Bele hani pariahra status check ಅತಿವೃಷ್ಠಿಯಿಂದ ಬೆಳೆ ಹಾನಿ: 1,033 ಕೋಟಿ ರೂ. ಇನ್ಪುಟ್ ಸಬ್ಸಿಡಿ ಬಿಡುಗಡೆ

Written by Admin

Published on:

Spread the love

Bele hani pariahra status check : ರಾಜ್ಯದಾದ್ಯಂತ ಕಳೆದ ಜೂನ್ ರಿಂದ ಸೆಪ್ಟೆಂಬರ್ ಮಾಹೆಯಲ್ಲಿ ಅತಿವೃಷ್ಠಿ ಮತ್ತು ವ್ಯಾಪಕ ಮಳೆಯಿಂದ 12.11 ಲಕ್ಷಕ್ಕೂ ಹೆಚ್ಚಿನ ಹೆಕ್ಟೇರ್ ಪ್ರಮಾಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಎಸ್.ಡಿ.ಆರ್.ಎಫ್./ ಎನ್.ಡಿ.ಆರ್.ಎಫ್. ಪರಿಹಾರದ ಜೊತೆಗೆ ಪ್ರತಿ ಹೆಕ್ಟೇರ್‌ಗೆ ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿ ವಿಶೇಷ ಪ್ಯಾಕೇಜ್ ಯೋಜನೆಯಡಿ ಹೆಚ್ಚುವರಿಯಾಗಿ ಪ್ರತಿ ಹೆಕ್ಟೇರ್‌ಗೆ 8,500 ರೂ. ಇನ್ಪುಟ್ ಸಬ್ಸಿಡಿಯ ಒಟ್ಟು 1,033 ಕೋಟಿ ರೂ. ಬೆಳೆ ಪರಿಹಾರ ವಿತರಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದರು.

ಬೆಂಗಳೂರಿನಿAದ ವಿಡಿಯೋ ಕಾನ್ಫೆರೆನ್ಸ್ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಬೆಳೆ ಪರಿಹಾರ ಹಣ ಬಿಡುಗಡೆ ಮಾಡಿದ ಅವರು, ಎರಡು ದಿನದಲ್ಲಿ ರೈತರ ಬ್ಯಾಂಕ್ ಹಣ ಜಮೆ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೆ ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ರಾಜ್ಯದಾದ್ಯಂತ 14,24,124 ರೈತರಿಗೆ 1,218.03 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದ್ದು, ಪಾವತಿ ಪ್ರಕ್ರಿಯೆಯಲ್ಲಿದೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಇಂದಿಲ್ಲಿ ಹೆಚ್ಚುವರಿಯಾಗಿ 1,033.60 ಕೋಟಿ ರೂ. ಪರಿಹಾರ ಹಣ ಬಿಡುಗಡೆ ಮಾಡಿದೆ ಎಂದರು.

ಇದನ್ನೂ ಓದಿ Vegetable seeds kit distribution: 20 ಸಾವಿರ ರೂಪಾಯಿಯ ತರಕಾರಿ ಬೀಜ ಕೀಟ್‌ಗಳನ್ನು ವಿತರಣೆಗೆ ಅರ್ಜಿ ಆಹ್ವಾನ

2025ರ ನೈರುತ್ಯ ಮುಂಗಾರಿನ ಅವಧಿಯಲ್ಲಿ ರಾಜ್ಯದಾದ್ಯಂತ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟçದಿಂದ ಹೆಚ್ಚಿನ ನೀರು ಬಿಟ್ಟಿರುವ ಕಾರಣ ಮತ್ತು ಸತತ ಮಳೆಯಿಂದ ವಿಜಯಪುರ, ಬಾಗಲಕೋಟೆ, ಬೀದರ, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು, ಗದಗ, ಧಾರವಾಡ ಜಿಲ್ಲೆಗಳಲ್ಲಿ ಅತಿವೃಷ್ಠಿ ಮತ್ತು ನೆರೆ ಹಾನಿಯಿಂದ ಸಾಕಷ್ಟು ಬೆಳೆ ಹಾನಿಯಾಗಿತ್ತು.

ಯಾವ ರೈತರಿಗೆ ಯಾರಿಗೆ ಬೆಳೆ ಪರಿಹಾರ ಎಷ್ಟು ಸಿಗಲಿದೆ ?

ಈ ಸಂಬAಧ ಕಳೆದ ಸೆಪ್ಟೆಂಬರ್ 30 ರಂದು ಉತ್ತರ ಕರ್ನಾಟಕ ಭಾಗದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಕಲಬುರಗಿಯಲ್ಲಿ ವಿಶೇಷ ಸಭೆ ಕರೆದು ಅಲ್ಲಿ ಮಳೆಯಾಶ್ರಿತ ಪ್ರತಿ ಹೆಕ್ಟೇರ್‌ಗೆ 8,500 + 8,500 ಸೇರಿ 17,000 ರೂ., ನೀರಾವರಿ ಬೆಳೆಗಳಿಗೆ 17,000 + 8,500 ಸೇರಿ 25,500 ರೂ. ಹಾಗೂ ಬಹು ವಾರ್ಷಿಕ ಬೆಳೆಗಳಿಗೆ 22,500 + 8,500 ಸೇರಿ 31,000 ರೂ. ಪರಿಹಾರ ಘೋಷಿಸಲಾಗಿತ್ತು. ಅದರಂತೆ ಇಂದು ವಿಶೇಷ ಪ್ಯಾಕೇಜಿನ ಪರಿಹಾರ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಕAದಾಯ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯದಾದ್ಯಂತ ಹೆಚ್ಚುವರಿ ಮಳೆ ಮತ್ತು ನೆರೆ ಹಾವಳಿಯಿಂದ ಅತಿವೃಷ್ಠಿ ಮತ್ತು ನೆರೆ ಹಾವಳಿಯ ಅಪಾರ ಪ್ರಮಾಣದ ಬೆಳೆ ಹಾನಿ ಜೊತೆಗೆ ಮೂಲಸೌಕರ್ಯ ಸಹ ಹಾನಿಯಾಗಿದೆ. ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ಸ್ಪಂದನೆ ಮತ್ತು ಪರಿಹಾರ ಯೋಜನೆಯಡಿ 614.90 ಕೋಟಿ ರೂ. ಮತ್ತು ಪುನ:ಸ್ಥಾಪನೆ ಮತ್ತು ಪುನನಿರ್ಮಾಣ ಅಡಿಯಲ್ಲಿ 1,521.67 ಕೋಟಿ ರೂ. ಹಣ ರಾಜ್ಯಕ್ಕೆ ಬಿಡುಗಡೆ ಮಾಡುವಂತೆ ಇತ್ತೀಚೆಗೆ ಪ್ರಧಾನಮಂತ್ರಿಗಳನ್ನು ಮತ್ತು ಕೃಷಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಶೀಘ್ರವೇ ಕೇಂದ್ರದಿAದ ಅಧ್ಯಯನ ತಂಡ ಆಗಮಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ತಿಳಿಸಿದರು.

ಕಲಬುರಗಿ ರೈತರೊಂದಿಗೆ ಸಿ.ಎಂ. ಮಾತು: ವಿಡಿಯೋ ಕಾನ್ಫೆರೆನ್ಸ್ ಮೂಲಕ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎನ್.ಡಿ.ಆರ್.ಎಫ್./ ಎಸ್.ಡಿ.ಆರ್.ಎಫ್. ಈಗಾಗಲೆ ನಡಿ ಬೆಳೆ ಪರಿಹಾರ ಹಣ ಪಡೆದಿರುವ ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ನಾವದಗಿ ಗ್ರಾಮದ ಚಂದ್ರಶೇಖರ ಹರಸೂರ, ಟೆಂಗಳಿ ಗ್ರಾಮದ ಓಂಪ್ರಕಾಶ ಹೆಬ್ಬಾಳ ಹಾಗೂ ಕೋಡ್ಲಿ ಗ್ರಾಮದ ಸಿದ್ದಪ್ಪ ಕೋಡ್ಲಿ ಅವರೊಂದಿಗೆ ಚರ್ಚಿಸಿ ಬೆಳೆ ಪರಿಹಾರ ಹಣ ಜಮೆಯಾಗಿರುವ ಬಗ್ಗೆ ವಿಚಾರಿಸಿದರು. ಈಗಾಗಲೆ ತಮ್ಮ ಖಾತೆಗೆ ಹಣ ಜಮೆಯಾಗಿದೆ, ಸಕಾಲದಲ್ಲಿ ಪರಿಹಾರ ಹಣ ಬಿಡುಗಡೆ ಮಾಡಿ ರೈತರ ಹಿತ ಕಾಯ್ದಿರುವ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದ ಅರ್ಪಿಸುವುದಾಗಿ ರೈತರು ತಿಳಿಸಿದರು.

 

ಜಿಲ್ಲೆಗೆ 498.73 ಕೋಟಿ ರೂ. ಅತಿವೃಷ್ಠಿ ಪರಿಹಾರ: ಅತಿವೃಷ್ಠಿ ಮತ್ತು ನೆರೆ ಹಾನಿಯಿಂದ ಕಲಬುರಗಿ ಜಿಲ್ಲೆಯಲ್ಲಿ ಒಟ್ಟಾರೆ 2,91,381.52 ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದು, ಈಗಾಗಲೆ 3,23,318 ರೈತರಿಗೆ 250.97 ಕೋಟಿ ರೂ. ಎಸ್.ಡಿ.ಆರ್.ಎಫ್./ ಎನ್.ಡಿ.ಆರ್.ಎಫ್. ಮಾರ್ಗಸೂಸಿಯಂತೆ ಪರಿಹಾರ ಹಣ ಬಿಡುಗಡೆ ಮಾಡಿದ್ದು, ಪಾವತಿ ಪ್ರಕ್ರಿಯೆಯಲ್ಲಿದೆ. ಇದರ ಜೊತೆಗೆ ಇಂದಿಲ್ಲಿ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ 247.75 ಕೋಟಿ ರೂ. ಬಿಡುಗಡೆ ಮಾಡಿದ್ದು, ಒಟ್ಟಾರೆಯಾಗಿ ಜಿಲ್ಲೆಗೆ 498.73 ಕೋಟಿ ರೂ. ಪರಿಹಾರ ಬಿಡುಗಡೆಯಾದಂತಾಗಿದೆ.

ವರ್ಚುವಲ್ ಸಭೆಯಲ್ಲಿ ಬೆಂಗಳೂರಿನಿAದ ಮುಖ್ಯಮಂತ್ರಿಗಳ ಜೊತೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ, ಸಣ್ಣ ನೀರಾವರಿ ಸಚಿವ ಎನ್.ಭೋಸರಾಜು, ಅರಣ್ಯ ಸಚಿವ ಈಶ್ವರ ಖಂಡ್ರೆ ಸೇರಿದಂತೆ ಅನೇಕ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಭಾಗಿಯಾಗಿದ್ದರು. ಇತ್ತ ಕಲಬುರಗಿಯಿಂದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಕೃಷಿ ಉಪನಿರ್ದೇಶಕಿ ಅನುಸೂಯಾ ಹೂಗಾರ ಭಾಗವಹಿಸಿದ್ದರು.

Leave a Comment