲ್ಲದಿದ್ದರೆ ಬ್ಯಾಂಕಿನಲ್ಲಿ ಆಧಾರ್ ಕಾರ್ಡ್ ನೀಡಿ ಸೀಡಿಂಗ್ ಮಾಡಿಸಿಕೊಳ್ಳಬೇಕು.
Why pm kisan not credited ಪಿಎಂ ಕಿಸಾನ್ ಹಣ ಯಾವಾಗ ಜಮೆಯಾಗಲಿದೆ?
ಪಿಎಂ ಕಿಸಾನ್ ಹಣ ನಿಮಗೆ ಗೊತ್ತಿದ್ದ ಹಾಗೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ ಜಮೆಯಾಗುತ್ತದೆ. ಜೂನ್ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮೆಯಾಗಿತ್ತು. ಈ ಆಧಾರದ ಮೇಲೆ ಪಿಎಂ ಕಿಸಾನ್ ಹಣ 18ನೇ ಕಂತಿನ ಹಣ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಜಮೆಯಾಗಲಿದೆ.