Good news to these farmers : ಕಳೆದ ಮುಂಗಾಗು ಹಂಗಾಮಿನಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ರಾಜ್ಯ ಸರ್ಕಾರ ದೊಡ್ಡ ರಿಲೀಫ್ ನೀಡಿದ್ದು, ನಿಗದಿತ ಪ್ರಮಾಣಕ್ಕಿಂತ ಪ್ರತಿ ಹೆಕ್ಟೇರಿಗೆ 8500 ರೂಪಾಯಿ ಹೆಚ್ಚುವರಿ ಇನ್ಪುಟ್ ಸಬ್ಸಿಡಿ ನೀಡುವ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿದೆ.
ಮುಂಗಾರಿನಲ್ಲಿ ರಾಜ್ಯದಲ್ಲಿ 12.82 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಈ ನಷ್ಟಕ್ಕೆ ಎನ್.ಡಿ.ಆರ್.ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯಿದೆ) ಮತ್ತು ಎಸ್.ಡಿ.ಆರ್.ಎಫ್ (ರಾಜ್ಯ ವಿಪತ್ತು ನಿರ್ವಹಣಾ ಕಾಯಿದೆ) ಮಾರ್ಗಸೂಚಿಗಿಂತ ಅಧಿಕ ಮೊತ್ತದ ಪರಿಹಾರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು.
ಎರಡು ಹೆಕ್ಟೇರಿಗೆ ಸೀಮಿತವಾಗಿ ಇನ್ಪುಟ್ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಮಳೆಯಾಶ್ರಿತ ಬೆಳೆಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿದ್ದ 8500 ರೂಪಾಯಿ ಬದಲಿಗೆ 17 ಸಾವಿರ ರೂಪಾಯಿ ಪರಿಹಾರವನ್ನು ನಿಗದಿ ಮಾಡಲಾಗಿದೆ. ನೀರಾವರಿ ಬೆಳೆಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿರುವ 17 ಸಾವಿರ ರೂಪಾಯಿ ಬದಲಿಗೆ 25 ಸಾವಿರ ರೂಪಾಯಿ ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರಿಗೆ ನಿಗದಿಯಾಗಿದ್ದ 22500 ರೂಪಾಯಿ ಬದಲಿಗೆ 31 ಸಾವಿರ ರೂಪಾಯಿ ಪರಿಹಾರ ವಿತರಣೆಗೆ ತೀರ್ಮಾನಿಸಲಾಗಿದೆ ಎಂದು ಸಭೆ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳೆ ಹಾನಿ ನಷ್ಟ ಪರಿಹಾರ ಎನ್.ಡಿ.ಆರ್.ಎಫ್ ಮಾನದಂಡ ಹೆಚ್ಚ ಮಾಡುವಂತೆ ಒತ್ತಾಯ ಕೇಳಿ ಬಂದಿತ್ತು. ಪ್ರವಾಹ, ಹಾನಿ, ಪ್ರಕೃತಿ ಹಾನಿ, ಪ್ರಕೃತಿ ವಿಕೋಪ, ಬೆಳೆ ನಷ್ಟದ ಪರಿಹಾರ, ಎನ್.ಡಿ.ಆರ್.ಎಫ್ ಮಾನದಂಡ ಕಳೆದ ಎಂಟು ವರ್ಷಗಳಿಂದ ವೈಜ್ಞಾನಿಕವಾಗಿ ಪುನರ್ ಪರಿಶೀಲನೆ ಆಗಿಲ್ಲ ಎಂದು ರೈತ ಸಂಘದವರು ಹೇಳಿದ್ದರು. ಇದಾದ ಬೆನ್ನಲ್ಲೆ ರಾಜ್ಯ ಸರ್ಕಾರ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದ ರೈತರಿಗೆ ರಿಲೀಫ್ ನೀಡಿದೆ.
Good news to these farmers ಬೆಳೆ ಹಾನಿ ಎಕರೆಗೆ ಎಷ್ಟು ಪರಿಹಾರ ಸಿಗಲಿದೆ
ಸರ್ಕಾರ ಮತ್ತು ಎನ್.ಡಿ.ಆರ್.ಎಫ್ ಸೇರಿದಂತೆ ಖುಷ್ಕಿ ಜಮೀನಿನ ತಲಾ ಹೆಕ್ಟೇರ್ ಗೆ 17 ಸಾವಿರ ರೂಪಾಯಿ ನೀಡಲಾಗುವುದು. ಅದೇ ರೀತಿ ನೀರಾವರಿ ಜಮೀನಿಗೆ 17500 ರೂಪಾಯಿ ಪರಿಹಾರ ನೀಡಲಾಗುವುದು. ಬಹು ಬೆಳೆ ಬೆಳೆಯುವ ಜಮೀನಿಗೆ 31 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಲಾಗಿದೆ. ಆದರೆ ಹೆಚ್ಚಿನ ಮಳೆಯಿರುವುದರಿಂದ ಬೆಳೆ ಹಾನಿಯ ಜಂಟಿ ಸಮೀಕ್ಷೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯ ನಂತರ ಬೆಳೆ ಹಾನಿಯಾದ ಎಲ್ಲಾ 10 ಲಕ್ಷ ಹೆಕ್ಟೇರ್ ಗೆ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.
Good news to these farmers ಪರಿಹಾರ ಘೋಷಣೆಯಿಂದಾಗಿ ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ಗೆ 8,500 + 8,500 ಸೇರಿ 17,000 ರೂಪಾಯಿ, ನೀರಾವರಿ ಬೆಳೆಗಳಿಗೆ 17,000 + 8,500 ಸೇರಿ 25,500 ರೂಪಾಯಿ ಹಾಗೂ ಬಹು ವಾರ್ಷಿಕ ಬೆಳೆಗಳಿಗೆ 22,500 + 8,500 ಸೇರಿ 31,000 ರೂಪಾಯಿ ಪರಿಹಾರ ಸಿಗಲಿದೆ ಎಂದರು.
ಸತತ ಮಳೆಯಿಂದ ಇದೂವರೆಗೆ ಶೇ.50ರಷ್ಟು ಪ್ರದೇಶದಲ್ಲಿ ಮಾತ್ರ ಸಮೀಕ್ಷೆ ಕಾರ್ಯ ಮುಗಿದಿದೆ. ಉಳಿದೆಡೆ ಮಳೆ ತಗ್ಗಿದ ಬಳಿಕ ಕೂಡಲೆ ಜಂಟಿ ಸಮೀಕ್ಷೆ ಮಾಡಿ ಪರಿಹಾರ ಹಣವನ್ನು ರೈತರ ಖಾತೆಗೆ ಜಮೆ ಮಾಡುವಂತೆ ಸೂಚನೆ ನೀಡಿದ್ದೇನೆ. ಒಟ್ಟಾರೆಯಾಗಿ ಎನ್.ಡಿ.ಆರ್.ಎಫ್. ಮತ್ತು ಹೆಚ್ಚುವರಿ ಪರಿಹಾರ ಸೇರಿ ರಾಜ್ಯ ಸರ್ಕಾರದಿಂದ 2,000 ಕೋಟಿ ರೂಪಾಯಿಕ್ಕಿಂತ ಹೆಚ್ಚಿನ ಹಣ ರೈತರಿಗೆ ಪರಿಹಾರ ರೂಪದಲ್ಲಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದನ್ನೂ ಓದಿ : Crop loss compensation credit ಬೆಳೆ ಹಾನಿ ಪರಿಹಾರ ಎಕರೆಗೆ ಎಷ್ಟು ರೂಪಾಯಿ ಪರಿಹಾರ ಸಿಗಲಿದೆ ಇಲ್ಲಿದೆ ಮಾಹಿತಿ
ರಾಜ್ಯದಲ್ಲಿ ಜೂನ್ 1 ರಿಂದ ಸೆಪ್ಟೆಂಬರ್ 29ರ ವರೆಗೆ ಸರಾಸರಿಯಂತೆ 845 ಮಿ.ಮಿ. ಮಳೆಯಾಗಬೇಕಿತ್ತು. ಆದರೆ 879 ಮಿ.ಮಿ ಮಳೆಯಾಗಿದೆ. ವಾಡಿಕೆಗ್ಗಿಂತ ಶೇ.4ರಷ್ಟು ಮಳೆ ಮಾತ್ರ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟçದಿಂದ ಹೆಚ್ಚಿನ ನೀರು ಬಿಟ್ಟಿರುವ ಕಾರಣ ಮತ್ತು ಸತತ ಮಳೆಯಿಂದ ವಿಜಯಪುರ ಜಿಲ್ಲೆಯಲ್ಲಿ-58, ಬಾಗಲಕೋಟೆ-37, ಕಲಬುರಗಿ-34, ಯಾದಗಿರಿ-29, ಬೆಳಗಾವಿ-26, ರಾಯಚೂರು-21, ಗದಗ-17 ಹಾಗೂ ಬೀದರ ಜಿಲ್ಲೆಯಲ್ಲಿ ಶೇ.16ರಷ್ಟು ಹೆಚ್ಚುವರಿ ಮಳೆಯಿಂದಾಗಿ ಪ್ರಾಥಮಿಕ ಅಂದಾಜಿನ ಪ್ರಕಾರ 8,88,953 ಹೆಕ್ಟೇರ್ ಕೃಷಿ ಮತ್ತು 71,624 ತೋಟಗಾರಿಕೆ ಬೆಳೆಗಳು ಹಾನಿಗೊಳಗಾಗಿವೆ. ರಾಜ್ಯದಲ್ಲಿ ಹಾನಿಯಾದ 10 ಲಕ್ಷ ಹೆಕ್ಟೇರ್ ಪ್ರದೇಶಗಳ ಪೈಕಿ ಉತ್ತರ ಕರ್ನಾಟಕದ ಈ ಜಿಲ್ಲೆಗಳಲ್ಲಿಯೇ ಶೇ.90ರಷ್ಟು ಹಾನಿಯಾಗಿದೆ ಎಂದು ಮುಖ್ಯಮಂತ್ರಿಗಳು ಉತ್ತರ ಕರ್ನಾಟಕದ ಮಳೆ ಹಾನಿ ಸ್ಥಿತಿ ವಿವರಿಸಿದರು.
Good news to these farmers ಇಂದಿಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಪ್ರದೇಶದ ಸಚಿವರೊಂದಿಗೆ ವಿಜಯಪುರ, ಕಲಬುರಗಿ, ಬೀದರ, ಯಾದಗಿರಿ ಜಿಲ್ಲೆಯ ವೈಮಾನಿಕ ಸಮೀಕ್ಷೆ ನಡೆಸಿದ್ದು, ಜಮೀನುಗಳು ಕೆರೆಗಳಾಗಿ ಮಾರ್ಪಟ್ಟಿವೆ. ರಸ್ತೆ ಸಂಪರ್ಕ ಕಡಿತಗೊಂಡಿವೆ, ಸೇತುವೆ ಹಾಳಾಗಿವೆ, ಅನೇಕ ಮೂಲಸೌಕರ್ಯ ಹಾನಿಯಾಗಿದ್ದು ಕಂಡುಬAದಿದೆ. ರೈತರು ಎರಡೆರೆಡು ಬಾರಿ ಬೆಳೆದರು ಫಲ ಸಿಕ್ಕಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಸಹ ಈ ಪ್ರದೇಶಕ್ಕೆ ಹೆಚ್ಚುವರಿಯಾಗಿ ಪರಿಹಾರ ನೀಡಬೇಕು. ಜಂಟಿ ಸಮೀಕ್ಷೆ ಮುಗಿದ ನಂತರ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದಾದ್ಯಂತ ಇದೂವರೆಗೆ 52 ಜನ ಮಾನವ ಹಾನಿಯಾಗಿದ್ದು, 422 ಜಾನುವಾರುಗಳು ಮಳೆಗೆ ಕೊಚ್ಚಿ ಹೋಗಿವೆ. ಎಲ್ಲದಕ್ಕೂ ಪರಿಹಾರ ನೀಡಲಾಗಿದೆ. 547 ಪೂರ್ಣ ಪ್ರಮಾಣದಲ್ಲಿ ಮನೆ ಹಾನಿಯಾಗಿದ್ದು, ತಲಾ 1.20 ಲಕ್ಷ ರೂಪಾಯಿಗಳಂತೆ ಮತ್ತು ಭಾಗಶ: ಮನೆ ಹಾನಿಯಾದ 75 ಪ್ರಕರಣಗಳಲ್ಲಿ ತಲಾ 50 ಸಾವಿರ ರೂಪಾಯಿಗಳಂತೆ ಪರಿಹಾರ ನೀಡಲಾಗಿದೆ. 3,881 ಮನೆಗಳು ಶೇ.15 ರಿಂದ 25ರಷ್ಟು ಹಾನಿಗೊಳಗಾಗಿದ್ದು, ಮನೆ ಮಾಲೀಕರಿಗೆ 6,500 ರೂಪಾಯಿಗಳಂತೆ ಪರಿಹಾರ ನೀಡಲಾಗಿದೆ. ಮನೆಗೆ ನೀರು ನುಗ್ಗಿ ಆಹಾರ ಧಾನ್ಯ, ಗೃಹಪಯೋಗಿ ವಸ್ತುಗಳ ಹಾನಿಗೆ ಇದುವರೆಗೆ 2.50 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಪರಿಹಾರ ವಿತರಣೆ ಕಾರ್ಯ ನಿರಂತರವಾಗಿರಲಿದೆ ಎಂದರು.
117 ಗ್ರಾಮಕ್ಕೆ ತೊಂದರೆ, 80 ಕಾಳಜಿ ಕೇಂದ್ರ ಸ್ಥಾಪನೆ: ತೀವ್ರ ಅತಿವೃಷ್ಠಿಗೆ ಒಳಗಾದ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹದಿಂದ 117 ಗ್ರಾಮಗಳು ತೊಂದರೆಗೀಡಾಗಿದ್ದು, ಕಲಬುರಗಿ-56, ವಿಜಯಪುರ-17 ಹಾಗೂ ಯಾದಗಿರಿಯಲ್ಲಿ 7 ಸೇರಿದಂತೆ ಒಟ್ಟಾರೆ 80 ಕಾಳಜಿ ಕೇಂದ್ರ ತೆರೆದು 10,576 ಜನ ಸಂತ್ರಸ್ತರಿಗೆ ಊಟೋಪಚಾರದ ಜೊತೆಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ ಎಂದು ಸಿ.ಎಂ. ಸಿದ್ದರಾಮಯ್ಯ ತಿಳಿಸಿದರು.





