Krishi Deploma Agriculture college : ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಕೃಷಿ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಬೆಂಗಳೂರು, ಬೀದರ್ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯಗಳಿಂದ ಅರ್ಜಿ ಆಹ್ವಾನಿಸಿಲಾಗಿದೆ. ಅರ್ಜಿ ಎಲ್ಲಿ ಸಲ್ಲಿಸಬೇಕು. ಯಾವ ಯಾವ ದಾಖಲೆ ಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ರಾಯಚೂರು ಕೃಷಿ ವಿಶ್ವವಿದ್ಯಾಲಯ ಅಧೀನದ ಬೀದರ್ ತಾಲೂಕಿನ ಜನವಾಡ ಸಮೀಪದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಾಲೇಜಿನಲ್ಲಿ 2026-27ನೇ ಸಾಲಿಗೆ ಎರಡು ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
2026ರ ಜೂನ್ 25 ಕ್ಕೆ 20 ವರ್ಷ ಮೀರಿದ ಎಸ್ಎಸ್ಎಲ್ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನಿಷ್ಠ 45 ರಷ್ಟು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಪ್ರವರ್ಗ 1 ಶೇ. 40) ಅಂಕ ಪಡೆದವರು ಜೂನ್ 25 ರ ಒಳಗೆ ಅರ್ಜಿ ಸಲ್ಲಿಸಬಹುದು. ರೈತರು ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸ್ಥಾನಗಳು ಮೀಸಲಿವೆ.
ಅರ್ಹರು ರಾಯಚೂರು ಕೃಷಿ ವಿಶ್ವನಿದ್ಯಾಲಯ ವೆಬ್ಸೈಟ್
https://uasraichur.karnataka.gov.in/
ನಿಂತದ ಜೂನ್ 25 ರೊಳಗೆ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ ಶೈಕ್ಷಣಿಕ ದಾಖಲೆ ಹಾಗೂ ಡಿ.ಡಿ. ಯೊಂದಿಗೆ ಕುಲಸಚಿವರು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಿಂಗಸೂರ್ ರಸ್ತೆ, ರಾಯಚೂರು 584104 ವಿಳಾಸಕ್ಕೆ ಸಲ್ಲಿಸಬೇಕು ಎಂದು ಕಾಲೇಜಿನ ಸಂಯೋಜಕ ಡಾ ಜೈನೋದ್ದೀನ್ ಮುಲ್ಲಾ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8861845057 ಅಥವಾ 8892589036 ಗೆ ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.
Krishi Deploma Agriculture college : ಕೃಷಿ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ ಚಿಂತಾಮಣಿಯ ರೇಷ್ಮೆ ಕೃಷಿ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ 2 ವರ್ಷಗಳ ಡಿಪ್ಲೋಮಾ (ಕೃಷಿ) ಕೋರ್ಸ್ ಗೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜೂನ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50 ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ. ಅರ್ಜಿ ಹಾಗೂ ಮಾಹಿತಿ ಪುಸ್ತಕವನ್ನು ವಿಶ್ವ ವಿದ್ಯಾಲಯದ ವೆಬ್ಸೈಟ್ www.uasbangalore.edu.in
ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.
Krishi Deploma Agriculture college : ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
ಎಸ್ಎಸ್ಎಲ್ಸಿ ಅಂಕಪಟ್ಟಿ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಕೃಷಿಕರ ಮಕ್ಕಳಾಗಿದ್ದಲ್ಲಿ ಅದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರ ನೀಡಬೇಕು. ಆಧಾರ್ ಕಾರ್ಡ್ ಮತ್ತು ಇತ್ಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇರಬೇಕು.

Krishi Deploma Agriculture college : ಕೃಷಿ ವಿಶ್ವವಿದ್ಯಾಲಯ ಧಾರವಾಡದಲ್ಲಿಯೂ ಸಹ 2026-27ನೇ ಸಾಲಿಗೆ 2 ವರ್ಷದ ಡಿಪ್ಲೋಮಾ (ಕೃಷಿ) ಕೋರ್ಸಿಗೆ ಅರ್ಜಿ ಆಹ್ವಾನಿಸಲಾಗಿದೆ.
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಥವಾ ಪ್ರವರ್ಗ -1 ರ ಅಭ್ಯರ್ಥಿಗಳಿಗೆ 250 ರೂಪಾಯಿ ಅಱ್ಜಿ ಶುಲ್ಕ ಪಾವತಿಸಬೇಕು. ಕನ್ನಡ ಮಾಧ್ಯದ ವಿದ್ಯಾರ್ಥಿಗಳಿದ್ದರೆ ಕನ್ನಡ ಮಾಧ್ಯಮ ಅಭ್ಯರ್ಥಿ ಪ್ರಮಾಣ ಪತ್ರ, (1 ರಿಂದ 10ನೇ ತರಗತಿ) ಗ್ರಾಮೀಣ ಪ್ರದೇಶ ವ್ಯಾಸಂಗ ಪ್ರಮಾಣ ಪತ್ರ (1 ರಿಂದ 10ನೇ ತರಗತಿ) ಎನ್.ಸಿಸಿ, ಕ್ರೀಡೆ, ಸ್ಕೌಟ್ಸ್ ಆಯಿಂಡ್ ಗೈಡ್, ಮಾಜಿ ಸೈನಿಕರ ಮಕ್ಕಳಿದ್ದರೆ ದಾಖಲೆ ಸಲ್ಲಿಸಬೇಕು. ಅಂಗವಿಕಲರಿಗೂ ಮೀಸಲಾತಿ ಇದೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವೂ ಇದೆ.
ಇದನ್ನೂ ಓದಿ Grahalakshmi 30th installment credited ಈ ಮಹಿಳೆಯರಿಗೆ ಕೊನೆಗೂ ಜಮೆಯಾಯಿತು ಗೃಹಲಕ್ಷ್ಮೀ 30ನೇ ಕಂತಿನ ಹಣ
Krishi Deploma Agriculture college : ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ಕೃಷಿ ಡಿಪ್ಲೋಮಾ ಕಾಲೇಜಿನಲ್ಲಿ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಾಲೇಜಿಗೆ ಸಂಪರ್ಕಿಸಬಹುದು.





