Yuvanidhi scheme benefit: ಯುವನಿಧಿ ಯೋಜನೆಯಡಿ 2023 ಮತ್ತು 2024 ರಲ್ಲಿ ಪದವಿ ಡಿಪ್ಲೋಮಾ ಉತ್ತೀರ್ಮರಾದ ಅರ್ಹ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮಾ ಪ್ರಮಾಣಪತ್ರಗಳ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
Yuvanidhi scheme benefit ಈ ಯೋಜನೆಯಡಿ ಪ್ರತಿ ತಿಂಗಳು ಪದವೀಧರರಿಗೆ 3000 ರೂಪಾಯಿ ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂಪಾಯಿಗಳ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತದೆ. ಪದವಿ ಡಿಪ್ಲೋಮಾ ನಂತರ ಕನಿಷ್ಠ 6 ತಿಂಗಳ ಅವಧಿಯವರೆಗೆ ಸರ್ಕಾರಿ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು ಉನ್ನತ ವಿಧ್ಯಾಭ್ಯಾಸ ಮುಂದುವರೆಸದೆ ಇರುವವರು, ಕರ್ನಾಟಕದಲ್ಲಿ ವಾಸವಿರುವ (ಕನಿಷ್ಠ 6ವರ್ಷಗಳವರೆಗೆ ಪದವಿ ಡಿಪ್ಲೋಮಾದವರೆಗೆ ಅಧ್ಯಯನ ಮಾಡಿದರು) ಈ ಯೋಜನೆಯ ಡಿ. ನೋಂದಣಿ ಮಾಡಿಕೊಳ್ಳಲು ಅರ್ಹರಾಗಿರುತ್ತಾರೆ.
Yuvanidhi scheme benefit ಈ ಸೌಲಭ್ಯವು ಎರಡು ವರ್ಷಗಳ ಅವಧಿಗೆ ಮಾತ್ರ ಅನ್ವಯಿಸುತ್ತದೆ. ಎರಡು ವರ್ಷಗಳ ಅವಧಿಯೊಳಗೆಉದ್ಯೋಗ ದೊರೆತಲ್ಲಿ ಫಲಾನುಭವಿಗೆ ಈ ಯೋಜನೆಯ ಸೌಲಭ್ಯವನ್ನು ಸ್ಥಗಿತಗೊಳಿಸಲಾಗುವುದು. ನಿರುದ್ಯೋಗ ಸ್ಥಿತಿಯ ಬಗ್ಗೆ ಸ್ವತಂತ್ರ ಪರಿಶೀಲನೆ ಇರಬೇಕು. ಉದ್ಯೋಗ ಪಡೆದ ನಂತರ ತಪ್ಪು ಘೋಷಣೆ ಅಥವಾ ಘೋಷಿಸಲು ವಿಫಲವಾದರೆ ದಂಡ ವಿಧಿಸಲಾಗುವುದು.
ಅರ್ಹ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ https://sevasindhugs.karnataka.gov.in/ ದಲ್ಲಿ ಆನ್ಲೈನ್ ಮೂಲಕ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು.
Yuvanidhi scheme benefit ಸ್ವಯಂ ಘೋಷಣೆ ಕಡ್ಡಾಯ
ಯುವನಿಧಿ ಯೋಜನೆಯಡಿ ನೋಂದಾಯಿಸಿಕೊಂಡ ಅನೇಕ ಅಭ್ಯರ್ಥಿಗಳು ಇಲ್ಲಿಯವರೆಗೆ ಸ್ವಯಂ ಘೋಷಣೆ ನೀಡದ ಕಾರಣ ಡಿಬಿಟಿಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಎಲ್ಲಾ ಅಭ್ಯರ್ಥಿಗಳು ಪ್ರತಿ ತಿಂಗಳು ದಿನಾಂಕ 1 ರಿಂದ 25 ರೊಳಗಾಗಿ ಸ್ವಯಂ ಘೋಷಣೆಯನ್ನು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲದಲ್ಲಿ ನೀಡಬೇಕು.ಒಂದು ವೇಳೆ ಸತತ ಮೂರು ತಿಂಗಳ ಕಾಲ ಸ್ವಯಂ ಘೋಷಣೆ ನೀಡದಿದ್ದರೆ, ಅಂತಹ ಅರ್ಜಿಗಳು ತಿರಸ್ಕೃತವಾಗುತ್ತದೆ. ಅಥವಾ ಡಿಬಿಟಿ ನಿಂತು ಹೋಗುತ್ತದೆ. ಆದ್ದರಿಂದ ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡುವುದು ಕಡ್ಡಾಯವಾಗಿರುತ್ತದೆ.
ಇನ್ನೇಕೆ ತಡ ಕೂಡಲೇ ನಿಮ್ಮ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಸೇವಾ ಸಿಂಧು ಪೋರ್ಟಲ್ ದಲ್ಲಿ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಲು ಕೋರಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿಕೊಳ್ಳುವುದು ಉತ್ತಮ. ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿದರೆ ಮಾತ್ರ ನಿಮಗೆ ಯುವನಿಧಿ ಯೋಜನೆಯ ಸೌಲಭ್ಯ ಸಿಗಲಿದೆ.
Yuvanidhi scheme benefit ಮ್ಯಾನುವಲ್ ವೆರಿಫಿಕೇಶನ್ ಪೆಂಡಿಂಗ್
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪದವಿ ಡಿಪ್ಲೋಮಾ ಉತ್ತೀರ್ಣರಾದ ಯುವನಿಧಿ ಯೋಜನೆಯಡಿ ಮ್ಯಾನುವಲ್ ವೆರಿಫಿಕೇಶನ್ ಪೆಂಡಿಂಗ್ ಪಟ್ಟಿಯಲ್ಲಿರುವ ಒಟ್ಟು1472 ಅಭ್ಯರ್ಥಿಗಳ ಪೈಕಿ ಇನ್ನು 258 ಅಭ್ಯರ್ಥಿಗಳು ಇದ್ದು, ಇವರಿಗೆ ಅನೇಕ ಬಾರಿ ದೂರವಾಣಿ, ಎಸ್.ಎಮ್.ಎಸ್. ಹಾಗೂ ಇ ಮೇಲೆ ಕೂಡ ಮಾಡಲಾಗಿದ್ದು, ಆದರೂ ಸಹ ವಿದ್ಯಾರ್ಥಿಗಳು ವೆರಿಫಿಕೇಶನ್ ಮಾಡಿಕೊಂಡಿರುವುದಿಲ್ಲ.
ಇದನ್ನೂ ಓದಿ Pm kisan new list ಈ ಪಟ್ಟಿಯಲ್ಲಿರುವ ರೈತರಿಗೆ ಮಾತ್ರ ಪಿಎಂ ಕಿಸಾನ್ ಹಣ ಜಮೆ 2024
ಅಂತಹ ಅಭ್ಯರ್ಥಿಗಳು ಆದಷ್ಟು ಬೇಗನೆ ತಮ್ಮ ದಾಖಲೆಗಳ ಜೊತೆಒಂದು ಸೆಟ್ ಝರಾಕ್ಸ್ ಪ್ರತಿ ತಂದು ವೆರಿಫಿಕೇಶನ್ ಮಾಡಿಕೊಳ್ಳಬೇಕೆಂದು ತಿಳಿಸಿದ್ದಾರೆ.
Yuvanidhi scheme benefit ಯೋಜನೆಗೆ ಅರ್ಹರಾಗದೆ ಇರುವವರು
ಉನ್ನತ ವ್ಯಾಸಂಗಕ್ಕೆ ದಾಖಲಾತಿ ಹೊಂದಿ ವಿಧ್ಯಾಭ್ಯಾಸ ಮುಂದುವರೆಸುವವರು. ಶಿಶಿಕ್ಷು ವೇತನವನ್ನು ಪಡೆಯುತ್ತಿರುವವರು. ಸರ್ಕಾರಿ ಖಾಸಗಿ ವಲಯದಲ್ಲಿಉದ್ಯೋಗ ಪಡೆದಿರುವವರು.ರಾಜ್ಯ ಮತ್ತು ಕೇಂದ್ರದ ವಿವಿಧ ಯೋಜನೆಯಡಿ ಹಾಗೂ ಬ್ಯಾಂಕ್ ಗಳಲ್ಲಿ ಸಾಲ ಪಡೆದು ಸ್ವಯಂ ಉದ್ಯೋಗ ಹೊಂದಿರುವವರು.